Builder-buyer agreement : ನೀವು ಸಹ ಫ್ಲಾಟ್ ಅನ್ನು ಬುಕ್ ಮಾಡಿಕೊಂಡಿದ್ದು, ಬಹಳ ಸಮಯದಿಂದ ಫ್ಲಾಟ್ ನಿಮಗೆ ಸಿಗದಿದ್ದರೆ ಅಥವಾ ಇನ್ಯಾವುದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಈ ಸುದ್ದಿ ಓದಿ. ಮನೆ ಖರೀದಿ ಪ್ರಕ್ರಿಯೆಯನ್ನು ಸರಳವಾಗಿಸುವ ಮತ್ತು ಸಂಭಾವ್ಯ ದುಷ್ಕೃತ್ಯಗಳಿಂದ ಗ್ರಾಹಕರನ್ನು ರಕ್ಷಿಸುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಲು ಸರ್ಕಾರ ಮುಂದಾಗಿದೆ.  ಬಿಲ್ಡರ್-ಖರೀದಿದಾರರ  ಒಪ್ಪಂದದ ಮಾದರಿ ರಚನೆಯ ಕೆಲಸ ಮಾಡಲು ಸಮಿತಿಯನ್ನು ರಚಿಸಲು ಸರ್ಕಾರ ನಿರ್ಧರಿಸಿದೆ. ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮುಂದಿನ ಮೂರು ತಿಂಗಳಲ್ಲಿ ಸಮಿತಿ ರಚನೆಯಾಗುವ ನಿರೀಕ್ಷೆ  : 
ನ್ಯಾಯಾಧೀಶರು, ರಾಷ್ಟ್ರೀಯ ಮತ್ತು ರಾಜ್ಯ ಗ್ರಾಹಕ ಆಯೋಗಗಳು, ವಿವಿಧ ಗ್ರಾಹಕ ಸಂಸ್ಥೆಗಳು, ವಕೀಲರು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ  ಸದಸ್ಯರು ಈ ಸಮಿತಿಯಲ್ಲಿ ಇರಲಿದ್ದಾರೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಈ ಸಮಿತಿ ರಚನೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. 


ಇದನ್ನೂ ಓದಿ : Gold Price : ಚಿನ್ನ - ಬೆಳ್ಳಿ ದರದಲ್ಲಿ ಭಾರೀ ಕುಸಿತ! 10 ಗ್ರಾಂ ಬೆಲೆ ಬಂಗಾರದ ಬೆಲೆ ಎಷ್ಟಿದೆ ನೋಡಿ


ಸಮಸ್ಯೆಯನ್ನು ಸುಲಭವಾಗಿ ಇತ್ಯರ್ಥಪಡಿಸಬಹುದು :
ಬಿಲ್ಡರ್ ಮತ್ತು ಖರೀದಿದಾರರ ನಡುವಿನ ಒಪ್ಪಂದವನ್ನು ಪ್ರಮಾಣೀಕರಿಸಿ ಏಕರೂಪತೆ ತಂದರೆ ಮನೆ ಖರೀದಿದಾರರು ಮತ್ತು ಕಂಪನಿಗಳ ನಡುವಿನ ವಿವಾದವನ್ನು ಪರಿಹರಿಸಬಹುದು ಎಂದು ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದೊಂದು ವಿಶಿಷ್ಟ ದಾಖಲೆಯಾಗಿ, ಇಡೀ ದೇಶಕ್ಕೆ ಅನ್ವಯವಾಗಬೇಕು ಎಂದು ಸಿಂಗ್  ಅಭಿಪ್ರಾಯಪಟ್ಟಿದ್ದಾರೆ. 


ಈ ನಿಟ್ಟಿನಲ್ಲಿ ನಾವು ಸಮಿತಿಯನ್ನು ರಚಿಸಲು ಮತ್ತು ಖರೀದಿದಾರ ಮತ್ತು ಮಾರಾಟಗಾರ (ಬಿಲ್ಡರ್) ನಡುವೆ ಮಾದರಿ ಒಪ್ಪಂದವನ್ನು  ರೂಪಿಸಲು ನಿರ್ಧರಿಸಿರುವುದಾಗಿ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಎಲ್ಲಾ ಪಕ್ಷಗಳೊಂದಿಗೆ ಸಮಾಲೋಚಿಸಿ ಈ ಮಾದರಿ ಒಪ್ಪಂದವನ್ನು ಸಿದ್ಧಪಡಿಸುವುದಾಗಿ ಹೇಳಿದ್ದಾರೆ. ನಂತರ ಅದನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ ಎಲ್ಲಾ ರಾಜ್ಯಗಳಿಗೆ  ರವಾನಿಸಲಾಗುವುದು  ಎಂದು ಹೇಳಿದ್ದಾರೆ. 


ಇದನ್ನೂ ಓದಿ : Investment In EMFs: ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬೇಕೆ? ಹಾಗಾದರೆ ಈ ಸಂಗತಿಗಳು ನಿಮಗೆ ತಿಳಿದಿರಲಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.