ನವದೆಹಲಿ : Government Pension Scheme: ಕುಟುಂಬ ಪಿಂಚಣಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮವನ್ನು ಹೊರಡಿಸಿದೆ.  ಹೊಸ  ನಿಯಮಗಳ  ಪ್ರಕಾರ, ಮರಣ ಹೊಂದಿದ ಸರ್ಕಾರಿ ನೌಕರರ,  ಮಾನಸಿಕ ವಿಕಲಾಂಗ ಮಕ್ಕಳಿಗೂ ಕುಟುಂಬ ಪಿಂಚಣಿಯ  (Family pension) ಪ್ರಯೋಜನ ಸಿಗಲಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ಕೂಡ ಕುಟುಂಬ ಪಿಂಚಣಿಗೆ ಅರ್ಹರಾಗಿರುತ್ತಾರೆ (Deceased Government Employee).


COMMERCIAL BREAK
SCROLL TO CONTINUE READING

ಕುಟುಂಬ ಪಿಂಚಣಿ (Family pension) ಲಭ್ಯವಿಲ್ಲದ ಕಾರಣ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪಾಲನೆ ಮತ್ತು ಜೀವನಶೈಲಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮಕ್ಕಳು ಇತರರನ್ನು ಅವಲಂಬಿಸಬೇಕಾಗಿರುತ್ತದೆ.  


ಇದನ್ನೂ ಓದಿ : Royal Enfieldನ ಅತ್ಯಂತ ಅಗ್ಗದ ಮೋಟಾರ್‌ಸೈಕಲ್..! ನಿಮ್ಮ ಬಜೆಟ್‌ಗೆ ಸರಿಹೊಂದುವ ಬೈಕ್


ಕೇಂದ್ರ ಸಚಿವರು ನೀಡಿದ ಮಾಹಿತಿ : 
ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jithendra Sing) ಮಾತನಾಡಿ, ಮಾನಸಿಕ ಅಸ್ವಸ್ಥರಾಗಿರುವ ಮಕ್ಕಳಿಗೆ ಕುಟುಂಬ ಪಿಂಚಣಿಯ ಲಾಭವನ್ನು ಬ್ಯಾಂಕ್‌ಗಳು (Bank) ನೀಡುತ್ತಿಲ್ಲ ಎಂಬುದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಜನರೊಂದಿಗೆ ನಡೆಸಿದ ಸಂವಾದದಲ್ಲಿ ತಿಳಿದು ಬಂದಿದೆ. ಬ್ಯಾಂಕ್‌ಗಳು ಈ ಮಕ್ಕಳಿಂದ ನ್ಯಾಯಾಲಯ ನೀಡುವ  ಗಾರ್ಡಿಯನ್ ಶಿಪ್ ಸರ್ಟಿಫಿಕೆಟ್ (Guardianship Certificate) ಕೇಳುತ್ತಿವೆ. ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರವು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿದೆ ಎಂದವರು ಹೇಳಿದ್ದಾರೆ. 


