ಇಸ್ರೇಲ್ ಯುದ್ದ ಪರಿಣಾಮ : ಕೇವಲ 2 ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆಯಾಗಿದ್ದು ಎಷ್ಟು ಗೊತ್ತಾ?

Gold-Silver Price Today:ಇಸ್ರೇಲ್ ಯುದ್ದ ಪರಿಣಾಮದಿಂದಾಗಿ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಿದೆ. ಕಳೆದ 2 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 1,000 ರೂ.ಗಳ ಏರಿಕೆ ಕಂಡು ಬಂದಿದೆ.  

Written by - Ranjitha R K | Last Updated : Oct 11, 2023, 11:45 AM IST
  • 3000 ರೂ.ಗಳಷ್ಟು ಏರಿಕೆ ಕಾಣಬಹುದು ಚಿನ್ನ
  • MCX ನಲ್ಲಿ ಬೆಳ್ಳಿ ಕೂಡ ದುಬಾರಿ
  • ಚಿನ್ನ ಏಕೆ ದುಬಾರಿಯಾಗುತ್ತಿದೆ?
ಇಸ್ರೇಲ್ ಯುದ್ದ ಪರಿಣಾಮ : ಕೇವಲ 2 ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆಯಾಗಿದ್ದು ಎಷ್ಟು ಗೊತ್ತಾ?  title=

Gold-Silver Price Today : ಕಳೆದ ಒಂದು ತಿಂಗಳ ಚಿನ್ನದ ಬೆಲೆಯನ್ನು ಗಮನಿಸಿದಾಗ ಈ ಬಾರಿ ದೀಪಾವಳಿ ಮತ್ತು ಧನತ್ರಯೋದಶಿಗೆ ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿಸಬಹುದು ಎಂದೇ ಹೇಳಲಾಗುತ್ತಿತ್ತು. ಆದರೆ ಕೇವಲ ಎರಡೇ ದಿನಗಳಲ್ಲಿ ಸನ್ನಿವೇಶ ಬದಲಾಗಿದೆ. ಸದ್ಯದ ಪರಿಸ್ಥಿತಿಯನ್ನು ನೋಡುತ್ತಿದ್ದರೆ ಈ ಬಾರಿ ಚಿನ್ನದ ದರ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎಂದೇ  ವಿಶ್ಲೇಷಿಸಲಾಗುತ್ತಿದೆ.  ಇಸ್ರೇಲ್ ಯುದ್ದ ಪರಿಣಾಮದಿಂದಾಗಿ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಿದೆ. ಕಳೆದ 2 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 1,000 ರೂ.ಗಳ ಏರಿಕೆ ಕಂಡು ಬಂದಿದೆ.  

3000 ರೂ.ಗಳಷ್ಟು  ಏರಿಕೆ ಕಾಣಬಹುದು ಚಿನ್ನ :
ಇಂದು, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ಶೇಕಡಾ 0.07 ರಷ್ಟು ಏರಿಕೆಯಾಗಿ 57,670 ರೂಪಾಯಿಗಳ ಮಟ್ಟದಲ್ಲಿದೆ.  ತಜ್ಞರ ಪ್ರಕಾರ, ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯನ್ನು  ನಿರೀಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಸುಮಾರು 2500 ರಿಂದ 3000 ರೂ.ವರೆಗೆ ಏರಿಕೆ ಕಾಣುವ ಸಾಧ್ಯತೆ ಇದೆ.  

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಕುಸಿತ..!

MCX ನಲ್ಲಿ ಬೆಳ್ಳಿ ಕೂಡ ದುಬಾರಿ :
ಇಂದು ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ  ಶೇಕಡಾ 0.19 ರಷ್ಟು ಏರಿಕೆಯಾಗಿ 69,046 ರೂಪಾಯಿಗಳ ಮಟ್ಟದಲ್ಲಿದೆ.  ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಯುಎಸ್ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ1,860.20 ಡಾಲರ್ ಆಗಿದೆ. ಇದಲ್ಲದೇ ಪ್ರತಿ ಔನ್ಸ್ ಬೆಳ್ಳಿಯ ಬೆಲೆ 21.82 ಡಾಲರ್ ಆಗಿದೆ. 

ಚಿನ್ನ ಏಕೆ ದುಬಾರಿಯಾಗುತ್ತಿದೆ? :
IBJA ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಅವರ ಪ್ರಕಾರ, ಇಸ್ರೇಲ್ ಮತ್ತು ಹಮಾಸ್ ಯುದ್ಧದಿಂದಾಗಿ, ಪ್ರತಿಯೊಬ್ಬರೂ ಈ ಸಮಯದಲ್ಲಿ ಸುರಕ್ಷಿತ ಹೂಡಿಕೆ ಆಯ್ಕೆಗಳನ್ನು ಹುಡುಕುತ್ತಿದ್ದಾರೆ.  ಇದರಿಂದಾಗಿ ಚಿನ್ನದ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಕಾರಣದಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಅಲ್ಪಾವಧಿಯಲ್ಲಿ ಚಿನ್ನದ ಬೆಲೆ 58,500 ರೂ.ವರೆಗೆ  ತಲುಪುವ ಸಾಧ್ಯತೆ ಇದೆ. 

ಇದನ್ನೂ ಓದಿ ಸರ್ಕಾರಿ ನೌಕರರ ಇದೇ ತಿಂಗಳ ವೇತನದೊಂದಿಗೆ ಖಾತೆ ಸೇರುವುದು ಡಿಎ ಅರಿಯರ್ಸ್ ! ಕೈ ಸೇರುವ ಒಟ್ಟು ವೇತನ ಎಷ್ಟು ಗೊತ್ತಾ ?

22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು? :
ದೆಹಲಿ - 53,800 ರೂ.
ಬೆಂಗಳೂರು - 53,650 ರೂ. 
ಚೆನ್ನೈ - 53,800 ರೂ.
ಅಹಮದಾಬಾದ್‌ - 53,700 ರೂ. 
ಹೈದರಾಬಾದ್ - 53,650 ರೂ. 
ಕೋಲ್ಕತ್ತಾ - 53,650 ರೂ. 
ಮುಂಬೈ - 53,650 ರೂ. 

ಇಂದಿನ ಬೆಲೆಯನ್ನು ಈ ರೀತಿ ಪರಿಶೀಲಿಸಿ
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ನಂಬರ್ ನಿಂದ ಮಿಸ್ಡ್ ಕಾಲ್ ಕೊಡುತ್ತಿರೋ ಅದೇ ನಂಬರ್ ಗೆ ಮೆಸೇಜ್ ಬರುತ್ತದೆ. 

( ಸೂಚನೆ : ಈ ಮೇಲಿನ ದರಗಳನ್ನು ಈ ಸುದ್ದಿ ಬರೆಯುವ ಹೊತ್ತಿನ ಆಧಾರದ ಮೇಲೆ ನೀಡಲಾಗಿದೆ. ಬೇರೆ ಬೇರೆ ನಗರಗಳಿಗೆ ಅನುಗುಣವಾಗಿ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡು ಬರಬಹುದು. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News