ಸರ್ಕಾರಿ ನೌಕರರ ಇದೇ ತಿಂಗಳ ವೇತನದೊಂದಿಗೆ ಖಾತೆ ಸೇರುವುದು ಡಿಎ ಅರಿಯರ್ಸ್ ! ಕೈ ಸೇರುವ ಒಟ್ಟು ವೇತನ ಎಷ್ಟು ಗೊತ್ತಾ ?

7th Pay Commission DA Hike:ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರವಾದ ಬಳಿಕ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿ ದೀಪಾವಳಿಗೂ ಮುನ್ನ ಕೇಂದ್ರ ನೌಕರರಿಗೆ ಹೆಚ್ಚಿಸಿದ ಹಣವನ್ನು ನೀಡಲಾಗುತ್ತದೆ.  

Written by - Ranjitha R K | Last Updated : Oct 11, 2023, 09:55 AM IST
  • ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಕಾಲ ಸನ್ನಿಹಿತವಾಗಿದೆ.
  • ಮುಂದಿನ 15 ದಿನಗಳು ಕೇಂದ್ರ ನೌಕರರಿಗೆ ಬಹಳ ವಿಶೇಷ
  • ಅಕ್ಟೋಬರ್ 15 ಮತ್ತು ಅಕ್ಟೋಬರ್ 24 ರ ನಡುವೆ ಘೋಷಣೆ
ಸರ್ಕಾರಿ ನೌಕರರ ಇದೇ  ತಿಂಗಳ ವೇತನದೊಂದಿಗೆ ಖಾತೆ ಸೇರುವುದು ಡಿಎ  ಅರಿಯರ್ಸ್ ! ಕೈ ಸೇರುವ ಒಟ್ಟು ವೇತನ ಎಷ್ಟು ಗೊತ್ತಾ ?  title=

7th Pay Commission DA Hike : ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಕಾಲ ಸನ್ನಿಹಿತವಾಗಿದೆ. ಮುಂದಿನ 15 ದಿನಗಳು ಕೇಂದ್ರ ನೌಕರರಿಗೆ ಬಹಳ ವಿಶೇಷವಾಗಿರುತ್ತದೆ. ಈ 15 ದಿನಗಳಲ್ಲಿ ಸರ್ಕಾರವು ತುಟ್ಟಿಭತ್ಯೆ/ಡಿಆರ್‌ನೆಸ್ ರಿಲೀಫ್ (DA /DR) ಹೆಚ್ಚಳವನ್ನು ಘೋಷಿಸಲಿದೆ ಎನ್ನುವ ಎಲ್ಲಾ ನಿರೀಕ್ಷೆಗಳಿವೆ. ಇದುವರೆಗಿನ ಪಾಟರ್ನ್ ಅನ್ನು ಗಮನಿಸುವುದಾದರೆ ದಸರಾಕ್ಕೂ ಮುನ್ನ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳವನ್ನು ಘೋಷಿಸಲಾಗುತ್ತದೆ. 

