FD ಮೇಲೆ ಈ ಬ್ಯಾಂಕ್ ಗಳು ನೀಡುತ್ತವೆ ಶೇ 8.5% ರಷ್ಟು ಬಡ್ಡಿದರ ! ಹೂಡಿಕೆಗೂ ಮುನ್ನ ನಿಮ್ಮಲ್ಲಿರಲಿ ಈ ಮಾಹಿತಿ

Bank FD Rates 2023: ಕೆಲವು ಬ್ಯಾಂಕ್ ಗಳು ಎಫ್ ಡಿ ದರದ ಮೇಲಿನ ಬಡ್ಡಿಯನ್ನು ಹೆಚ್ಚಿಸಿದೆ. ಇದರಲ್ಲೂ ಹಿರಿಯ ನಾಗರೀಕರ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿ ಸಿಗುತ್ತದೆ. 

Written by - Ranjitha R K | Last Updated : Apr 18, 2023, 03:00 PM IST
  • ಆರ್‌ಬಿಐ ರೆಪೊ ದರದಲ್ಲಿ ಹೆಚ್ಚಳ
  • ಎಫ್‌ಡಿ ದರ ಹೆಚ್ಚಿಸಿದ ಬ್ಯಾಂಕ್
  • ಎಫ್‌ಡಿ ಮೇಲೆ 8.50 ಪ್ರತಿಶತದವರೆಗೆ ವಾರ್ಷಿಕ ಬಡ್ಡಿ
FD ಮೇಲೆ ಈ ಬ್ಯಾಂಕ್ ಗಳು ನೀಡುತ್ತವೆ ಶೇ 8.5% ರಷ್ಟು ಬಡ್ಡಿದರ ! ಹೂಡಿಕೆಗೂ ಮುನ್ನ  ನಿಮ್ಮಲ್ಲಿರಲಿ ಈ ಮಾಹಿತಿ  title=

Bank FD Rates 2023 : ಕಳೆದ ಒಂದು ವರ್ಷದಲ್ಲಿ ಆರ್‌ಬಿಐ ರೆಪೊ ದರವನ್ನು ವೇಗವಾಗಿ ಹೆಚ್ಚಿಸಿದೆ. ಇದರ ಪರಿಣಾಮ ಬ್ಯಾಂಕ್‌ಗಳು ಎಫ್‌ಡಿ ದರವನ್ನು ಕೂಡಾ ಹೆಚ್ಚಿಸಿವೆ. ಬ್ಯಾಂಕ್‌ಗಳು ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ. ಕೆಲವು ಬ್ಯಾಂಕ್‌ಗಳು ಎಫ್‌ಡಿ ಮೇಲೆ 8.50 ಪ್ರತಿಶತದವರೆಗೆ ವಾರ್ಷಿಕ ಬಡ್ಡಿ ನೀಡುತ್ತಿವೆ. 

ಆಕ್ಸಿಸ್ ಬ್ಯಾಂಕ್  : 
ಫಿಕ್ಸೆಡ್ ಡಿಪಾಸಿಟ್ ಮೇಲೆ ಒಂದು ವರ್ಷಕ್ಕೆ 6.75%, ಎರಡು ವರ್ಷಕ್ಕೆ 7.26% ಮತ್ತು 3 ವರ್ಷಕ್ಕೆ 7.00% ಬಡ್ಡಿಯನ್ನು ಆಕ್ಸಿಸ್ ಬ್ಯಾಂಕ್  ನೀಡುತ್ತಿದೆ. ಹಿರಿಯ ನಾಗರಿಕರಿಗೆ ಎಲ್ಲಾ ಮೂರು ಅವಧಿಗಳಿಗೂ  0.75% ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ : ಇಂತಹ ಪ್ಯಾನ್ ಕಾರ್ಡ್ ಹೊಂದಿರುವವರಿಗೆ 10 ಸಾವಿರ ರೂ.ಗಳ ದಂಡ

ಬಂಧನ್ ಬ್ಯಾಂಕ್ :
ಬಂಧನ್ ಬ್ಯಾಂಕ್ ಒಂದು ವರ್ಷಕ್ಕೆ 7.25%, 600 ದಿನಗಳಿಗೆ 8.00%, 2 ವರ್ಷ ಮತ್ತು 3 ವರ್ಷಗಳಿಗೆ 7.25% ಬಡ್ಡಿದರವನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ, ಪ್ರತಿ ಅವಧಿಯಲ್ಲಿ 0.50% ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತಿದೆ.

ಆರ್ ಬಿಎಲ್ ಬ್ಯಾಂಕ್
RBL ಬ್ಯಾಂಕ್ ಒಂದು ವರ್ಷಕ್ಕೆ 7.00%, 725 ದಿನಗಳಿಗೆ 7.80%, 2 ವರ್ಷ ಮತ್ತು 3 ವರ್ಷಗಳಿಗೆ 7.00% ನೀಡುತ್ತಿದೆ. ಈ ಬ್ಯಾಂಕ್ ಕೂಡಾ ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿಯನ್ನು ಬ್ಯಾಂಕ್ ನೀಡುತ್ತಿದೆ.

ಐಡಿಎಫ್ ಸಿ ಫಸ್ಟ್ ಬ್ಯಾಂಕ್ :  
IDFC ಫಸ್ಟ್ ಬ್ಯಾಂಕ್ ಒಂದು ವರ್ಷಕ್ಕೆ 6.75%, 2 ವರ್ಷಕ್ಕೆ 7.25% ಮತ್ತು 3 ವರ್ಷಕ್ಕೆ 7.75% ಬಡ್ಡಿಯನ್ನು ನೀಡುತ್ತಿದೆ.  ಈ ಮೂರು ಅವಧಿಗಳಲ್ಲಿ 0.50% ಹೆಚ್ಚುವರಿ ಬಡ್ಡಿಯನ್ನು ಹಿರಿಯ ನಾಗರಿಕರಿಗೆ ಬ್ಯಾಂಕ್ ನೀಡುತ್ತಿದೆ.

ಇದನ್ನೂ ಓದಿ : Hyundai 7 Seater SUV: ಅತಿ ಹೆಚ್ಚು ಸೇಲ್‌ ಆಗ್ತಿದೆ 7 ಸೀಟರ್‌ನ ಈ ಕಾರು.. ಇಷ್ಟು ಕಡಿಮೆ ಬೆಲೆಗೆ ಎಷ್ಟೊಂದು ವೈಶಿಷ್ಟ್ಯ?

ಡಿಸಿಬಿ ಬ್ಯಾಂಕ್ : 
DCB ಬ್ಯಾಂಕ್ ಒಂದು ವರ್ಷದ FD ಮೇಲೆ  7.25%, 2 ವರ್ಷಕ್ಕೆ 8.00% ಮತ್ತು 3 ವರ್ಷಕ್ಕೆ 7.60% ಬಡ್ಡಿಯನ್ನು ನೀಡುತ್ತಿದೆ. DCB ಬ್ಯಾಂಕ್ ಕೂಡಾ ಈ ಮೂರು ಅವಧಿಗಳಲ್ಲಿ ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿಯನ್ನು ಸಹ ನೀಡುತ್ತಿದೆ.

 

(ಗಮನಿಸಿ: ಈ ಬಡ್ಡಿದರಗಳನ್ನು ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ. 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಈ ದರಗಳು ಅನ್ವಯ ) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News