ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತದೆ ಬೆಲೆ ಏರಿಕೆ ಶಾಕ್..!!

Varamahalakshmi Festival: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಜನಸಾಮಾನ್ಯರು ಈ ದುಬಾರಿ ದುನಿಯಾದಲ್ಲಿ ಬದುಕುವುದೇ ಕಷ್ಟವಾಗಿದೆ. ಇಂದು ವರಮಹಾಲಕ್ಷ್ಮಿ ಹಬ್ಬದಂದು ಕೂಡ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿದ್ದಾರೆ. 

Written by - Yashaswini V | Last Updated : Aug 16, 2024, 03:29 PM IST
  • ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಇಂದು ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಸಿದ್ದ ಮಾರುಕಟ್ಟೆಯಾದ ಕೆ‌ಆರ್ ಮಾರ್ಕೆಟ್‌ನಲ್ಲಿ ಅಕ್ಷರಶಃ ಜನಜಾತ್ರೆಯಾಗಿ ಮಾರ್ಪಟ್ಟಿತ್ತು.
  • ಹೂವು ಹಣ್ಣು ಖರೀದಿಗಾಗಿ ಜನ ಮುಗಿಬಿದ್ದಿದ್ರು.
  • ತಾಯಿ ಮಹಾಲಕ್ಷ್ಮಿಯನ್ನ ಆರಾಧಿಸೋಕೆ ಬೇಕಾದಂತಹ ಅಗತ್ಯವಸ್ತುಗಳನ್ನು ಕೊಳ್ಳಲು ನಾ ಮುಂದು, ತಾ ಮುಂದು ಅಂತ ಕಿಕ್ಕಿರಿದು ತುಂಬಿದ್ರು.
ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತದೆ ಬೆಲೆ ಏರಿಕೆ ಶಾಕ್..!! title=

Inflation In Varamahalakshmi Festival: ಇಂದು ನಾಡಿನೆಲ್ಲೆಡೆ ಬಹಳ ವಿಜೃಂಭಣೆಯಿಂದ "ವರಮಹಾಲಕ್ಷ್ಮಿ" ಹಬ್ಬವನ್ನು ಆಚರಿಸಲಾಗುತ್ತಿದೆ. ಯಾವುದಾದರೂ ಹಬ್ಬ ಬಂತೆಂದರೆ ಸಾಕು ಮಾರುಕಟ್ಟೆಯಲ್ಲಿ ಜನಜಾತ್ರೆಯೇ ಸೇರಿರುತ್ತದೆ. ಅದರಲ್ಲೂ, ಇಂದು ವರಮಹಾಲಕ್ಷ್ಮಿ ಹಬ್ಬ. ಇಂದೂ ಮುಂಜಾನೆಯಿಂದಲೂ ಕೂಡ ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಕೆ‌ಆರ್ ಮಾರುಕಟ್ಟೆಯಲ್ಲಿ ಜನ ಸಾಗರವೇ ತುಂಬಿತ್ತು. ಆದರೆ, ಈ ಬಾರಿಯ ವರಮಹಾಲಕ್ಷ್ಮಿ ಹಬ್ಬಕ್ಕೂ ಕೂಡ ಬೆಲೆ ಏರಿಕೆ ಬಿಸಿಯಿಂದಾಗಿ ಜನರು ತತ್ತರಿಸಿದ್ದಾರೆ. ಬೆಲೆ ಏರಿಕೆಯ ನಡುವೆಯೂ ಹಬ್ಬ ಮಾಡೋಣ ಅಂತ ಬಂದ‌ ಗ್ರಾಹಕರ ಜೇಬಿಗೆ ಮತ್ತೆ ಕತ್ತರಿಯೂ ಬಿದ್ದಾಗಿದೆ.

ಹೌದು... ವರಮಹಾಲಕ್ಷ್ಮಿ ಹಬ್ಬದ (Varamahalakshmi Festival) ಪ್ರಯುಕ್ತ ಇಂದು ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಸಿದ್ದ ಮಾರುಕಟ್ಟೆಯಾದ ಕೆ‌ಆರ್ ಮಾರ್ಕೆಟ್‌ನಲ್ಲಿ ಅಕ್ಷರಶಃ ಜನಜಾತ್ರೆಯಾಗಿ ಮಾರ್ಪಟ್ಟಿತ್ತು. ಹೂವು ಹಣ್ಣು ಖರೀದಿಗಾಗಿ ಜನ ಮುಗಿಬಿದ್ದಿದ್ರು. ತಾಯಿ ಮಹಾಲಕ್ಷ್ಮಿಯನ್ನ ಆರಾಧಿಸೋಕೆ ಬೇಕಾದಂತಹ ಅಗತ್ಯವಸ್ತುಗಳನ್ನು ಕೊಳ್ಳಲು ನಾ ಮುಂದು, ತಾ ಮುಂದು ಅಂತ ಕಿಕ್ಕಿರಿದು ತುಂಬಿದ್ರು. ಕೆ.ಆರ್ ಮಾರುಕಟ್ಟೆಯಲ್ಲಿ ಕೊಂಚ ಕಡಿಮೆ‌ ಬೆಲೆಯಲ್ಲಿ ವಸ್ತುಗಳು ಲಭ್ಯವಾಗ್ತವೆ‌ ಎಂದು ನಿರೀಕ್ಷೆಯಿಂದ ಬಂದ ಗ್ರಾಹಕರಿಗೆ ಶಾಕ್ (Shock For Customers) ಗೆ ಒಳಗಾಗಿದ್ದರು. 

