ನವದೆಹಲಿ: ಅಕ್ಟೋಬರ್ 1 ರಿಂದ ಅನೇಕ ಪ್ರಮುಖ ಬದಲಾವಣೆಗಳು ನಡೆಯಲಿವೆ. ಈ ಬದಲಾವಣೆಗಳು ನಿಮ್ಮ ಪಾಕೆಟ್ ಮತ್ತು ದೈನಂದಿನ ಜೀವನದ ಮೇಲೆ ನೇರವಾಗಿ ಪ್ರಭಾವ ಬೀರಲಿವೆ. ಈ ಎಲ್ಲಾ ಬದಲಾವಣೆಗಳಲ್ಲಿ ದೊಡ್ಡ ಬದಲಾವಣೆ ವಿಮಾ ಕ್ಷೇತ್ರದಲ್ಲಿ ಆಗಲಿದೆ. ಮುಂದಿನ ತಿಂಗಳಿನಿಂದ ಆರೋಗ್ಯ ವಿಮೆಯ ಸ್ವರೂಪ ಸಂಪೂರ್ಣ ಬದಲಾಗಲಿದೆ. ಇನ್ಮುಂದೆ ಆರೋಗ್ಯ ವಿಮಾ ಪಾಲಿಸಿಯನ್ನು ಮಾರಾಟ ಮಾಡಿದ ನಂತರ, ವಿಮಾ ಕಂಪನಿಗಳು ಬೇಕಾಬಿಟ್ಟಿ ಕ್ಲೇಮ್ ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಒಮ್ಮೆ ಪಾಲಸಿ ತೆಗೆದುಕೊಂಡ ಬಳಿಕ ಹಲವು ದೊಡ್ಡ ಕಾಯಿಲೆಗಳಿಗಾಗಿ ಬೇಕಾಗುತ್ತಿದ್ದ ವೇಟಿಂಗ್ ಪಿರಿಯಡ್ ಕೂಡ ತಗ್ಗಲಿದೆ.


COMMERCIAL BREAK
SCROLL TO CONTINUE READING

ಒಂದು ವೇಳೆ ಸತತವಾಗಿ 8 ವರ್ಷಗಳ ಕಾಲ ನೀವು ಇನ್ಸುರೆನ್ಸ್ ಪಾಲಸಿಗೆ ಪ್ರಿಮಿಯಂ ಅನ್ನು ಪಾವತಿಸಿದ್ದರೆ, ಇನ್ಸೂರೆನ್ಸ್ ಪಾಲಸಿ ಕಂಪನಿಗಳು ಯಾವುದೇ ಒಂದು ಕಾರಣ ಹೇಳಿ ಕ್ಲೇಮ್ ರಿಜೆಕ್ಟ್ ಮಾಡುವ ಹಾಗಿಲ್ಲ.


ಹೆಲ್ತ್ ಕವರ್ ನಲ್ಲಿ ಹೆಚ್ಚಿನ ಸಂಖ್ತ್ಯೆಯಲ್ಲಿ ಕಾಯಿಲೆಗಳ ಚಿಕಿತ್ಸೆಗಾಗಿ ಕ್ಲೇಮ್ ಸಿಗಲಿದೆ. ಆದರೆ ಪ್ರಿಮಿಯಂ ದರದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.


