LPG Subsidy ಬಗ್ಗೆ ಸರ್ಕಾರದ ಹೊಸ ಯೋಜನೆ! ಈಗ ಯಾರ ಖಾತೆಗೆ ಬರುತ್ತೆ ಹಣ!
LPG Cylinder Subsidy: ಇತ್ತೀಚಿನ ತಿಂಗಳುಗಳಲ್ಲಿ, ಎಲ್ಲಾ ಎಲ್ಪಿಜಿ ಗ್ರಾಹಕರಿಗೂ ಸಬ್ಸಿಡಿ ಲಭ್ಯವಾಗುತ್ತಿಲ್ಲ. ಈ ಮಧ್ಯೆ ಸರ್ಕಾರ ಎಲ್ಪಿಜಿ ಸಬ್ಸಿಡಿಗಾಗಿ ಹೊಸ ಯೋಜನೆಯನ್ನು ರೂಪಿಸುತ್ತಿದೆ. ಸರ್ಕಾರದ ಹೊಸ ಯೋಜನೆ ಏನೆಂದು ತಿಳಿಯೋಣ.
LPG Cylinder Subsidy: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಕಚ್ಚಾ ತೈಲದ ಬೆಲೆ ಹೆಚ್ಚಾಗಿದೆ. ಇದೇ ವೇಳೆ ಎಲ್‌ಪಿಜಿ ದರ ಕೂಡ 1,000 ರೂ.ಗಳ ಗಡಿ ದಾಟಲಿದೆ ಎಂಬ ಬಗ್ಗೆ ನಿರಂತರವಾಗಿ ಚರ್ಚೆಯಾಗುತ್ತಿದೆ. ಏತನ್ಮಧ್ಯೆ, ಎಲ್‌ಪಿಜಿ ಸಿಲಿಂಡರ್‌ನ ಸಬ್ಸಿಡಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ದೊಡ್ಡ ಸುದ್ದಿ ಸಿಗುವ ನಿರೀಕ್ಷೆಯಿದೆ.
ವಾಸ್ತವವಾಗಿ, ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಹಣದುಬ್ಬರ ಏರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಅಭಿಪ್ರಾಯಗಳು ಇನ್ನೂ ಮುನ್ನೆಲೆಗೆ ಬಂದಿಲ್ಲ. ಆದರೆ ಸರ್ಕಾರದ ಆಂತರಿಕ ಮೌಲ್ಯಮಾಪನದಲ್ಲಿ, ಗ್ರಾಹಕರು ಸಿಲಿಂಡರ್‌ಗೆ 1000 ರೂ.ವರೆಗೆ ಪಾವತಿಸಲು ಸಿದ್ಧರಾಗಿದ್ದಾರೆ ಎಂದು ಸೂಚಿಸುತ್ತದೆ. ಮೂಲಗಳ ಪ್ರಕಾರ, ಎಲ್‌ಪಿಜಿ ಸಿಲಿಂಡರ್‌ಗಳ ಬಗ್ಗೆ ಸರ್ಕಾರ ಎರಡು ರೀತಿಯ ನಿಲುವುಗಳನ್ನು ತೆಗೆದುಕೊಳ್ಳಬಹುದು. ಮೊದಲನೆಯದಾಗಿ ಸರಕಾರ ಸಬ್ಸಿಡಿ ರಹಿತ ಸಿಲಿಂಡರ್‌ಗಳನ್ನು ಪೂರೈಸಬಹುದು. ಎರಡನೆಯದಾಗಿ, ಕೆಲವು ಆಯ್ದ ಗ್ರಾಹಕರಿಗೆ ಸಬ್ಸಿಡಿಯ ಲಾಭವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- LPG Subsidy: ನಿಮಗೂ ಎಲ್‌ಪಿಜಿ ಸಬ್ಸಿಡಿ ಸಿಗುತ್ತಿಲ್ಲವೇ? ಖಾತೆಯಲ್ಲಿ ಹಣ ಪಡೆಯಲು ಇಂದೇ ಈ ಕೆಲಸ ಮಾಡಿ
ಎಲ್‌ಪಿಜಿ ಸಬ್ಸಿಡಿ ಬಗ್ಗೆ ಸರ್ಕಾರದ ಯೋಜನೆ ಏನು?
ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ (LPG Cylinder Subsidy) ನೀಡುವ ಬಗ್ಗೆ ಸರಕಾರದಿಂದ ಇನ್ನೂ ಸಹ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಮೂಲಗಳಿಂದ ಲಭ್ಯವಿರುವ ಮಾಹಿತಿ ಪ್ರಕಾರ, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ಲಾಭ ದೊರೆಯಲಿದೆ. ಉಳಿದ ಜನರಿಗೆ ಸಬ್ಸಿಡಿ ಕೊನೆಗೊಳ್ಳಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ- LPG Subsidy : ನೀವು ನಿಮ್ಮ LPG ಗ್ಯಾಸ್ ಸಬ್ಸಿಡಿ ಸ್ವೀಕರಿಸಿದ್ದೀರಾ?
ಕಳೆದ ಹಲವಾರು ತಿಂಗಳುಗಳಿಂದ ಆಯ್ದ ಗ್ರಾಹಕರ ಖಾತೆಗಳಿಗೆ LPG ಮೇಲಿನ ಸಬ್ಸಿಡಿ ಬರಲು ಪ್ರಾರಂಭಿಸಿದೆ. 2021 ರ ಆರ್ಥಿಕ ವರ್ಷದಲ್ಲಿ ಸಬ್ಸಿಡಿಗಳ ಮೇಲಿನ ಸರ್ಕಾರದ ವೆಚ್ಚವು 3,559 ಕೋಟಿ ರೂ. 2020ರ ಹಣಕಾಸು ವರ್ಷದಲ್ಲಿ ಈ ವೆಚ್ಚ 24,468 ಕೋಟಿ ರೂ. ಆಗಿತ್ತು. ವಾಸ್ತವವಾಗಿ ಇದು ಡಿಬಿಟಿ ಯೋಜನೆಯಡಿಯಲ್ಲಿದೆ. ಈ ಯೋಜನೆಯು ಜನವರಿ 2015 ರಲ್ಲಿ ಪ್ರಾರಂಭವಾಯಿತು, ಇದರ ಅಡಿಯಲ್ಲಿ ಗ್ರಾಹಕರು ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ನ ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಸಬ್ಸಿಡಿ ಹಣವನ್ನು ಸರ್ಕಾರವು ಗ್ರಾಹಕರ ಬ್ಯಾಂಕ್ ಖಾತೆಗೆ ಮರುಪಾವತಿಸುತ್ತದೆ. ಈ ಮರುಪಾವತಿ ನೇರವಾಗಿರುವುದರಿಂದ, ಯೋಜನೆಗೆ DBTL ಎಂದು ಹೆಸರಿಸಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.