PF Interest Credit: Good News: ಟ್ವೀಟ್ ಮಾಡುವ ಮೂಲಕ ತನ್ನ ಖಾತೆದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ EPFO

PF Interest Rate - ಒಟ್ಟು 21.38 ಕೋಟಿ ಖಾತೆದಾರರ ಖಾತೆಗೆ ಹಣ ವರ್ಗಾವಣೆಯಾಗಿದ್ದು, ನಿಮ್ಮ ಖಾತೆಗೆ ಬಡ್ಡಿ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡ ಪರಿಶೀಲಿಸಬೇಕು ಎಂದು EPFO ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದೆ.

Written by - Nitin Tabib | Last Updated : Nov 30, 2021, 06:05 PM IST
  • ಒಟ್ಟು 21.38 ಕೋಟಿ PF ಖಾತೆದಾರರ ಖಾತೆಗೆ ಬಡ್ಡಿ ಪಾವತಿಸಿದ ಸರ್ಕಾರ.
  • ನೀವೂ ಕೂಡ ನಿಮ್ಮ ಖಾತೆಯನ್ನು ಈಗಲೇ ಪರಿಶೀಲಿಸಿ.
  • ಮನೆಯಲ್ಲಿಯೇ ಕುಳಿತು ಖಾತೆ ವಿವರ ಹೀಗೆ ತಿಳಿದುಕೊಳ್ಳಿ
PF Interest Credit: Good News: ಟ್ವೀಟ್ ಮಾಡುವ ಮೂಲಕ ತನ್ನ ಖಾತೆದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ EPFO title=
PF interest rate 2021-22 (File Photo)

PF interest rate 2021-22: ದೇಶದ ಕೋಟ್ಯಂತರ ನೌಕರರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.  ನೀವು ಸಹ PF ಬಡ್ಡಿಯ ಹಣಕ್ಕಾಗಿ ಕಾಯುತ್ತಿದ್ದರೆ, ಈಗ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ತ್ವರಿತವಾಗಿ ಪರಿಶೀಲಿಸಿ. ಒಟ್ಟು 21.38 ಕೋಟಿ ಖಾತೆದಾರರ ಖಾತೆಗೆ ಹಣ ವರ್ಗಾವಣೆಯಾಗಿದೆ. ಹಾಗಾಗಿ ನಿಮ್ಮ ಖಾತೆಗೆ ಬಡ್ಡಿ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಎಂದು ಇಪಿಎಫ್ ಒ ಟ್ವೀಟ್ (EPFO Tweet) ಮೂಲಕ ಮಾಹಿತಿ ನೀಡಿದೆ.  ನಿಮ್ಮ ಖಾತೆಯ ಬ್ಯಾಲೆನ್ಸ್ ಹೇಗೆ ಪೈಶೀಲಿಸಬೇಕು ಎಂಬುದನ್ನು ಈ ಸುದ್ದಿಯ ಕೊನೆಯ ಭಾಗದಲ್ಲಿ ಹೇಳಿಕೊಡಲಿದ್ದೇವೆ.

ಈ ಕುರಿತು ಟ್ವೀಟ್ ಮಾಡಿದ EPFO
ಇಪಿಎಫ್‌ಒ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಭಾರತ ಸರ್ಕಾರವು (Government Of India) 2020-21 ರ ಹಣಕಾಸು ವರ್ಷದ ಪಿಎಫ್ ಬಡ್ಡಿಯನ್ನು(PF Interest) ಖಾತೆದಾರರ ಖಾತೆಗೆ ವರ್ಗಾಯಿಸಿದೆ ಎಂದು ಬರೆದಿದೆ. ಇಪಿಎಫ್‌ಒ ಇದುವರೆಗೆ 21.38 ಕೋಟಿ ಖಾತೆಗಳಿಗೆ ಬಡ್ಡಿ ಮೊತ್ತವನ್ನು ವರ್ಗಾಯಿಸಿದೆ.

ಹಲವು ವಿಧಾನಗಳ ಮೂಲಕ ನೀವು PF ಬ್ಯಾಲೆನ್ಸ್ ಪರಿಶೀಲಿಸಬಹುದು
ಕೇಂದ್ರ ಸರ್ಕಾರವು ಭವಿಷ್ಯ ನಿಧಿ ಖಾತೆದಾರರಿಗೆ ಶೇಕಡಾ 8.5 ರ ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತಿದೆ.  ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ನಿಮ್ಮ ಬಳಿ ಹಲವು ವಿಧಾನಗಳಿವೆ SMS, ಮಿಸ್ಡ್ ಕಾಲ್, UMANG ಅಪ್ಲಿಕೇಶನ್ ಮತ್ತು EPFO ​​ನ ಅಧಿಕೃತ ವೆಬ್‌ಸೈಟ್ ಮೂಲಕ ನೀವು ನಿಮ್ಮ PF ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಇದಕ್ಕಾಗಿ ನೀವು ಪಿಎಫ್ ಖಾತೆಯೊಂದಿಗೆ ನೋಂದಾಯಿತ ಮೊಬೈಲ್ ಹೊಂದಿರಬೇಕು. 