ಇನ್ಸುರೆನ್ಸ್ ಸೆಕ್ಟರ್ ನಲ್ಲಾಗುತ್ತಿರುವ ಬದಲಾವಣೆ ಏನು?
- ಕಾಯಿಲೆಗಳ ಕವರೇಜ್ ಮಿತಿಯಲ್ಲಿ ಹೆಚ್ಚಳ.
-ಎಲ್ಲ ಕಂಪನಿಯ ಪಾಲಸಿಗಳಲ್ಲಿ ಕವರ್ ಹೊರಗಿನ ಶಾಶ್ವತ ಕಾಯಿಲೆಗಳು ಸಮನಾಗಿರಲಿವೆ.
- ಕವರೇಜ್ ಹೊರಗಿರುವ ಶಾಶ್ವತ ಕಾಯಿಲೆಗಳ ಸಂಖ್ಯೆ 17 ಕ್ಕೆ ಇಳಿಕೆಯಾಗಲಿದೆ.
-ಸದ್ಯ ಯಾವುದೇ ಪಾಲಸಿಯೊಂದರ ಎಕ್ಸ್ಕ್ಲ್ಯೂಶನ್ 10 ರಷ್ಟು ಆಗಿದ್ದರೆ. 17 ಆದ ಮೇಲೆ ಪ್ರಿಮಿಯಂ ತಗ್ಗಲಿದೆ.
-ಸದ್ಯ ಪಾಲಸಿಯಲ್ಲಿ ಎಕ್ಸ್ಕ್ಲ್ಯೂಶನ್ ಗಳ ಸಂಖ್ಯೆ 30 ಆಗಿದ್ದರೆ, ಇದು 17ಕ್ಕೆ ತಲುಪಿದ ಬಳಿಕ ಪ್ರಿಮಿಯಂ ಹೆಚ್ಚಾಗಲಿದೆ.
- ಹೊಸ ಪ್ರಾಡಕ್ಟ್ ಗಳಲ್ಲಿ ಪ್ರಿಮಿಯಂ 5 ರಿಂದ 20 ಪ್ರತಿಶತ ಏರಿಕೆಯಾಗುವ ಸಾಧ್ಯತೆ.
-ಮಾನಸಿಕ, ಜೆನೆಟಿಕ್ ಕಾಯಿಲೆ, ನರಗಳಿಗೆ ಸಂಬಂಧಿಸಿದ ವಿಕಾರಗಳಿಗೆ ಕವರೇಜ್ ಸಿಗಲಿದೆ.
-ನ್ಯೂರೋ ಡಿಸ್ ಆರ್ಡರ್, ಓರಲ್ ಕಿಮೋಥೆರಪಿ, ರೋಬೋಟಿಕ್ ಸರ್ಜರಿ, ಸ್ತೆಂ ಸೆಲ್ ಥೆರಪಿಗಳಿಗೂ ಕೂಡ ಕವರೇಜ್ ಸಿಗಲಿದೆ.


ಇದನ್ನು ಓದಿ- Cheque ಭರ್ತಿ ಮಾಡುವ ವೇಳೆ ಈ ಎಚ್ಚರಿಕೆ ವಹಿಸಲು ಮರೆಯದಿರಿ... ಶೀಘ್ರವೆ ನಿಯಮ ಬದಲಾಗುತ್ತಿದೆ


ಪ್ರಿ-ಎಕ್ಷಿಸ್ಟೇನ್ಸ್ ಷರತ್ತುಗಳು
- ಪಾಲಿಸಿಯಡಿ 48 ತಿಂಗಳ ಹಿಂದೆ ವೈದ್ಯರು ವರದಿ ಮಾಡಿದ ಯಾವುದೇ ರೋಗವನ್ನು ಪ್ರಿ ಏಕ್ಸಿಸ್ಟ್ನನ್ಸ್ ಪರಿಗಣನೆಯಾಗಲಿದೆ.
- ಪಾಲಿಸಿಯನ್ನು ನೀಡಿದ ಮೂರು ತಿಂಗಳೊಳಗಿನ  ರೋಗಲಕ್ಷಣವನ್ನು ಮೊದಲೇ ಇರುವ ರೋಗವೆಂದು ಪರಿಗಣಿಸಲಾಗುತ್ತದೆ.
- 8 ವರ್ಷಗಳ ಪ್ರೀಮಿಯಂ ನಂತರ ಹಕ್ಕು ನಿರಾಕರಿಸಲಾಗುವುದಿಲ್ಲ.
- 8 ವರ್ಷಗಳು ಪೂರ್ಣಗೊಂಡ ನಂತರ, ಪಾಲಿಸಿಯ ಯಾವುದೇ ಮರುಪರಿಶೀಲನೆ ಅನ್ವಯಿಸುವುದಿಲ್ಲ.
-8 ವರ್ಷಗಳವರೆಗೆ ರಿನ್ಯೋವಲ್ ಆಗಿದ್ದರೆ, ತಪ್ಪು ಮಾಹಿತಿ ನೆಪವೊಡ್ಡಿ  ನಿರಾಕರಿಸುವಂತಿಲ್ಲ.


