Pension New Rule: ಬಿಗ್ ನ್ಯೂಸ್ ! ಫ್ಯಾಮಿಲಿ ಪೆನ್ಷನ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ

Pension Scheme: ಮರಣ ಹೊಂದಿದ ಸರ್ಕಾರಿ ನೌಕರರ  (Central Government Employees) ಮಾನಸಿಕ ವಿಕಲಚೇತನರ ಮಕ್ಕಳಿಗೂ ಕುಟುಂಬ ಪಿಂಚಣಿ (EPFO Pensioners) ಸೌಲಭ್ಯ ದೊರೆಯಲಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ಕೂಡ ಕುಟುಂಬ ಪಿಂಚಣಿಗೆ ಅರ್ಹರಾಗಿರುತ್ತಾರೆ.

Written by - Nitin Tabib | Last Updated : Jan 31, 2022, 10:15 PM IST
  • ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ ಪ್ರಕಟವಾಗಿದೆ.
  • ಕುಟುಂಬ ಪಿಂಚಣಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದೆ.
  • ಈಗ ಮಾನಸಿಕ ಅಸ್ವಸ್ಥತೆ ಹೊಂದಿರುವ ಮಕ್ಕಳೂ ಪಿಂಚಣಿಗೆ ಅರ್ಹರಾಗಿದ್ದಾರೆ
Pension New Rule: ಬಿಗ್ ನ್ಯೂಸ್ ! ಫ್ಯಾಮಿಲಿ ಪೆನ್ಷನ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ title=
Pension Scheme (File Photo)

Pension Scheme: ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಕುಟುಂಬ ಪಿಂಚಣಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮವನ್ನು ಹೊರಡಿಸಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಜಿತೇಂದ್ರ ಸಿಂಗ್ ಹೇಳಿರುವ ಪ್ರಕಾರ, ಮರಣ ಹೊಂದಿದ ಸರ್ಕಾರಿ ನೌಕರರ ಮಾನಸಿಕ ವಿಕಲಚೇತನ ಮಕ್ಕಳೂ ಕೂಡ ಇದೀಗ ಕುಟುಂಬ ಪಿಂಚಣಿ (ESIC Pension Scheme)ಪ್ರಯೋಜನ ಪಡೆಯಲಿದ್ದಾರೆ. ಅಂದರೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ಕೂಡ ಕುಟುಂಬ ಪಿಂಚಣಿಗೆ  (Family Pension) ಅರ್ಹರಾಗಿರುತ್ತಾರೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕುಟುಂಬ ಪಿಂಚಣಿ (Pension Scheme) ಲಾಭ ಸಿಗದ ಕಾನ ಅವರ ಪಾಲನೆ ಮತ್ತು ಪೋಷಣೆಗಾಗಿ ತೊಂದರೆಗಳು ಎದುರಾಗುತ್ತವೆ. ಏಕೆಂದರೆ ಅವರು ಇದಕ್ಕಾಗಿ ಅಸಮರ್ಥರಾಗಿರುತ್ತಾರೆ. ಹೀಗಾಗಿ ಈ ಮಕ್ಕಳು ಪಾಲನೆ ಪೋಷಣೆಗಾಗಿ ಇತರರ ಮೇಲೆ ಅವಲಂಭಿತರಾಗಿರುತ್ತಾರೆ. 

ಮಾಹಿತಿ ನೀಡಿದ ಕೇಂದ್ರ ಸಚಿವರು
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್,  'ಇಂತಹ ಮಕ್ಕಳಿಗೆ ಕುಟುಂಬ ಪಿಂಚಣಿಯ ಲಾಭವನ್ನು ಬ್ಯಾಂಕ್‌ಗಳು ನೀಡುತ್ತಿಲ್ಲ ಎಂಬುದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಜನರೊಂದಿಗೆ ಸಂವಾದದಲ್ಲಿ ತಿಳಿದು ಬಂದಿದೆ. ಇಂತಹ ಮಾನಸಿಕ ಅಸ್ವಸ್ಥತೆ ಇರುವ ಮಕ್ಕಳಿಗೆ ಪಿಂಚಣಿ ನೀಡಲು ಬ್ಯಾಂಕ್ ಗಳು ನಿರಾಕರಿಸುತ್ತಿವೆ. ಬ್ಯಾಂಕ್‌ಗಳು ಈ ಮಕ್ಕಳಿಂದ ನ್ಯಾಯಾಲಯ ನೀಡುವ ರಕ್ಷಕತ್ವ ಪ್ರಮಾಣಪತ್ರವನ್ನು ಕೇಳುತ್ತಿವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿದೆ ಮತ್ತು ಇದಕ್ಕಾಗಿ ಉತ್ತಮ ಆಡಳಿತದ ಮಂತ್ರವನ್ನು ಒತ್ತಿಹೇಳಲಾಗುತ್ತಿದೆ' ಎಂದು ಹೆಲಿದ್ದಾರೆ.