ಇದನ್ನೂ ಓದಿ- Ten Rupee Coins: ನಿಮ್ಮ ಬಳಿಯೂ 10 ರೂ. ನಾಣ್ಯ ಇದ್ಯಾ? ಚಿಂತಿಸುವ ಅಗತ್ಯವೇ ಇಲ್ಲ ಆರ್‌ಬಿ‌ಐನ ಈ ನಿಯಮ ತಿಳಿಯಿರಿ

ದುಬಾರಿ ದುನಿಯಾದಲ್ಲಿ ಹೂ ಗಳ ಬೆಲೆ...! 
>> ಮಾರು ಸೇವಂತಿಗೆ 150-200 ರೂಪಾಯಿ 
>> ಸೇವಂತಿಗೆ ಹಾರ 1000 - 1500 ರೂಪಾಯಿ
>> ರೋಸ್ ಹಾರ - 700 ರೂಪಾಯಿ 
>> ಜೋಡಿ ಕಮಲ  70 - 100 ರೂಪಾಯಿ
>> ಒಂದು ಮಲ್ಲಿಗೆ ಹೂವಿನ ಹಾರಕ್ಕೆ - 400 ರೂಪಾಯಿ 
>> ಕನಕಾಂಬರ ಹೂವು ಮಾರು - 500-700 ರೂಪಾಯಿ
>> ಕನಕಾಂಬರ- ಬಿಡಿ ಹೂ ಕೆಜಿಗೆ 1,200 -1,500 ರೂಪಾಯಿ 
>> ಮಲ್ಲಿಗೆ ಬಿಡಿ ಹೂ  ಕೆಜಿಗೆ 600 -800 ರೂಪಾಯಿ
 
ಹಬ್ಬಕ್ಕೆ ಗಗನಕ್ಕೇರಿದ ಹಣ್ಣುಗಳ ದರ...!
* ಏಲಕ್ಕಿ ಬಾಳೆ ಕೆ.ಜಿಗೆ -120 ರಿಂದ 140 ರೂಪಾಯಿ 
* ಸೇಬು ಕೆ.ಜಿ-200-300 ರೂಪಾಯಿ 
* ಕಿತ್ತಳೆ ಕೆ.ಜಿ -150 ರಿಂದ 200 ರೂಪಾಯಿ 
* ದ್ರಾಕ್ಷಿ ಕೆ.ಜಿ -180-200 ರೂಪಾಯಿ 
* ಪೈನಾಪಲ್ ಒಂದಕ್ಕೆ -80 ರೂಪಾಯಿ 
* ದಾಳಿಂಬೆ-150-200 ರೂಪಾಯಿ 

ಇತರೆ ವಸ್ತುಗಳ ಬೆಲೆ: 
- ಬಾಳೆ ಕಂಬ ಜೋಡಿಗೆ  -50 ರೂಪಾಯಿ 
- ಮಾವಿನ ತೋರಣ - 20 ರೂಪಾಯಿ
- ವಿಳ್ಯದೆಲೆ 100 ಎಲೆಗೆ - 150 ರೂಪಾಯಿ
- ತೆಂಗಿನಕಾಯಿ 3ಕ್ಕೆ - 100 ರೂಪಾಯಿ

ಇದನ್ನೂ ಓದಿ- ನಿಮ್ಮಲ್ಲಿ ಈ ಅರ್ಹತೆ ಇದ್ದರೆ ಸಾಕು ಅಂಬಾನಿ ಮನೆ ಆಂಟಿಲಿಯಾದಲ್ಲಿ ಕೆಲಸ ಪಡೆಯಲು !ಕೋಟಿಗಳಲ್ಲಿ ಇರುವುದು ವೇತನ ಪ್ಯಾಕೇಜ್

ಒಂದೆಡೆ ಹಬ್ಬದ ಸಂದರ್ಭದಲ್ಲಿ ಬೆಲೆ ಏರಿಕೆ (Price Hike) ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಹಕರು ಈ ದುಬಾರಿ ದುನಿಯಾದಲ್ಲಿ ಹಬ್ಬ ಮಾಡುವುದಾದರೂ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತೊಂದೆಡೆ ತಮ್ಮ ಹಳೆ ವರಸೆಯಲ್ಲೇ ಪ್ರತಿಕ್ರಿಯಿಸಿರುವ ವ್ಯಾಪಾರಿಗಳು ನಮಗೂ ವಸ್ತುಗಳು ದುಬಾರಿ ಬೆಲೆಯಲ್ಲೇ ಸಿಗುವುದು. ಆಹಾಗಾಗಿ, ಹಬ್ಬದ ಸಂದರ್ಭದಲ್ಲೂ ಹೂ-ಹಣ್ಣು ಇತ್ಯಾದಿ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಲೇಬೇಕು ಎಂದು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News