1. EPFO Miss Call Service
ನಿಮ್ಮ PF ಖಾತೆಯ ಬ್ಯಾಲೆನ್ಸ್ ಅನ್ನು ನೀವು ಮಿಸ್ ಕಾಲ್ ನೀಡುವ ಮೂಲಕ ಕೂಡ ತಿಳಿಯಬಹುದು.ಇದಕ್ಕಾಗಿ ನೀವು ನಿಮ್ಮ ಇಪಿಎಫ್‌ಒ ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಇದರ ನಂತರ, SMS ಮೂಲಕ, ನಿಮ್ಮ PF ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ನಿಮಗೆ ತಿಳಿಯುತ್ತದೆ. AM-EPFOHO ನಿಂದ ಬ್ಯಾಲೆನ್ಸ್ ಸಂದೇಶ ನಿಮ್ಮ ಮೊಬೈಲ್ ಗೆ ಬರಲಿದೆ. ನಿಮ್ಮ ಕಂಪನಿ ಖಾಸಗಿ ಟ್ರಸ್ಟ್ ಆಗಿದ್ದರೆ ನೀವು ಬಾಕಿ ವಿವರಗಳನ್ನು ಪಡೆಯುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಕಂಪನಿಯನ್ನು ಸಂಪರ್ಕಿಸಬೇಕು.

2. ಈ ರೀತಿ EPF ಆನ್ಲೈನ್ ನಲ್ಲಿ ಬ್ಯಾಲೆನ್ಸ್ ಹಾಗೂ ಪಾಸ್ಬುಕ್ ಪರಿಶೀಲಿಸಿ
>> EPFO ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ EPF ಬ್ಯಾಲೆನ್ಸ್ ಪರಿಶೀಲಿಸುವ ಸೌಲಭ್ಯವನ್ನು ನೀಡಿದೆ. ಇದಕ್ಕಾಗಿ ವೆಬ್‌ಸೈಟ್‌ನ ಮೇಲಿನ ಬಲಭಾಗದಲ್ಲಿ ಇ-ಪಾಸ್‌ಬುಕ್‌ನ ಲಿಂಕ್ ನೀಡಲಾಗಿದೆ.
>> ಭವಿಷ್ಯ ನಿಧಿ ಖಾತೆದಾರರು ತಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ.
>> ವೆಬ್‌ಸೈಟ್‌ನಲ್ಲಿ ಯುಎಎನ್ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿದ ನಂತರ, ಪಾಸ್‌ಬುಕ್ ವೀಕ್ಷಿಸಿ ಬಟನ್ ಕ್ಲಿಕ್ ಮಾಡಿ ಮತ್ತು ನಿಮಗೆ ಬ್ಯಾಲೆನ್ಸ್ ತಿಳಿಯಲಿದೆ. 
EPFO 'UMANG App' ಮೂಲಕ ಕೂಡ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಟ್ರ್ಯಾಕ್ ಮಾಡಬಹುದು. ಇದಕ್ಕಾಗಿ, ಮೊದಲು Member ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದರ ನಂತರ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.

3. ಉಮಂಗ್  ಆ್ಯಪ್ ಮೂಲಕ (Through Umang App)
ಇಪಿಎಫ್‌ಒ ಅಪ್ಲಿಕೇಶನ್ ಉಮಂಗ್ ಮೂಲಕವೂ ನೀವು ಖಾತೆಯ ಬಾಕಿ ತಿಳಿಯಬಹುದು. ಇದಕ್ಕಾಗಿ, ಅಪ್ಲಿಕೇಶನ್‌ನಲ್ಲಿರುವ ಇಪಿಎಫ್‌ಒಗೆ ಹೋಗಿ. ನಂತರ ನೌಕರರ ಕೇಂದ್ರಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ. ನಂತರ ಪಾಸ್‌ಬುಕ್ ವ್ಯೂ ಆಯ್ಕೆಮಾಡಿ ಮತ್ತು ಪಾಸ್‌ಬುಕ್ ವೀಕ್ಷಿಸಲು ಯುಎಎನ್‌ನೊಂದಿಗೆ ಲಾಗ್ ಇನ್ ಮಾಡಿ. ನೀವು ಈ ಅಪ್ಲಿಕೇಶನ್ ಹೊಂದಿಲ್ಲದಿದ್ದರೆ, ಮೊದಲು ಇದನ್ನು ಡೌನ್‌ಲೋಡ್ ಮಾಡಿ ನಂತರ ಅದರಲ್ಲಿ ನೋಂದಾಯಿಸಿ.