ಕುಟುಂಬ ಪಿಂಚಣಿಯಲ್ಲಿ ನಾಮನಿರ್ದೇಶನ ಅಗತ್ಯ
'ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡಲು, ನೌಕರರ ಮಕ್ಕಳು ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ಕುಟುಂಬ ಪಿಂಚಣಿಯಲ್ಲಿ ನಾಮನಿರ್ದೇಶನವನ್ನು ಒದಗಿಸುವುದು ಅಗತ್ಯವಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ಸಹ ನ್ಯಾಯಾಲಯದಿಂದ ರಕ್ಷಕತ್ವ ಪ್ರಮಾಣಪತ್ರವನ್ನು ಸುಲಭವಾಗಿ ಪಡೆಯಬಹುದು, ಅದನ್ನು ಸಹ ಸುಲಭಗೊಳಿಸಲಾಗಿದೆ. ಮೃತ ಸರ್ಕಾರಿ ನೌಕರನ ಮಕ್ಕಳು ನ್ಯಾಯಾಲಯದಿಂದ ಪ್ರಮಾಣಪತ್ರವನ್ನು ನೀಡಬೇಕು, ಅದರ ಆಧಾರದ ಮೇಲೆ ಕುಟುಂಬ ಪಿಂಚಣಿ ನೀಡಲಾಗುತ್ತದೆ. ಬ್ಯಾಂಕುಗಳು ಅಂತಹ ಮಕ್ಕಳಿಂದ ಪೋಷಕರ ಪ್ರಮಾಣಪತ್ರವನ್ನು ಒತ್ತಾಯಿಸುವಂತಿಲ್ಲ ಮತ್ತು ಅವರು ಮೊದಲು ನ್ಯಾಯಾಲಯದಿಂದ ಪ್ರಮಾಣಪತ್ರವನ್ನು ಪಡೆಯಬೇಕು ಎಂಬ ಕಾರಣಕ್ಕಾಗಿ ಪಿಂಚಣಿ ನಿರಾಕರಿಸುವಂತಿಲ್ಲ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ-Taxable Income ಇಲ್ದಿದ್ರೂ ಕೂಡ ತೆರಿಗೆ ಕಡಿತವಾಗುತ್ತದೆ, ಈ ರೀತಿ ರಿಫಂಡ್ ಪಡೆಯಿರಿ

ಪ್ರಮಾಣಪತ್ರ ಇಲ್ಲದಿದ್ದರೂ ಪಿಂಚಣಿ ನೀಡಬೇಕು
ಈ ಪ್ರಕಟಣೆಯ ನಂತರ, ಯಾವುದೇ ಬ್ಯಾಂಕ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳಿಗೆ  ನ್ಯಾಯಾಲಯವು ನೀಡುವ ಪೋಷಕರ ಪ್ರಮಾಣಪತ್ರವಿಲ್ಲದೆ, ಕುಟುಂಬ ಪಿಂಚಣಿ ನೀಡಲು ನಿರಾಕರಿಸಿದರೆ, ಅದು ಕೇಂದ್ರ ನಾಗರಿಕ ಸೇವಾ (ಪಿಂಚಣಿ) ನಿಯಮಗಳು, 2021 ರ ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ. ಅಂದರೆ, ಅಂತಹ ಪರಿಸ್ಥಿತಿಯಲ್ಲಿ, ಬ್ಯಾಂಕ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಗು ತನ್ನ ಪೋಷಕರ ಪಿಂಚಣಿ ಯೋಜನೆಯಲ್ಲಿ ನಾಮಿನಿಯಾಗದಿದ್ದರೆ ಮತ್ತು ನ್ಯಾಯಾಲಯದ ಪ್ರಮಾಣಪತ್ರವನ್ನು ಅವನಿಂದ ಕೇಳಿದರೆ, ಅದು ಪಿಂಚಣಿ ಉದ್ದೇಶಕ್ಕೆ ವಿರುದ್ಧವಾಗಿರುತ್ತದೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ-February 1 ರಿಂದ ಬ್ಯಾಂಕ್ ಗೆ ಸಂಬಂಧಿಸಿದ ಈ ನಿಯಮಗಳು ಬದಲಾಗುತ್ತಿವೆ, ನಿಮ್ಮ Budget ಬಿಗಡಾಯಿಸಬಹುದು

ಬ್ಯಾಂಕ್‌ಗಳಿಗೆ ಸೂಚನೆಗಳನ್ನು ನೀಡಲಾಗಿದೆ
ಈ ಪ್ರಕಟಣೆಯ ನಂತರ, ಪಿಂಚಣಿ ವಿತರಿಸುವ ಎಲ್ಲಾ ಬ್ಯಾಂಕ್‌ಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸರ್ಕಾರದಿಂದ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಮಾನಸಿಕ ಅಸ್ವಸ್ಥ ಮಕ್ಕಳು ಕುಟುಂಬ ಪಿಂಚಣಿಯ ಪ್ರಯೋಜನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ತಮ್ಮ ಕೇಂದ್ರೀಕೃತ ಪಿಂಚಣಿ ಸಂಸ್ಕರಣಾ ಕೇಂದ್ರ, ಪಿಂಚಣಿ ಪಾವತಿ ಶಾಖೆಗೆ ಸೂಚನೆ ನೀಡುವಂತೆ ಸರ್ಕಾರವು ನಿರ್ದೇಶಕರನ್ನು ಕೇಳಿದೆ. ಈ ಪಿಂಚಣಿಯನ್ನು ನಾಮಿನಿ ಮೂಲಕ ಆ ಮಕ್ಕಳಿಗೆ ನೀಡಲಾಗುವುದು. ಇದು ಯಾವುದೇ ಸಂಸ್ಥೆಯು ನಿರಾಕರಿಸಲಾಗದ ಶಾಸನಬದ್ಧ ನಿಬಂಧನೆಯಾಗಿದೆ. ಅಂತಹ ಮಕ್ಕಳಿಗೆ ನ್ಯಾಯಾಲಯದ ರಕ್ಷಕತ್ವ ಪ್ರಮಾಣಪತ್ರವನ್ನು ಬ್ಯಾಂಕ್‌ಗಳು ಕೇಳುವಂತಿಲ್ಲ. 

ಇದನ್ನೂ ಓದಿ-SBI Guideline: ಗರ್ಭಿಣಿ ಮಹಿಳೆಯರನ್ನು 'ಅನ್ ಫಿಟ್' ಎಂದು ಕರೆದ ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News