ಸರ್ಕಾರಿ ಕೆಲಸದ ಮೂಲಕ 7 ಲಕ್ಷ ಲಾಭ ಗಳಿಸಬೇಕೆ? ಹಾಗಾದ್ರೆ ಈ ಸಣ್ಣ ಕೆಲಸ ಮಾಡಿ

ಪಿಎಫ್ ಮತ್ತು ಪಿಂಚಣಿಯ ಹೊರತಾಗಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಸದಸ್ಯರಿಗೆ ಜೀವ ವಿಮೆಯ ಪ್ರಯೋಜನವನ್ನು ಸಹ ನೀಡುತ್ತದೆ. ಅದರ ಅಡಿಯಲ್ಲಿ ನೀವು ರೂ 7 ಲಕ್ಷದ ಲಾಭವನ್ನು ಪಡೆಯಬಹುದು. ವಿಶೇಷವೆಂದರೆ ಈ ಸೌಲಭ್ಯ ಗ್ರಾಹಕರಿಗೆ ಉಚಿತವಾಗಿ ದೊರೆಯುತ್ತದೆ. ಇದಕ್ಕೆ ಯಾವುದೇ ಪಾವತಿಯ ಅಗತ್ಯವಿಲ್ಲ.

Written by - Bhavishya Shetty | Last Updated : Jun 25, 2022, 02:29 PM IST
  • ನಿಮಗೆ 7 ಲಕ್ಷ ರೂ. ಲಾಭ ಪಡೆಯುವ ಅವಕಾಶವಿದೆ
  • ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇ-ನಾಮನಿರ್ದೇಶನ ಮಾಡಲು ಸಲಹೆ ನೀಡಿದೆ
  • ಇ-ನಾಮನಿರ್ದೇಶನವನ್ನು ಹೀಗೆ ಮಾಡಿ
ಸರ್ಕಾರಿ ಕೆಲಸದ ಮೂಲಕ 7 ಲಕ್ಷ ಲಾಭ ಗಳಿಸಬೇಕೆ? ಹಾಗಾದ್ರೆ ಈ ಸಣ್ಣ ಕೆಲಸ ಮಾಡಿ title=
EPFO

ಸಾರ್ವಜನಿಕರೇ ನೀವು ಉದ್ಯೋಗಿಯಾಗಿದ್ದರೆ ನಿಮಗೆ 7 ಲಕ್ಷ ರೂ. ಲಾಭ ಪಡೆಯುವ ಅವಕಾಶವಿದೆ. ಉದ್ಯೋಗಿಗಳಿಗೆ ಇಪಿಎಫ್‌ಒ​​ನಿಂದ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ಇಪಿಎಫ್‌ಒ ​​ಚಂದಾದಾರರಾಗಿದ್ದರೆ ಮಾತ್ರ ಈ ಪ್ರಯೋಜನ ಪಡೆಯಲು ಸಾಧ್ಯ. 

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು ಮೊದಲೇ ಮಾಡಲು ಸಲಹೆ ನೀಡಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದದೆ 7 ಲಕ್ಷ ಹಣ ಪಡೆಯುವ ಅವಕಾಶ ನಿಮ್ಮ ಕೈ ತಪ್ಪುವ ಸಾಧ್ಯತೆಯಿದೆ.  ಇನ್ನು ಈ ನಾಮನಿರ್ದೇಶನ ಮಾಡಲು ಮೊದಲು ನೀವು ಫಾರ್ಮ್ ಅನ್ನು ಮಾತ್ರ ಭರ್ತಿ ಮಾಡಬೇಕು. ಆ ನಂತರ ಮಾತ್ರ ಅದರ ಪ್ರಯೋಜನವನ್ನು ಪಡೆಯಬಹುದು. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯೋಣ.