ಅಕ್ಟೋಬರ್ 15 ಮತ್ತು ಅಕ್ಟೋಬರ್ 24 ರ ನಡುವೆ ಘೋಷಣೆ : 
ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರವಾದ ಬಳಿಕ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿ ದೀಪಾವಳಿಗೂ ಮುನ್ನ ಕೇಂದ್ರ ನೌಕರರಿಗೆ ಹೆಚ್ಚಿಸಿದ ಹಣವನ್ನು ನೀಡಲಾಗುತ್ತದೆ. ಈ ಪ್ರಕಾರವಾಗಿ ಹೇಳುವುದಾದರೆ ಈ ಬಾರಿಯೂ ಅಕ್ಟೋಬರ್ 15 ಮತ್ತು ಅಕ್ಟೋಬರ್ 24 ರ ನಡುವೆ ಡಿಎ ಹೆಚ್ಚಳವನ್ನು ಘೋಷಿಸಬಹುದು ಎಂದು ಮೂಲಗಳು ಹೇಳುತ್ತವೆ. ಅಂದರೆ, ಅಕ್ಟೋಬರ್ 24 ರ ಮೊದಲು ಡಿಎ ಹೆಚ್ಚಳವಾಗುವ ಸಂಪೂರ್ಣ ಭರವಸೆ ಇದೆ  ಎನ್ನಲಾಗಿದೆ. ಈ ಬಾರಿ ಡಿಎ ಶೇ.3ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಸ್ತುತ ಕೇಂದ್ರ ನೌಕರರು ಶೇ 42ರಷ್ಟು ಡಿಎ ಪಡೆಯುತ್ತಿದ್ದಾರೆ. 3 ಪ್ರತಿಶತದಂತೆ ತುಟ್ಟಿಭತ್ಯೆ ಹೆಚ್ಚಳವಾದರೆ ಈ ಬಾರಿ  ಒಟ್ಟು ತುಟ್ಟಿಭತ್ಯೆ ಶೇ.45ಕ್ಕೆ ಹೆಚ್ಚಾಗಬಹುದು. ಆದರೆ, ಕೇಂದ್ರ ನೌಕರರು ಡಿಎಯನ್ನು ಶೇ 4ರಷ್ಟು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ : ಈ ರಾಷ್ಟ್ರೀಯ ಬ್ಯಾಂಕ್ ವಿರುದ್ದ ಆರ್ ಬಿಐ ಕ್ರಮ ! ಲಕ್ಷಾಂತರ ಗ್ರಾಹಕರ ಮುಂದಿರುವ ಆಯ್ಕೆ ಏನು ?

47 ಲಕ್ಷ ಕೇಂದ್ರ ನೌಕರರಿಗೆ ಲಾಭ : 
ಈ ಬಾರಿ ಕೇಂದ್ರ ನೌಕರರಿಗೆ ಜುಲೈ 1 ರಿಂದ ಹೆಚ್ಚಿಸಲಾದ ಡಿಎ ಲಾಭ ದೊರೆಯಲಿದೆ. ಅಂದರೆ, ನೌಕರರಿಗೆ ಸರ್ಕಾರದಿಂದ ಮೂರು ತಿಂಗಳ ಡಿಎ ಜೊತೆಗೆ ಹೆಚ್ಚಳವಾದ ವೇತನವನ್ನು ಅಕ್ಟೋಬರ್‌ ನಲ್ಲಿ ನೀಡಲಾಗುವುದು. ಅಂದರೆ, ವೇತನದ ಜೊತೆಗೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನ ಡಿಎ ಬಾಕಿಯನ್ನೂ ಪಾವತಿಸಲಾಗುತ್ತದೆ. ಈ ಹೆಚ್ಚಳದಿಂದ ಸುಮಾರು 47 ಲಕ್ಷ ಕೇಂದ್ರ ನೌಕರರು ಮತ್ತು 68 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. 

ಡಿಎ ಹೆಚ್ಚಳದ ಮೇಲೆ  ಚುನಾವಣಾ  ಪ್ರಭಾವ  ಏನು ? : 
ಮಧ್ಯಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಈಗಾಗಲೇ ಪ್ರಕಟಿಸಿದೆ. ಆದರೆ ಇದು ಕೇಂದ್ರ ನೌಕರರ ಡಿಎ ಹೆಚ್ಚಳದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ವಾಸ್ತವವಾಗಿ, ಏಳನೇ ವೇತನ ಆಯೋಗದ ಅಡಿಯಲ್ಲಿ, ಉದ್ಯೋಗಿಗಳ ಡಿಎಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಇದು ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ನಿಗದಿತ ಕಾರ್ಯವಿಧಾನವಾಗಿದೆ. ಹೀಗಾಗಿ ಚುನಾವಣಾ ಆಯೋಗದ ಘೋಷಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

 ಇದನ್ನೂ ಓದಿ : ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿವೆ ಈ 4 ಬ್ಯಾಂಕ್ ಗಳು! ಇಲ್ಲಿದೆ ವರದಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News