ನವದೆಹಲಿ: LPG Subsidy: ಎಲ್ಪಿಜಿ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಸಬ್ಸಿಡಿಯಾಗಿ ಗ್ರಾಹಕರ ಖಾತೆಗೆ ಪ್ರತಿ ಸಿಲಿಂಡರ್ ಗೆ .79.26 ರೂ ಬರಲಾರಂಭಿಸಿದೆ. ಆದರೆ, ನೀವೂ ಕೂಡಾ LPG ಸಿಲಿಂಡರ್ಗಳನ್ನು ಖರೀದಿಸುತ್ತಿದ್ದು, ಸರ್ಕಾರ ನೀಡುವ ಸಬ್ಸಿಡಿ (Subsidy on LPG) ನಿಮ್ಮ ಖಾತೆ ತಲುಪುತ್ತಿದೆಯೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ. ಒಂದೊಮ್ಮೆ ನಿಮ್ಮ ಖಾತೆಗೆ ಸಬ್ಸಿಡಿ ಸಿಗುತ್ತಿಲ್ಲದಿದ್ದರೆ ಅದು ಯಾಕೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡಾ ಮುಖ್ಯವಾಗಿರುತ್ತದೆ. ಎಲ್ಪಿಜಿ ಸಿಲಿಂಡರ್ಗಳು ದುಬಾರಿಯಾಗುತ್ತಿವೆ. ಹೀಗಿರುವಾಗ ಸಿಲಿಂಡರ್ ಮೇಲೆ ಸಿಗುವ ಸಬ್ಸಿಡಿ ಜನ ಸಾಮಾನ್ಯರಿಗೆ ಕೊಂಚ ನೆಮ್ಮದಿ ತರುತ್ತದೆ.
ಸಬ್ಸಿಡಿ ನಿಲ್ಲುವುದಕ್ಕೆ ಕಾರಣ :
ನೀವು ಸಬ್ಸಿಡಿ (LPG Subsidy) ಪಡೆಯದಿದ್ದರೆ ಇದಕ್ಕೆ ಹಲವು ಕಾರಣಗಳಿರಬಹುದು. ಮೊದಲನೆಯದಾಗಿ ನಿಮ್ಮ ಬ್ಯಾಂಕ್ ಖಾತೆ (Bank Account) ಸಂಖ್ಯೆಯನ್ನು ಸರಿಯಾಗಿ ನೀಡದೇ ಇರಬಹುದು. ಇನ್ನೊಂದು ನೀವು ಈ ವರ್ಗಕ್ಕೆ ಅರ್ಹರಲ್ಲದೆ ಇರಬಹುದು. ಎಲ್ಪಿಜಿ ಸಿಲಿಂಡರ್ನ ಸಬ್ಸಿಡಿ ನಿಮ್ಮ ಖಾತೆಗೆ ಹೋಗುತ್ತಿದೆಯೇ ಅಥವಾ ಇಲ್ಲವೇ ಎನ್ನುವುದು ನಿಮಗೆ ತಿಳಿದಿಲ್ಲದಿದ್ದರೆ, ಕಂಡುಹಿಡಿಯುವ ಮಾರ್ಗ ಕೂಡಾ ಅತ್ಯಂತ ಸುಲಭವಾಗಿದೆ. ಮನೆಯಲ್ಲೇ ಕುಳಿತು ನಿಮಿಷಗಳಲ್ಲಿ ನೀವು ಇದನ್ನು ಆನ್ಲೈನ್ನಲ್ಲಿ ಸುಲಭವಾಗಿ ತಿಳಿದುಕೊಳ್ಳಬಹುದು.
ಇದನ್ನೂ ಓದಿ : PM Awas ಯೋಜನೆ ಅಡಿಯಲ್ಲಿ 3.61 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ, ತಕ್ಷಣವೇ ಅರ್ಜಿ ಸಲ್ಲಿಸಿ
1- ಇದಕ್ಕಾಗಿ, ಮೊದಲಿಗೆ www.mylpg.in ವೆಬ್ಸೈಟ್ಗೆ ಭೇಟಿ ನೀಡಿ
2. ಇದರ ನಂತರ ನೀವು ಬಲಭಾಗದಲ್ಲಿ ಮೂರು ಕಂಪನಿಗಳ ಗ್ಯಾಸ್ ಸಿಲಿಂಡರ್ಗಳ ಫೋಟೋ ಕಾಣಿಸುತ್ತದೆ.
3- ನಿಮ್ಮ ಸೇವಾ ಪೂರೈಕೆದಾರರ ಗ್ಯಾಸ್ ಸಿಲಿಂಡರ್ನ ಫೋಟೋದ ಮೇಲೆ ಕ್ಲಿಕ್ ಮಾಡಿ.