4. SMS ಮೂಲಕ ಈ ರೀತಿಯ ಬ್ಯಾಲೆನ್ಸ್ ಪರಿಶೀಲಿಸಿ (Check balance through SMS)
ನಿಮ್ಮ ಇಪಿಎಫ್ ಖಾತೆ (EPF Account) ಯಲ್ಲಿ ಇತ್ತೀಚಿನ ಕೊಡುಗೆ ಎಷ್ಟು ಎಂದು ತಿಳಿಯಲು ನೀವು ಬಯಸಿದರೆ 7738299899 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಿ. ಅದರ ಸ್ವರೂಪವು EPFOHO UAN ENG ಆಗಿರುತ್ತದೆ. ಈ ಸಂದೇಶದ ಮೂಲಕ, ಇಂಗ್ಲಿಷ್‌ನಲ್ಲಿ ಇಪಿಎಫ್ ಕೊಡುಗೆಯ ಮಾಹಿತಿಯನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ನೀವು ಈ ಸಂದೇಶವನ್ನು ಹಿಂದಿಯಲ್ಲಿ ಬಯಸಿದರೆ, ನೀವು ಅದನ್ನು EPFOHO UAN HIN ಎಂದು ಬರೆದು ಸಂದೇಶ ಕಳುಹಿಸಬೇಕು. ಈ ಎಸ್‌ಎಂಎಸ್ ಸೇವೆ ಪಂಜಾಬಿ, ಮರಾಠಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿಯೂ ಲಭ್ಯವಿದೆ.

ಇದನ್ನೂ ಓದಿ-Indian Cricketers Houses : ಟೀಂ ಇಂಡಿಯಾ ಆಟಗಾರರ ಮನೆ ಹೇಗಿದೆ ಗೊತ್ತಾ? ಇಲ್ಲಿವೆ ನೋಡಿ Photos

5. EPF statement ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
>> ಮೊದಲು https://passbook.epfindia.gov.in/MemberPassBook/Login.jsp ವೆಬ್ ಸೈಟ್ ಗೆ ಭೇಟಿ ನೀಡಿ.
>> UAN, ಪಾಸ್ವರ್ಡ್ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ 'ಲಾಗ್ ಇನ್' ಆಗಿ
>>ಲಾಗಿನ್ ಬಳಿಕ ಪಾಸ್ಬುಕ್ ನೋಡಲು ಮೆಂಬರ್ ಐಡಿ ಆಯ್ಕೆ ಮಾಡಿ. ಈ ಪಾಸ್ಬುಕ್ PDF ಫಾರ್ಮ್ಯಾಟ್ ನಲ್ಲಿರುತ್ತದೆ. ಅದನ್ನು ನೀವು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಆದರೆ Exempted PF Trust ಪಾಸ್ಬುಕ್ ಅನ್ನು ನೀವು ನೋಡಲು ಸಾಧ್ಯವಿಲ್ಲ. ಈ ರೀತಿಯ ಸಂಸ್ಥೆಗಳನ್ನು EPFO ಖುದ್ದಾಗಿ ನಿರ್ವಹಿಸುತ್ತದೆ.

ಇದನ್ನೂ ಓದಿ-ಬೆಲೆ ಏರಿಕೆಯ ನಂತರ Jio, Airtel, Vi ಅಗ್ಗದ ಪ್ಲಾನ್ಸ್ : ₹200 ಕ್ಕಿಂತ ಕಡಿಮೆ ಉತ್ತಮ ಪ್ರಯೋಜನಗಳು

6. ಒಂದು ವೇಳೆ ನೀವು ನಿಮ್ಮ ಖಾತೆಯ ಪಾಸ್ವರ್ಡ್ ಮರೆತುಹೋದರೆ, ನೀವು ನಿಮ್ಮ ಪಾಸ್ವರ್ಡ್ ಅನ್ನದು ರಿಸೆಟ್ ಮಾಡಬಹುದು. ಇದಕ್ಕಾಗಿ EPFO ಸದಸ್ಯರು ಇ-ಸೇವಾ ವೆಬ್ ಸೈಟ್ https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಬೇಕು.

ಇದನ್ನೂ ಓದಿ-Vijay Mallya ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News