ಇದನ್ನೂ ಓದಿ: ಶ್ರಾವಣ ತರಲಿದೆ ಶುಭದಿನ: ಈ ಮಾಸದಲ್ಲಿ ಶಿವಪೂಜೆಯನ್ನು ಹೀಗೆ ಮಾಡಿ

ಪಿಎಫ್ ಮತ್ತು ಪಿಂಚಣಿಯ ಹೊರತಾಗಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಸದಸ್ಯರಿಗೆ ಜೀವ ವಿಮೆಯ ಪ್ರಯೋಜನವನ್ನು ಸಹ ನೀಡುತ್ತದೆ. ಅದರ ಅಡಿಯಲ್ಲಿ ನೀವು ರೂ 7 ಲಕ್ಷದ ಲಾಭವನ್ನು ಪಡೆಯಬಹುದು. ವಿಶೇಷವೆಂದರೆ ಈ ಸೌಲಭ್ಯ ಗ್ರಾಹಕರಿಗೆ ಉಚಿತವಾಗಿ ದೊರೆಯುತ್ತದೆ. ಇದಕ್ಕೆ ಯಾವುದೇ ಪಾವತಿಯ ಅಗತ್ಯವಿಲ್ಲ.

ಇ-ನಾಮನಿರ್ದೇಶನವನ್ನು ಹೀಗೆ ಮಾಡಿ: 
1. ಮೊದಲು EPFO ​ನ ಅಧಿಕೃತ ವೆಬ್‌ಸೈಟ್ https://www.epfindia.gov.in/ ಗೆ ಹೋಗಬೇಕು.
2. ಇಲ್ಲಿ ನೀವು ಮೊದಲು 'ಸೇವೆಗಳು' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
3. ಇದರ ನಂತರ ನೀವು ಇಲ್ಲಿ 'ಉದ್ಯೋಗಿಗಳಿಗಾಗಿ' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
4. ಈಗ 'ಸದಸ್ಯ UAN/ಆನ್‌ಲೈನ್ ಸೇವೆ (OCS/OTCP)' ಮೇಲೆ ಕ್ಲಿಕ್ ಮಾಡಿ.
5. ಈಗ UAN ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
6. ಇದರ ನಂತರ 'ಮ್ಯಾನೇಜ್' ಟ್ಯಾಬ್‌ನಲ್ಲಿ 'ಇ-ನಾಮನಿರ್ದೇಶನ' ಆಯ್ಕೆ ಮಾಡಿ.
7. ಇದರ ನಂತರ 'ವಿವರಗಳನ್ನು ಒದಗಿಸಿ' ಟ್ಯಾಬ್ ಪರದೆಯ ಮೇಲೆ ಕಾಣಿಸುತ್ತದೆ. 'ಉಳಿಸು' ಕ್ಲಿಕ್ ಮಾಡಿ.
8. ಕುಟುಂಬದ ವಿವರವನ್ನು ನವೀಕರಿಸಲು 'ಹೌದು' ಕ್ಲಿಕ್ ಮಾಡಿ.
9. ಈಗ 'ಕುಟುಂಬ ವಿವರಗಳನ್ನು ಸೇರಿಸಿ' ಕ್ಲಿಕ್ ಮಾಡಿ. ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಕೂಡ ಸೇರಿಸಬಹುದು.
10. ಯಾವ ನಾಮಿನಿಯ ಪಾಲು ಎಷ್ಟು ಮೊತ್ತ ಬರುತ್ತದೆ ಎಂಬುದನ್ನು ಪ್ರಕಟಿಸಲು 'ನಾಮನಿರ್ದೇಶನ ವಿವರಗಳು' ಕ್ಲಿಕ್ ಮಾಡಿ. ವಿವರಗಳನ್ನು ನಮೂದಿಸಿದ ನಂತರ 'ಉಳಿಸು' ಕ್ಲಿಕ್‌ ಮಾಡಿ.
11. 'ಇಪಿಎಫ್ ನಾಮನಿರ್ದೇಶನ' ಮೇಲೆ ಕ್ಲಿಕ್ ಮಾಡಿ.
13. OTP ರಚಿಸಲು 'e-Sign' ಮೇಲೆ ಕ್ಲಿಕ್ ಮಾಡಿ. ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
14. ನಿರ್ದಿಷ್ಟಪಡಿಸಿದ ಜಾಗದಲ್ಲಿ OTP ಅನ್ನು ʼನಮೂದಿಸಿʼ ಮತ್ತು ʼಸಲ್ಲಿಸುʼ ಕ್ಲಿಕ್ ಮಾಡಿ.

ಇದನ್ನೂ ಓದಿ: Broccoli Juice Benefits: ಬ್ರೋಕೊಲಿ ಜ್ಯೂಸ್ ಸೇವನೆಯಿಂದಾಗುವ ಈ ಲಾಭ ನಿಮಗೆ ತಿಳಿದಿದೆಯೇ?

 

(ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.)

Trending News