ನವದೆಹಲಿ:  GST Update - ನೋಟಿಸ್‌ ಅವಧಿಯಲ್ಲಿ ನೌಕರರು ಮಾಡಿದ ಕೆಲಸದ ಪಾವತಿಯ ಮೇಲೆ, ಗುಂಪು ವಿಮಾ ಪಾಲಿಸಿ ಮತ್ತು ಉದ್ಯೋಗಿಗಳ ಮೊಬೈಲ್‌ ಫೋನ್‌ ಬಿಲ್‌ಗಳ ಪಾವತಿಗೆ ಉದ್ಯೋಗಿಗಳಿಂದ ಹೆಚ್ಚುವರಿ ಪ್ರೀಮಿಯಂ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆಯ ಮುಂಗಡ ತೀರ್ಪಿನ ಪ್ರಾಧಿಕಾರ  (Authority for Advance Ruling) ತಿಳಿಸಿದೆ. ಉದ್ಯೋಗದಾತರು ಇದಕ್ಕಾಗಿ GST (Goods and Services Tax) ಪಾವತಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಸಂಪೂರ್ಣ ಆದೇಶ ಏನು? (GST Update)
ಆದೇಶದ ಪ್ರಕಾರ, ನೋಟಿಸ್ ಪಾವತಿಯ ಸಂದರ್ಭದಲ್ಲಿ, ಕಂಪನಿಯು ವಾಸ್ತವದಲ್ಲಿ ಉದ್ಯೋಗಿಗೆ 'ಸೇವೆಯನ್ನು ಒದಗಿಸುತ್ತಿದೆ' ಮತ್ತು ಆದ್ದರಿಂದ ಅದರ ಮೇಲೆ ಜಿಎಸ್‌ಟಿ ಅನ್ವಯಿಸಬೇಕು. GST ಯ ನಿಯಮಗಳ ಅಡಿಯಲ್ಲಿ, ಸೇವೆಯ ಪೂರೈಕೆ ಎಂದು ಪರಿಗಣಿಸಲಾದ ಪ್ರತಿಯೊಂದು ಚಟುವಟಿಕೆಯ ಮೇಲೆ GST ತೆರಿಗೆಯನ್ನು ವಿಧಿಸಲಾಗುತ್ತದೆ.


ನೋಟಿಸ್ ಅವಧಿಯ ಹಣಕ್ಕೂ ಜಿಎಸ್‌ಟಿ ಪಾವತಿಸಬೇಕಾಗುತ್ತದೆ
ಉದ್ಯೋಗಿ ತನ್ನ ಕೆಲಸವನ್ನು ತೊರೆಯುವಾಗ ಕಂಪನಿಯಲ್ಲಿ ಕೆಲವು ದಿನಗಳ ನೋಟಿಸ್ ಅವಧಿಯನ್ನು ಪೂರೈಸಬೇಕು. ನಿಮ್ಮ ಜಾಗದಲ್ಲಿ ಕಂಪನಿಯು ಬೇರೆಯವರನ್ನು ನೇಮಿಸಿಕೊಳ್ಳಲು ಈ ಸಮಯವನ್ನು ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ಈ ಸೂಚನೆಯ ಅವಧಿಯು ಸುಮಾರು 30 ದಿನಗಳದ್ದಾಗಿರುತ್ತದೆ. ಇದಕ್ಕಾಗಿ ಕಂಪನಿಯು ನಿಮಗೆ ಹಣ ಪಾವತಿಸುತ್ತದೆ. ಆದರೆ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್‌ನ ಹೊಸ ನಿಯಮಗಳ (New Rule) ಪ್ರಕಾರ, ಕಂಪನಿಯು ಈ ಮೊತ್ತಕ್ಕೆ ಜಿಎಸ್‌ಟಿ ಪಾವತಿಸಬೇಕಾಗಲಿದೆ. 


ಇದನ್ನೂ ಓದಿ-Pension : ಈಗ ಕಾರ್ಮಿಕರಿಗೂ ಸಿಗಲಿದೆ ಪಿಂಚಣಿ : ₹36000 ಪಿಂಚಣಿಗೆ ₹2 ಠೇವಣಿ!


ಪಾಲಿಸಿ ಮತ್ತು ಇತರ ಬಿಲ್‌ಗಳ ಮೇಲೂ ಜಿಎಸ್‌ಟಿ ಹೊರೆ (GST On Notice)
ದಿ ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, ಇದರ ಹೊರತಾಗಿ, ಕಂಪನಿಯು ಗುಂಪು ವಿಮಾ ಪಾಲಿಸಿಯನ್ನು ತೆಗೆದುಕೊಂಡರೆ ಮತ್ತು ಅದರ ಪ್ರೀಮಿಯಂನ ಒಂದು ಭಾಗವನ್ನು ತನ್ನ ಉದ್ಯೋಗಿಯಿಂದ ವಿಧಿಸಿದರೆ, ಕಂಪನಿಯು ಆ ಹೆಚ್ಚುವರಿ ಪ್ರೀಮಿಯಂ ಮೊತ್ತದ ಮೇಲೆ ಜಿಎಸ್‌ಟಿಯನ್ನು ಪಾವತಿಸಬೇಕಾಗಲಿದೆ. ಇದಲ್ಲದೆ, ಕಂಪನಿಯು ಮೊಬೈಲ್ ಬಿಲ್ ಪಾವತಿಸಿದರೆ, ಅದಕ್ಕೂ ಜಿಎಸ್‌ಟಿ ಪಾವತಿಸಬೇಕು. ಮೊಬೈಲ್ ಬಿಲ್‌ ಈ ಮೊದಲೇ ಸ್ವಲ್ಪ ಪ್ರಮಾಣದ ಜಿಎಸ್‌ಟಿ ಒಳಗೊಂಡಿರುತ್ತದೆ.


ಇದನ್ನೂ ಓದಿ-Bank Holidays : ಬ್ಯಾಂಕ್ ಗ್ರಾಹಕರ ಗಮನಕ್ಕೆ: ಡಿಸೆಂಬರ್ ನಲ್ಲಿ 12 ದಿನ ಬ್ಯಾಂಕ್ ಬಂದ್


ಉದ್ಯೋಗಿಗಳ ಜೇಬಿನ ಮೇಲೆ ಪರಿಣಾಮ ಬೀರಲಿದೆ
ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್‌ನ ಆದೇಶದ ಪ್ರಕಾರ, ಕಂಪನಿಗಳು ಈ ಸೇವೆಗಳ ಮೇಲೆ ಜಿಎಸ್‌ಟಿ ಪಾವತಿಸಬೇಕಾಗಲಿದೆ. ಆದರೆ ಕಂಪನಿಗಳು ಹೆಚ್ಚಾಗಿ ಇಂತಹ ಸೇವೆಗಳ ಹೊರೆಯನ್ನು ಉದ್ಯೋಗಿಗಳ ಮೇಲೆ ಹಾಕುತ್ತವೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಇದು ಉದ್ಯೋಗಿಗಳ ಜೇಬಿಗೆ ಹೊರೆ ಎಂದರೆ ತಪ್ಪಾಗಲಾರದು.


ಇದನ್ನೂ ಓದಿ-PF Interest Credit: Good News: ಟ್ವೀಟ್ ಮಾಡುವ ಮೂಲಕ ತನ್ನ ಖಾತೆದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ EPFO


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