7th Pay Commission: ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ವೇತನದಲ್ಲಿ 40 ಸಾವಿರ ರೂ.ಗಳವರೆಗೆ ಹೆಚ್ಚಳ!

7th Pay Commission: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದ್ದು, ಜುಲೈ 1 ರಿಂದ ತುಟ್ಟಿಭತ್ಯೆ ಮತ್ತೊಮ್ಮೆ ಏರಿಕೆಯಾಗಲಿದೆ. ಎಐಸಿಪಿಐ ಅಂಕಿ ಅಂಶಗಳ ಪ್ರಕಾರ ಇದೀಗ ನೌಕರರ ತುಟ್ಟಿ ಭತ್ಯೆ ಶೇ.40ಕ್ಕೆ ತಲುಪಲಿದೆ. ಈ ಕುರಿತು ಯಾಗಾಗ ಘೋಷಣೆಯಾಗಲಿದೆ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jun 25, 2022, 04:22 PM IST
  • ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ!
  • ನೌಕರರ ಒಟ್ಟು ವೇತನದಲ್ಲಿ 40 ಸಾವಿರ ಏರಿಕೆ!
  • ತುಟ್ಟಿಭತ್ಯೆಯೂ ಕೂಡ ಶೇ.40 ಕ್ಕೆ ತಲುಪಲಿದೆ!
7th Pay Commission: ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ವೇತನದಲ್ಲಿ 40 ಸಾವಿರ ರೂ.ಗಳವರೆಗೆ ಹೆಚ್ಚಳ! title=
7th Pay Commission Latest News (File Photo)

7th Pay Commission: ಕೊನೆಗೂ ಕೇಂದ್ರ ನೌಕರರಿಗೆ ಸಂತಸದ ಸುದ್ದಿ ಪ್ರಕಟವಾಗಿದೆ . ಹೌದು, ಇದೀಗ ನೌಕರರ ವೇತನ 40 ಸಾವಿರ ರೂಪಾಯಿ ಹೆಚ್ಚಳವಾಗಲಿದೆ. ಸರ್ಕಾರವು ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನು ಹೆಚ್ಚಿಸಲು ಮುಂದಾಗಿದೆ. ಎಐಸಿಪಿಐನ ಇದುವರೆಗಿನ ಅಂಕಿ ಅಂಶಗಳ ಪ್ರಕಾರ ಶೇ.5ರಷ್ಟು ಡಿಎ ಹೆಚ್ಚಳಕ್ಕೆ ತೆರೆ ಎಳೆಯಲಾಗಿದೆ. ಆದರೆ ಮೇ ತಿಂಗಳ ಎಐಸಿಪಿಐ ಹಣದುಬ್ಬರ ಅಂಕಿ ಅಂಶ ಹೆಚ್ಚಾದರೆ, ಉದ್ಯೋಗಿಗಳ ಡಿಎ ಶೇ.6 ರಷ್ಟು ಹೆಚ್ಚಾಗಲಿದೆ. ಹಾಗಾದರೆ ಈ ಲೆಕ್ಕಾಚಾರದಲ್ಲಿ ನೌಕರರ ವೇತನ  ಎಷ್ಟು ಹೆಚ್ಚಾಗಲಿದೆ ತಿಳಿದುಕೊಳ್ಳೋಣ ಬನ್ನಿ.

ತುಟ್ಟಿಭತ್ಯೆ ಎಷ್ಟು ಹೆಚ್ಚಾಗುತ್ತದೆ?
DA ಹೆಚ್ಚಳವು AICPI ಸೂಚ್ಯಂಕವನ್ನು ಅವಲಂಬಿಸಿರುತ್ತದೆ. ಮಾರ್ಚ್ ಮತ್ತು ಏಪ್ರಿಲ್  2022 ತಿಂಗಳುಗಳಲಿ ಎಐಸಿಪಿಐ ಸೂಚ್ಯಂಕವು ಭಾರಿ ಏರಿಕೆಯಾಗಿದೆ, ಈ ಕಾರಣದಿಂದಾಗಿ ತುಟ್ಟಿಭತ್ಯೆ (ಡಿಎ) ಯಲ್ಲಿ ಶೇ.5ರಷ್ಟು ಹೆಚ್ಚಳ ಇದೀಗ ನಿಚ್ಚಳವಾಗಿದೆ. ಅಂದರೆ, ಉದ್ಯೋಗಿಗಳ ಡಿಎ ಶೇ.34ರಿಂದ ಶೇ.39ಕ್ಕೆ ಏರಿಕೆಯಾಗಲಿದೆ. ಆದರೆ ಈಗ ಹೊಸ ಅಂಕಿ ಅಂಶಗಳ ಪ್ರಕಾರ ಉದ್ಯೋಗಿಗಳ ಡಿಎ ಶೇ.6ರಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಎಐಸಿಪಿಐ ಸೂಚ್ಯಂಕ ಏನು ಹೇಳುತ್ತದೆ
ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ, ಎಐಸಿಪಿಐ ಸೂಚ್ಯಂಕದಲ್ಲಿ ಭಾರಿ ಕುಸಿತ ಕಂಡುಬಂದಿತ್ತು, ಆದರೆ ಅದರ ನಂತರ ಎಐಸಿಪಿಐ ಅಂಕಿಅಂಶಗಳು ನಿರಂತರ ಹೆಚ್ಚಾಗುತ್ತಲೇ ಇವೆ. ಜನವರಿಯಲ್ಲಿ 125.1, ಫೆಬ್ರವರಿಯಲ್ಲಿ 125 ಮತ್ತು ಮಾರ್ಚ್‌ನಲ್ಲಿ 126 ಕ್ಕೆ ಒಂದು ಅಂಕ ಹೆಚ್ಚಾಗಿದೆ. ಈಗ ಏಪ್ರಿಲ್ ತಿಂಗಳ ಅಂಕಿಅಂಶಗಳೂ ಹೊರಬಿದ್ದಿವೆ. ಏಪ್ರಿಲ್‌ನ ಅಂಕಿಅಂಶಗಳ ಪ್ರಕಾರ, ಎಐಸಿಪಿಐ ಸೂಚ್ಯಂಕವು 127.7 ಕ್ಕೆ ಏರಿಕೆಯಾಗಿದೆ. ಅಂದರೆ ಅದರಲ್ಲಿ ಶೇ.1.35ರಷ್ಟು ಹೆಚ್ಚಳವಾಗಿದ್ದು, ಈಗ ಮೇ ತಿಂಗಳ ಅಂಕಿ ಅಂಶ ಇನ್ನಷ್ಟೇ ಪ್ರಕಟವಾಗಬೇಕಿದೆ. ಮೇ ತಿಂಗಳಲ್ಲೂ ಈ ಅಂಕಿ ಅಂಶ ಹೆಚ್ಚಾಗುವ ನಿರೀಕ್ಷೆ ಇದ್ದು, ಡಿಎಯಲ್ಲಿ ಶೇ.6ರಷ್ಟು ಹೆಚ್ಚಳವಾಗಬಹುದು.

