ಬೆಂಗಳೂರು : ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಈ ಯೋಜನೆಗಳ ಅಡಿಯಲ್ಲಿ ವಿವಿಧ ವರ್ಗಗಳ ಜನರಿಗೆ ಪ್ರಯೋಜನವಾಗುತ್ತಿದೆ. ಇನ್ನು ವಿದ್ಯುತ್ ಉಳಿತಾಯದ  ಉದ್ದೇಶದಿಂದ ಸರ್ಕಾರ ಉಜಾಲಾ ಯೋಜನೆಯನ್ನು (Unnat Jyoti By Affordable LEDs for All) ಜಾರಿಗೆ ತಂದಿದೆ. ಉಜಾಲಾ ಯೋಜನೆಯಡಿ ಜನರಿಗೆ ಅಗ್ಗದ ದರದಲ್ಲಿ ಎಲ್ ಇಡಿ ಬಲ್ಬ್ ಗಳನ್ನು  ವಿತರಿಸಲಾಗುತ್ತಿದೆ. ಇದರಿಂದ ವಿದ್ಯುತ್ ಉಳಿತಾಯಕ್ಕೂ ಸಹಕಾರಿಯಾಗಲಿ ದ್ದು, ವಿದ್ಯುತ್ ಬಿಲ್ ಕೂಡಾ ತೀರಾ ಕಡಿಮೆಯಾಗಲಿದೆ. ಮೋದಿ ಸರ್ಕಾರದ ಈ ಯೋಜನೆಯಡಿ ಇದುವರೆಗೆ ಕೋಟಿಗಟ್ಟಲೆ ಎಲ್‌ಇಡಿ ಬಲ್ಬ್‌ಗಳು ಜನರಿಗೆ ಲಭ್ಯವಾಗಿವೆ.


COMMERCIAL BREAK
SCROLL TO CONTINUE READING

ಎಲ್‌ಇಡಿ ಬಲ್ಬ್ : 
ಪಿಎಂ ಮೋದಿ ಅವರು ಪ್ರಾರಂಭಿಸಿದ ಈ ಯೋಜನೆಯು ವಸತಿ ಮಟ್ಟದಲ್ಲಿ ವಿದ್ಯುತಿನ ಸಮರ್ಥ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇಂಧನ ದಕ್ಷ ಉಪಕರಣಗಳನ್ನು ಬಳಸುವುದು ಎಷ್ಟು ಪ್ರಯೋಜನಕಾರಿಯಾಗಲಿದೆ ಎನ್ನುವುದರ ಬಗ್ಗೆ ಇದು ಜನರಲ್ಲಿ ಜಾಗೃತಿಯನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ : ದೇಶದ 20 ಸಾವಿರಕ್ಕೂ ಅಧಿಕ ಪೆಟ್ರೋಲ್ ಬಂಕ್ ಗಳಲ್ಲಿ ಸಿಗಲಿದೆ ಉಚಿತ ಪೆಟ್ರೋಲ್ .! ಏನಿದು ಹೊಸ ಸ್ಕೀಮ್ ?


ಉಜಾಲಾ ಯೋಜನೆ : 
ನಗರದಲ್ಲಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಸ್ಥಾಪಿಸಲಾದ ವಿಶೇಷ ಕೌಂಟರ್  ಮೂಲಕ ಉಜಾಲಾ ಎಲ್ಇಡಿ  ಬಲ್ಬ್ ಗಳನ್ನು ವಿತರಿಸಲಾಗುತ್ತಿದೆ. ಇವು ಯಾವುದೇ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುವುದಿಲ್ಲ. ಈ ಬಲ್ಬ್ ಗಳ  ವಿತರಣಾ ಕೌಂಟರ್‌ಗಳ ಬಗ್ಗೆ www.ujala.gov.in ಮೂಲಕ ತಿಳಿದುಕೊಳ್ಳಬಹುದು. ಮತ್ತೊಂದೆಡೆ, ಉಜಾಲಾ ಯೋಜನೆಯಡಿ, ಆಯಾ ವಿದ್ಯುತ್ ವಿತರಣಾ ಕಂಪನಿಯೊಂದಿಗೆ ಮೀಟರ್ ಸಂಪರ್ಕ ಹೊಂದಿರುವ  ಕುಟುಂಬಗಳಿಗೆ ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗುತ್ತಿದೆ. 


ಎಲ್‌ಇಡಿ ಬಲ್ಬ್ ಬೆಲೆ : 
ಉಜಾಲಾ ಯೋಜನೆಯಡಿ, ಪ್ರತಿ ಎಲ್‌ಇಡಿ ಬಲ್ಬ್‌ಗೆ 70  ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಎಲ್‌ಇಡಿ ಟ್ಯೂಬ್‌ಲೈಟ್‌ ಅನ್ನು 220  ರೂ.  ಫ್ಯಾನ್‌ ಅನ್ನು  1110 ರೂಪಾಯಿ ದರದಲ್ಲಿ ಖರೀದಿಸಬಹುದು. ಸಲಕರಣೆಗಳ ವೆಚ್ಚವು ಬಲ್ಬ್ ವೆಚ್ಚ, ವಿತರಣೆ, ಜಾಗೃತಿ ವೆಚ್ಚದಂತಹ ಘಟಕಗಳನ್ನು ಒಳಗೊಂಡಿದೆ. 


ಇದನ್ನೂ ಓದಿ : Indian Railways: ರೈಲು ಪ್ರಯಾಣಿಕರೇ ಗಮನಿಸಿ, ಈ ವಸ್ತುಗಳನ್ನು ಎಂದಿಗೂ ರೈಲಿನಲ್ಲಿ ಕೊಂಡೊಯ್ಯಬೇಡಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.