ದಸರಾಗೂ ಮುನ್ನವೇ ಸರ್ಕಾರಿ ನೌಕರರ ವೇತನ ಹೆಚ್ಚಳ ಖಚಿತ ! 27,000 ದಷ್ಟು ಏರಿಕೆಯಾಗಲಿದೆ ಸ್ಯಾಲರಿ
7th Pay Commission DA Hike:ಈ ಬಾರಿ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚಿಸಿದ ಡಿಎಗೆ ಅನುಮೋದನೆ ದೊರೆಯಲಿದೆ. ಎಐಸಿಪಿಐ ಸೂಚ್ಯಂಕ ಅಂಕಿಅಂಶಗಳ ಪ್ರಕಾರ, ಈ ಬಾರಿಯೂ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು.
7th Pay Commission DA Hike : ಈ ಹಬ್ಬದ ಋತುವಿನಲ್ಲಿ ಕೇಂದ್ರ ಸರ್ಕಾರವು ನೌಕರರಿಗೆ ವೇತನ ಹೆಚ್ಚಳದ ಮೂಲಕ ಗಿಫ್ಟ್ ನೀಡಲಿದೆ. ಬಹಳ ದಿನಗಳಿಂದ ಡಿಎ ಹೆಚ್ಚಳಕ್ಕಾಗಿ ಕಾಯುತ್ತಿರುವ ಉದ್ಯೋಗಿಗಳು ಹಿಂದಿನ ತಿಂಗಳುಗಳ ಅರಿಯರ್ಸ್ ಜೊತೆಗೆ ಡಿಎ ಹೆಚ್ಚಳದ ಅಪ್ಡೇಟ್ ಅನ್ನು ಶೀಘ್ರದಲ್ಲೇ ಪಡೆಯಲಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಕೇಂದ್ರ ನೌಕರರ ಡಿಎ ಹೆಚ್ಚಳವನ್ನು ಘೋಷಿಸಬಹುದು.
ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ :
ಈ ಬಾರಿ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚಿಸಿದ ಡಿಎಗೆ ಅನುಮೋದನೆ ದೊರೆಯಲಿದೆ. ಎಐಸಿಪಿಐ ಸೂಚ್ಯಂಕ ಅಂಕಿಅಂಶಗಳ ಪ್ರಕಾರ, ಈ ಬಾರಿಯೂ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು.
ಇದನ್ನೂ ಓದಿ : ಡಿಎ ಮಾತ್ರವಲ್ಲ ಈ ಭತ್ಯೆಯಲ್ಲಿಯೂ ಹೆಚ್ಚಳ : ಸರ್ಕಾರಿ ನೌಕರರ ವೇತನದಲ್ಲಿ 44 ಶೇ. ಏರಿಕೆ
ಜೂನ್‌ನಲ್ಲಿನ ಅಂಕಿ ಅಂಶ ಏನು? :
ಜೂನ್‌ನಲ್ಲಿ ಸೂಚ್ಯಂಕ ಸಂಖ್ಯೆ 136.4 ಪಾಯಿಂಟ್‌ಗಳಷ್ಟಿತ್ತು. ಇದರ ಆಧಾರದ ಮೇಲೆ ಲೆಕ್ಕ ಹಾಕಿದರೆ ಡಿಎ ಸ್ಕೋರ್ 46.24ಕ್ಕೆ ತಲುಪಿದೆ. ಅಂದರೆ ಡಿಎಯಲ್ಲಿ ಒಟ್ಟು ಶೇ.4ರಷ್ಟು ಹೆಚ್ಚಳವಾಗಲಿದೆ.
ಮೂಲ ವೇತನದ ಲೆಕ್ಕಾಚಾರ ಹೇಗಿರುತ್ತದೆ ? (56,900 ರೂ. ಗೆ) :
ಮೂಲ ವೇತನ - 56,900 ರೂ.
ಹೊಸ ಡಿಎ (ಶೇ 46) - ತಿಂಗಳಿಗೆ 26,174 .ರೂ
ಪ್ರಸ್ತುತ ಡಿಎ (ಶೇ 42) - ತಿಂಗಳಿಗೆ 23,898 .ರೂ
ಎಷ್ಟಾಗಿದೆ ಹೆಚ್ಚಳ - ತಿಂಗಳಿಗೆ 2,276 ರೂ
ವಾರ್ಷಿಕ ಹೆಚ್ಚಳ ಎಷ್ಟು - 27,312
ಮೂಲ ವೇತನದ ಲೆಕ್ಕಾಚಾರ ಹೇಗಿರುತ್ತದೆ ? ( 18,000 ರೂಪಾಯಿಗೆ ) :
ಮೂಲ ವೇತನ - ರೂ 18,000
ಹೊಸ ಡಿಎ (ಶೇ 46) - ತಿಂಗಳಿಗೆ 8280 .ರೂ
ಪ್ರಸ್ತುತ ಡಿಎ (ಶೇ 42) - ತಿಂಗಳಿಗೆ 7560.ರೂ
ಎಷ್ಟಾಗಿದೆ ಹೆಚ್ಚಳ - ತಿಂಗಳಿಗೆ 720 . ರೂ
ವಾರ್ಷಿಕ ಹೆಚ್ಚಳ ಎಷ್ಟು - 8640 . ರೂ
ಇದನ್ನೂ ಓದಿ : Trading Tips: F&Oದಲ್ಲಿ ಹಣ ಹೂಡಿಕೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಶೇ. 4ರಷ್ಟು ಡಿಎ ಹೆಚ್ಚಳ :
7ನೇ ವೇತನ ಆಯೋಗದ ಅಡಿಯಲ್ಲಿ ಈ ಬಾರಿಯೂ ಸರ್ಕಾರ ನೌಕರರ ವೇತನವನ್ನು ಶೇ 4ರಷ್ಟು ಹೆಚ್ಚಿಸಲಿದೆ. ಈ ಹೆಚ್ಚಳದ ನಂತರ, ಉದ್ಯೋಗಿಗಳ ಡಿಎ ಶೇಕಡಾ 46 ಕ್ಕೆ ಹೆಚ್ಚಾಗುತ್ತದೆ. ಜುಲೈ 1, 2023 ರಿಂದಲೇ ಜಾರಿಗೆ ಬರುವಂತೆ ಉದ್ಯೋಗಿಗಳು ಅದರ ಪ್ರಯೋಜನವನ್ನು ಪಡೆಯುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಹೆಚ್ಚಿದ ತುಟ್ಟಿಭತ್ಯೆಗಾಗಿ ನೌಕರರು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಅಕ್ಟೋಬರ್ ಅಂತ್ಯದಲ್ಲಿ ನೌಕರರಿಗೆ ಸರ್ಕಾರ ಈ ಉಡುಗೊರೆಯನ್ನು ನೀಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.