ವೇತನ ಎಷ್ಟು ಹೆಚ್ಚಾಗುತ್ತದೆ?
ಸರಕಾರ ಶೇ.6ರಷ್ಟು ಡಿಎ ಹೆಚ್ಚಿಸಿದರೆ ಕೇಂದ್ರ ನೌಕರರ ಡಿಎ ಶೇ.34ರಿಂದ ಶೇ.40ಕ್ಕೆ ಏರಿಕೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ಮೂಲ ವೇತನವನ್ನು ಆಧಾರವಾಗಿಟ್ಟುಕೊಂಡು ವೇತನ ಎಷ್ಟು ಹೆಚ್ಚಳವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ-New Wage Code : ಉದ್ಯೋಗಿಗಳಿಗೆ ಬಿಗ್ ನ್ಯೂಸ್ : ಜು.1 ರಿಂದ ವಾರದಲ್ಲಿ 3 ದಿನ ರಜೆ, ಪಿಎಫ್‌ನಲ್ಲಿ ಬದಲಾವಣೆ!

ಗರಿಷ್ಠ ಮೂಲ ವೇತನದ ಲೆಕ್ಕಾಚಾರ
1. ಉದ್ಯೋಗಿಯ ಮೂಲ ವೇತನ 56,900 ರೂ
2. ಹೊಸ ತುಟ್ಟಿಭತ್ಯೆ (40%)  ಅಂದರೆ, ರೂ.22,760/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) ಅಂದರೆ, ರೂ.19,346/ತಿಂಗಳು
4. ಅಂದರೆ ತಿಂಗಳ ತುಟ್ಟಿ ಭತ್ಯೆಯಲ್ಲಿನ ಹೆಚ್ಚಳ  22,760-19,346 = ರೂ 3,414/ತಿಂಗಳಿಗೆ ಆಗಲಿದೆ
5. ವಾರ್ಷಿಕ ವೇತನದಲ್ಲಿ ಒಟ್ಟು ತುಟ್ಟಿ ಹೆಚ್ಚಳ 3,414 X12 = 40,968 ರೂ. ಆಗಲಿದೆ

ಇದನ್ನೂ ಓದಿ-ಸರ್ಕಾರಿ ಕೆಲಸದ ಮೂಲಕ 7 ಲಕ್ಷ ಲಾಭ ಗಳಿಸಬೇಕೆ? ಹಾಗಾದ್ರೆ ಈ ಸಣ್ಣ ಕೆಲಸ ಮಾಡಿ

ಕನಿಷ್ಠ ಮೂಲ ವೇತನದ ಲೆಕ್ಕಾಚಾರ
1. ಉದ್ಯೋಗಿಯ ಮೂಲ ವೇತನ ರೂ 18,000
2. ಹೊಸ ತುಟ್ಟಿಭತ್ಯೆ (40%) ಅಂದರೆ, ರೂ.7,200/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) ಅಂದರೆ, ರೂ.6120/ತಿಂಗಳು
4. ಅಂದರೆ, ತಿಂಗಳ ತುಟ್ಟಿಭತ್ಯೆಯಲ್ಲಿ ಹೆಚ್ಚಳ 7200-6120 = ರೂ.1080/ತಿಂಗಳು ಎಂದರ್ಥ
5. ವಾರ್ಷಿಕ ವೇತನದಲ್ಲಿ ಒಟ್ಟು ತುಟ್ಟಿಭತ್ಯೆ ಏರಿಕೆ 1080 X12 = 12,960 ರೂ ಆಗಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News