ನವದೆಹಲಿ: ರೈತರಿಗೆ  ಸಂತಸದ ಸುದ್ದಿ ಇಲ್ಲಿದೆ. ರೈತರ ಹಿತಕ್ಕಾಗಿ ಮತ್ತು ಆದಾಯ ಹೆಚ್ಚಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ (ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ) ಜೊತೆಗೆ ರಾಜ್ಯ ಸರ್ಕಾರವೂ ರೈತರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಈಗ ರಾಜ್ಯ ಸರ್ಕಾರ ರೈತರಿಗೆ 7000 ರೂ. ಆರ್ಥಿಕ ನೆರವು ನೀಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿರಿ.  


COMMERCIAL BREAK
SCROLL TO CONTINUE READING

ರಾಜ್ಯ ಸರ್ಕಾರದಿಂದ ರೈತರಿಗೆ ಆರ್ಥಿಕ ನೆರವು  


ಹರಿಯಾಣ ಸರ್ಕಾರ ತನ್ನ ರಾಜ್ಯದ ರೈತರಿಗೆ 7000 ರೂ.ಗಳ ಆರ್ಥಿಕ ನೆರವು ನೀಡುತ್ತಿದೆ. ರೈತರ ಬೇಸಾಯಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರು ಬೇಕಾಗುತ್ತದೆ ಮತ್ತು ದೇಶದಲ್ಲಿ ನೀರಿನ ಮಟ್ಟ ನಿರಂತರವಾಗಿ ಕ್ಷೀಣಿಸುತ್ತಿದೆ. ಅದಕ್ಕಾಗಿಯೇ ಹರಿಯಾಣ ಸರ್ಕಾರ ಈ ವಿಶೇಷ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯ ಹೆಸರು ‘ಮೇರಾ ಪಾನಿ ಮೇರಿ ವಿರಾಸತ್ ಯೋಜನೆ’(Mera Pani Meri Virasat Yojana 2022). ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ ತಕ್ಷಣವೇ ನಿಮ್ಮ ಹೆಸರನ್ನು ನೋಂದಾಯಿಸಬೇಕು.


ಇದನ್ನೂ ಓದಿ: New Wage Code : ಉದ್ಯೋಗಿಗಳಿಗೆ ಬಿಗ್ ನ್ಯೂಸ್ : ಜು.1 ರಿಂದ ವಾರದಲ್ಲಿ 3 ದಿನ ರಜೆ, ಪಿಎಫ್‌ನಲ್ಲಿ ಬದಲಾವಣೆ!


ಯೋಜನೆಯಿಂದ ಅನೇಕ ಪ್ರಯೋಜನಗಳು


ಈ ಯೋಜನೆಯಡಿ ರೈತರಿಗೆ ಜೋಳ, ಉದ್ದಿನಬೇಳೆ, ಹತ್ತಿ, ಎಳ್ಳು ಮತ್ತು ಹೆಸರು ಬೆಳೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯಲು ಪ್ರತಿ ಎಕರೆಗೆ 7 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ. ಅಂತರ್ಜಲ ಮಟ್ಟವನ್ನು ಉಳಿಸಲು, ಸೂಕ್ಷ್ಮ ನೀರಾವರಿಗೆ ಶೇ.80ರಷ್ಟು ಸಹಾಯಧನವನ್ನು ಸಹ ನೀಡಲಾಗುತ್ತದೆ.


ಫಲಾನುಭವಿ ನಿಯಮಗಳು ಮತ್ತು ಷರತ್ತುಗಳು


1) ಫಲಾನುಭವಿಯು ಹರಿಯಾಣದ ಖಾಯಂ ನಿವಾಸಿಯಾಗಿರುವುದು ಕಡ್ಡಾಯ


2) 50 Hz ಶಕ್ತಿಯ ಎಲೆಕ್ಟ್ರಿಕ್ ಮೋಟಾರು ಬಳಸುವ ರೈತರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ   


3) ರೈತರು ತಮ್ಮ ಹಿಂದಿನ ವರ್ಷದ ಭತ್ತದ ಉತ್ಪಾದನೆಯ ಶೇ.50ರಷ್ಟನ್ನು ವೈವಿಧ್ಯಗೊಳಿಸಬೇಕು


4) ರೈತರು ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡುವುದು ಕಡ್ಡಾಯ


ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ವೇತನದಲ್ಲಿ 40 ಸಾವಿರ ರೂ.ಗಳವರೆಗೆ ಹೆಚ್ಚಳ!


ಲಾಗಿನ್ ವಿಧಾನ


ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಅಧಿಕೃತ ವೆಬ್‌ಸೈಟ್ https://fasal.haryana.gov.in/farmer/farmerloginಗೆ ಹೋಗಬೇಕು. ನಂತರ ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಅನ್ನು ನಮೂದಿಸಬೇಕು. ಈಗ ನೀಡಿರುವ ಕ್ಯಾಪ್ಚಾವನ್ನು ನಮೂದಿಸುವ ಮೂಲಕ ಲಾಗಿನ್ ಮಾಡಬೇಕು.


ಈ ಸಂಖ್ಯೆಗಳನ್ನು ಸೇವ್ ಮಾಡಿಕೊಳ್ಳಿರಿ


ಟೋಲ್ ಫ್ರೀ ಸಂಖ್ಯೆ - 1800-180-2117


ವಿಳಾಸ - ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಕೃಷಿ ಭವನ, ಸೆಕ್ಟರ್ 21, ಪಂಚಕುಲ


ಇಮೇಲ್ ಐಡಿ - agriharyana2009@gmail.com, psfcagrihry@gmail.com


ದೂರವಾಣಿ ಸಂಖ್ಯೆ. 0172 -2571553, 2571544


ಫ್ಯಾಕ್ಸ್ ಸಂಖ್ಯೆ - 0172-2563242


ಕಿಸಾನ್ ಕಾಲ್ ಸೆಂಟರ್ – 18001801551


ಕರ್ನಾಟಕದ ರೈತರು ಸಹ ಸಂಬಂಧಿತ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಅನ್ನದಾತ’ರ ಅನುಕೂಲಕ್ಕೆ ರೂಪಿಸಿರುವ ಯೋಜನೆಗಳ ಮಾಹಿತಿ ಪಡೆದುಕೊಂಡು ಲಾಭ ಪಡೆದುಕೊಳ್ಳಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.