Gruha Lakshmi Yojana: ಈ ಜಿಲ್ಲೆಯ ಮಹಿಳೆಯರಿಗೆ ಸಿಕ್ತು ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ!
Gruha Lakshmi Yojana: ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮೀ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಆಂದೋಲನ ಕಾರ್ಯಕ್ರಮದ ವೇಳೆ ಈ ಬಗ್ಗೆ ಮಾತನಾಡಿರುವ ಅವರು, ಸರ್ಕಾರದ ಕಡೆಯಿಂದ ಹಣ ಮಂಜೂರಾಗಿದ್ದು, ಹಂತ ಹಂತವಾಗಿ ಎಲ್ಲಾ ಮಹಿಳೆಯರಿಗೆ ಪೆಂಡಿಂಗ್ ಹಣ ಒಂದೇ ಸಾರಿ 4,000 ರೂ. ಜಮೆ ಆಗುತ್ತದೆ ಎಂದು ತಿಳಿಸಿದ್ದಾರೆ.
Gruha Lakshmi Yojana: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಜಾರಿಗೆ ತಂದಿರುವ ಯೋಜನೆಯೇ ಗೃಹಲಕ್ಷ್ಮಿ ಯೋಜನೆ. ಈ ಯೋಜನೆ ಶುರುವಾಗಿ 1 ವರ್ಷ ಆಗಿದ್ದು, ಕಳೆದ 3 ತಿಂಗಳಿನಿಂದ ಈ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮೆ ಆಗಿಲ್ಲವೆನ್ನುವ ಕಾರಣಕ್ಕೆ ಗೃಹಲಕ್ಷ್ಮೀ ಫಲಾನುಭವಿಗಳು ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಅವರಿಗೆಲ್ಲಾ ಗುಡ್ ನ್ಯೂಸ್ ಸಿಕ್ಕಿದ್ದು, ಪೆಂಡಿಂಗ್ ಇರುವ 11 ಮತ್ತು 12ನೇ ಕಂತಿನ ಹಣ ಮೊದಲ ಹಂತದಲ್ಲಿ ಈ ಜಿಲ್ಲೆಯ ಮಹಿಳೆಯರಿಗೆ ತಲುಪಿದೆ.
ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಸಹ ಮಹಿಳೆಯರನ್ನು ತಲುಪಿಲ್ಲವೆಂದು ಬಹಳಷ್ಟು ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಆ ವೇಳೆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣದಿಂದ ಮಹಿಳೆಯರಿಗೆ ಈ ಯೋಜನೆಯ ಹಣ ತಲುಪಿರಲಿಲ್ಲ. ಇದರ ಜೊತೆಗೆ ತಾಂತ್ರಿಕ ದೋಷಗಳು ಕೂಡ ಇತ್ತು ಎಂದು ಸರ್ಕಾರವೇ ತಿಳಿಸಿತ್ತು. ಹೀಗಾಗಿ 2 ತಿಂಗಳ ಹಣ ಬಾಕಿ ಉಳಿದಿತ್ತು.
ಇದನ್ನೂ ಓದಿ: ಪ್ರತಿನಿತ್ಯ ರೂ.400 ಠೇವಣಿ ಮಾಡಿ ಸಾಕು..ಇದರಿಂದು ನೀವು 71 ಲಕ್ಷ ಗಳಿಸಬಹುದು..!
ಆದರೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮೀ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಆಂದೋಲನ ಕಾರ್ಯಕ್ರಮದ ವೇಳೆ ಈ ಬಗ್ಗೆ ಮಾತನಾಡಿರುವ ಅವರು, ಸರ್ಕಾರದ ಕಡೆಯಿಂದ ಹಣ ಮಂಜೂರಾಗಿದ್ದು, ಹಂತ ಹಂತವಾಗಿ ಎಲ್ಲಾ ಮಹಿಳೆಯರಿಗೆ ಪೆಂಡಿಂಗ್ ಹಣ ಒಂದೇ ಸಾರಿ 4,000 ರೂ. ಜಮೆ ಆಗುತ್ತದೆ ಎಂದು ತಿಳಿಸಿದ್ದಾರೆ. ಈಗಾಗಲೇ 26.65 ಲಕ್ಷ ರೂ. ಬಿಡುಗಡೆ ಆಗಿದೆ ಎಂದು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಪ್ರಸ್ತುತ ಬೀದರ್, ಬೆಳಗಾವಿ, ಕಲಬುರಗಿ, ಬಳ್ಳಾರಿ, ವಿಜಯಪುರ, ಗದಗ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು & ಕೋಲಾರ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿದ್ದು, ಈ ಮಹಿಳೆಯರು ಸ್ಟೇಟಸ್ ಚೆಕ್ ಮಾಡುವ ಮೂಲಕ ತಮಗೆ ಹಣ ಬಂದಿರುವ ಬಗ್ಗೆ ಚೆಕ್ ಮಾಡಿಕೊಳ್ಳಬಹುದು. ಇನ್ನುಳಿದ ಜಿಲ್ಲೆಯ ಮಹಿಳೆಯರಿಗೆ ಶೀಘ್ರದಲ್ಲೇ ಗೃಹಲಕ್ಷ್ಮಿ ಯೋಜನೆಯ ಹಣ ಲಭಿಸುತ್ತದೆ.
ಇದನ್ನೂ ಓದಿ: ಇದು ಮುಕೇಶ್ ಅಂಬಾನಿ ನೆಚ್ಚಿನ ತಿಂಡಿ..! ಬೇಕಿದ್ದರೆ ನೀವೂ ಟ್ರೈ ಮಾಡಿ!!
ಇನ್ನು ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆ ಎಂದು ಚೆಕ್ ಮಾಡುವುದಕ್ಕೆ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯಿರಿ. ಈ ಮೂಲಕ ನಿಮಗೆ ಹಣ ಬಂದಿರುವ ಬಗ್ಗೆ ಗೊತ್ತಾಗುತ್ತದೆ ಅಥವಾ ಸ್ಟೇಟಸ್ ಪರಿಶೀಲಿಸುವುದಕ್ಕೆ ಮತ್ತೊಂದು ವಿಧಾನ ಕೂಡ ಇದ್ದು, ಗೂಗಲ್ ಪ್ಲೇ ಸ್ಟೋರ್ ಮೂಲಕ ಡಿಬಿಟಿ ಕರ್ನಾಟಕ ಆಪ್ ಡೌನ್ಲೋಡ್ ಮಾಡಿ, ಆಧಾರ್ ಕಾರ್ಡ್ ಬಳಸಿ ಲಾಗಿನ್ ಆಗುವ ಮೂಲಕ ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು. ಕೂಡಲೇ ಈ ಕೆಲಸ ಮಾಡಿ ಬಾಕಿ ಹಣ ಬಂದಿರುವ ಬಗ್ಗೆ ಪರಿಶೀಲಿಸಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