ಕುಟುಂಬ ಪಿಂಚಣಿಯಲ್ಲಿ ನಾಮಿನೇಷನ್ ಅಗತ್ಯ :
ನೌಕರರ ಮಕ್ಕಳಿಗೆ ಯಾವುದೇ ಅಡಚಣೆಯಿಲ್ಲದೆ ಪಿಂಚಣಿ ಪಡೆಯಲು ಅನುಕೂಲವಾಗುವಂತೆ, ಕುಟುಂಬ ಪಿಂಚಣಿಯಲ್ಲಿ ನಾಮನಿರ್ದೇಶನವನ್ನು (family pension nomination) ಒದಗಿಸುವುದು ಅಗತ್ಯವಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ಸಹ,  ನ್ಯಾಯಾಲಯದಿಂದ ಗಾರ್ಡಿಯನ್ ಶಿಪ್ ಸರ್ಟಿಫಿಕೆಟ್ ಅನ್ನು ಸುಲಭವಾಗಿ ಪಡೆಯುವಂತೆ ಈ ಕೆಲಸವನ್ನು ಸರಳೀಕರಿಸಲಾಗಿದೆ. ಮೃತ ಸರ್ಕಾರಿ ನೌಕರನ ಮಕ್ಕಳಿಗೆ ನ್ಯಾಯಾಲಯದಿಂದ ನೀಡಲಾಗುವ ಪ್ರಮಾಣಪತ್ರದ ಆಧಾರದ ಮೇಲೆ,  ಕುಟುಂಬ ಪಿಂಚಣಿ ನೀಡಲಾಗುತ್ತದೆ. ಈಗ ಬ್ಯಾಂಕುಗಳು    ಪ್ರಮಾಣಪತ್ರಕ್ಕಾಗಿ ಮಕ್ಕಳನ್ನು ಒತ್ತಾಯಿಸುವಂತಿಲ್ಲ.  ಮೊದಲು ನ್ಯಾಯಾಲಯದಿಂದ ಪ್ರಮಾಣಪತ್ರವನ್ನು ಪಡೆಯುವಂತೆ ಹೇಳಿ, ಪಿಂಚಣಿ ನಿರಾಕರಿಸುವಂತಿಲ್ಲ.


ಇದನ್ನೂ ಓದಿ : PM Kisan Tractor Yojana : ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ ಸರ್ಕಾರದಿಂದ ಸಿಗಲಿದೆ ಶೇ.50 ರಷ್ಟು ಸಬ್ಸಿಡಿ!


ಪ್ರಮಾಣಪತ್ರ ಇಲ್ಲದಿದ್ದರೂ ಪಿಂಚಣಿ ನೀಡಬೇಕು :
ಈ ಪ್ರಕಟಣೆಯ ನಂತರ, ಯಾವುದೇ ಬ್ಯಾಂಕ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕುಟುಂಬ ಪಿಂಚಣಿ ನೀಡಲು ನಿರಾಕರಿಸಿದರೆ, ಅದು ಕೇಂದ್ರ ನಾಗರಿಕ ಸೇವಾ  ನಿಯಮ 2021 ರ ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಿದಂತಾಗುತ್ತದೆ. ಅಂದರೆ, ಅಂತಹ ಪರಿಸ್ಥಿತಿಯಲ್ಲಿ, ಬ್ಯಾಂಕ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. 


ಬ್ಯಾಂಕ್‌ಗಳಿಗೂ ಸೂಚನೆ : 
ಈ ಪ್ರಕಟಣೆಯ ನಂತರ, ಪಿಂಚಣಿ ವಿತರಿಸುವ ಎಲ್ಲಾ ಬ್ಯಾಂಕ್‌ಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸರ್ಕಾರದಿಂದ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಮಾನಸಿಕ ಅಸ್ವಸ್ಥ ಮಕ್ಕಳು ಕುಟುಂಬ ಪಿಂಚಣಿಯ ಪ್ರಯೋಜನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ತಮ್ಮ ಸೆಂಟ್ರಲೈಸೆಡ್ ಪೆನ್ಷನ್ ಪ್ರೊಸೆಸಿಂಗ್ ಸೆಂಟರ್,  ಪಿಂಚಣಿ ಪಾವತಿ ಶಾಖೆಗೆ ಸೂಚನೆ ನೀಡುವಂತೆ ಸರ್ಕಾರವು ನಿರ್ದೇಶಕರನ್ನು ಕೇಳಿದೆ. ಈ ಪಿಂಚಣಿಯನ್ನು ನಾಮಿನಿ ಮೂಲಕ ಆ ಮಕ್ಕಳಿಗೆ ನೀಡಲಾಗುವುದು. ಇದು ಯಾವುದೇ ಸಂಸ್ಥೆಯು ನಿರಾಕರಿಸಲಾಗದ ಶಾಸನಬದ್ಧ ನಿಬಂಧನೆಯಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.