4. ಇದರ ನಂತರ ಹೊಸ ವಿಂಡೋ ತೆರೆದುಕೊಳ್ಳುತ್ತದೆ ಅದರಲ್ಲಿ ನಿಮ್ಮ ಗ್ಯಾಸ್ ಸರ್ವೀಸ್ ಪ್ರೊವೈಡರ್ ನ ಮಾಹಿತಿ ಇರುತ್ತದೆ.
5- ಮೇಲೆ ಬಲಭಾಗದಲ್ಲಿ ಸೈನ್-ಇನ್ ಮತ್ತು New user ಆಯ್ಕೆ ಇರುತ್ತದೆ, ಅದನ್ನು ಆಯ್ಕೆಮಾಡಿ.
6. ನಿಮ್ಮ ಐಡಿಯನ್ನು ಈಗಾಗಲೇ ರಚಿಸಿದ್ದರೆ ನೀವು ಸೈನ್-ಇನ್ ಮಾಡಬೇಕು.
7-ಐಡಿ ಇಲ್ಲದಿದ್ದರೆ new user ಆಯ್ಕೆ ಮಾಡಬೇಕು.
8. ಇದರ ನಂತರ, ತೆರೆಯುವ ವಿಂಡೋದಲ್ಲಿ, view cylinder booking history ಆಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆಮಾಡಿ.
9- ನೀವು ಸಬ್ಸಿಡಿ ಪಡೆಯುತ್ತಿದ್ದೀರಾ ಅಥವಾ ಇಲ್ಲವೇ ಎನ್ನುವುದು ಇಲ್ಲಿ ತಿಳಿಯುತ್ತದೆ.
10- ಸಬ್ಸಿಡಿ ಸಿಗುತ್ತಿಲ್ಲ ಎಂದಾದರೆ 18002333555 ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಬಹುದು.
ಈ ಕಾರಣಗಳಿಂದಾಗಿ ಸಬ್ಸಿಡಿ ನಿಲ್ಲುತ್ತದೆ :
LPG ಸಿಲಿಂಡರ್ಗಳ ಮೇಲೆ ಸರ್ಕಾರವು ಅನೇಕ ಜನರಿಗೆ ಸಬ್ಸಿಡಿ ನೀಡುವುದಿಲ್ಲ, ಇದಕ್ಕೆ ಕಾರಣ ನಿಮ್ಮ ಆಧಾರ್ ಲಿಂಕ್ (Aadhaar link) ಆಗಿರಬಹುದು. ಎರಡನೆಯ ವಿಷಯ ಏನೆಂದರೆ, ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಇದ್ದರೆ, ಸರ್ಕಾರವು ಅವರನ್ನು ಸಬ್ಸಿಡಿ ವ್ಯಾಪ್ತಿಯಿಂದ ಹೊರಗಿಡುತ್ತದೆ, ಅಂದರೆ ಸಬ್ಸಿಡಿ ನೀಡಲಾಗುವುದಿಲ್ಲ. ಆದ್ದರಿಂದ ನಿಮ್ಮ ಆದಾಯ (income) 10 ಲಕ್ಷಕ್ಕಿಂತ ಹೆಚ್ಚಿದ್ದರೆ ನೀವು ಸಬ್ಸಿಡಿ ಪಡೆಯಲು ಅರ್ಹರಾಗಿರುವುದಿಲ್ಲ. ಇನ್ನು ನಿಮ್ಮ ಆದಾಯ 10 ಲಕ್ಷಕ್ಕಿಂತ ಕಡಿಮೆ ಇದ್ದು, ನಿಮ್ಮ ಪತ್ನಿ ಅಥವಾ ಪತಿ ಕೂಡ ಸಂಪಾದಿಸುತ್ತಿದ್ದು, ಇಬ್ಬರ ಆದಾಯವೂ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿದ್ದರೂ ಸಬ್ಸಿಡಿ ಸಿಗುವುದಿಲ್ಲ.
ಇದನ್ನೂ ಓದಿ : ZEEL-Sony ವಿಲೀನವು ಅಂತಿಮ ಹಂತದಲ್ಲಿದೆ: ZEEL MD ಮತ್ತು CEO ಪುನೀತ್ ಗೋಯೆಂಕಾ
ಸಬ್ಸಿಡಿ ಎಷ್ಟು ಸಿಗುತ್ತದೆ ? :
ಪ್ರಸ್ತುತ, ಅಡುಗೆ ಅನಿಲದ ಮೇಲಿನ ಸಬ್ಸಿಡಿ ತುಂಬಾ ಕಡಿಮೆಯಾಗಿದೆ. ಸಿಲಿಂಡರ್ ಮೇಲೆ 200 ರೂ.ವರೆಗೆ ಸಬ್ಸಿಡಿ ಸಿಗುತ್ತಿದ್ದ ಕಾಲವೊಂದಿತ್ತು. ಆದರೆ ಈಗ 79.26 ರೂಪಾಯಿ ಸಬ್ಸಿಡಿಯಾಗಿ ಗ್ರಾಹಕರ ಖಾತೆಗೆ ಬರುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.