ಇದನ್ನು ಓದಿ- SBIನ ಈ ಯೋಜನೆಯ ಲಾಭ ಪಡೆದು ಖರೀದಿಸಿ ಕನಸಿನ ಮನೆ, ಬಡ್ಡಿ ದರದಲ್ಲಿ ರಿಯಾಯಿತಿ ಕೂಡ ಸಿಗುತ್ತದೆ


ಅನುಪಾತದಲ್ಲಿ ಯಾವುದೇ ಕಡಿತ ಇಲ್ಲ
- ಫಾರ್ಮಸಿ, ಇಂಪ್ಲಾಂಟ್ ಹಾಗೂ ಡೈಗ್ನೋಸ್ಟಿಕ್ ಅಸೋಸಿಯೇಟ್ ವೈದ್ಯಕೀಯ ವೆಚ್ಚಗಳು ಶಾಮೀಲಾಗುವುದಿಲ್ಲ.
- ಫಾರ್ಮಸಿ, ಇಂಪ್ಲಾಂಟ್ ಹಾಗೂ ಡೈಗ್ನೋಸ್ಟಿಕ್ ಗೆ ಸಂಬಂಧಿಸಿದ ಸಂಪೂರ್ಣ ವೆಚ್ಚದ ಕ್ಲೇಮ್ ಸಿಗಲಿದೆ.
- ಅಸೋಸಿಯೇಟ್ ವೈದ್ಯಕೀಯ ವೆಚ್ಚಗಳನ್ನು ಹೆಚ್ಚಾಗುವುದರಿಂದ ಕ್ಲೇಮ್ ಮೊತ್ತ ಕಡಿಮೆಯಾಗಲಿದೆ.
- ನಿಗದಿತ ಮಿತಿಯನ್ನು ಮೀರಿದ ಕೋಣೆಯ ಪ್ಯಾಕೇಜ್‌ಗಳಲ್ಲಿ ಸಹಾಯಕ ವೈದ್ಯಕೀಯ ವೆಚ್ಚಗಳ ಮೇಲೆ ಹಕ್ಕುಗಳನ್ನು ಕಡಿತಗೊಳಿಸಲಾಗುತ್ತದೆ.
- ಹಕ್ಕಿನಲ್ಲಿ ಐಸಿಯು ಶುಲ್ಕವನ್ನು ಸಹ ಕಡಿತಗೊಳಿಸಲಾಗುವುದಿಲ್ಲ.


ಇದನ್ನು ಓದಿ- ಶೀಘ್ರದಲ್ಲಿಯೇ 65 ಲಕ್ಷ ಪೆನ್ಷನ್ ಧಾರಕರಿಗೆ ಸಿಗಲಿದೆ Modi Govt ನೀಡಲಿದೆಯೇ ಈ ಗಿಫ್ಟ್


ಕಂಪನಿ ಆಯ್ದುಕೊಳ್ಳುವ ಅಧಿಕಾರ ಸಿಗಲಿದೆ
- ಒಂದಕ್ಕಿಂತ ಹೆಚ್ಚು ಕಂಪನಿ ನೀತಿ ಇದ್ದರೆ, ಗ್ರಾಹಕರ ಬಳಿ ಕ್ಲೇಮ್ ಆಯ್ದುಕೊಳ್ಳುವ ಹಕ್ಕು ಇರಲಿದೆ.
- ಒಂದು ಪಾಲಿಸಿಯ ಮಿತಿಯ ನಂತರ, ಉಳಿದ ಹಕ್ಕು ಮತ್ತೊಂದು ಕಂಪನಿಯಿಂದ ಸಾಧ್ಯ.
- ಡಿಡಕ್ಷನ್ ಆಗಿರುವ ಕ್ಲೇಮ್ ಅನ್ನು ಕೂಡ ಎರಡನೇ ಕಂಪನಿಯಿಂದ ಸಾಧ್ಯ.
- ಹಕ್ಕನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು 30 ದಿನಗಳು ಕಾಲಾವಕಾಶ.
- ಕಂಪನಿಯ ಉತ್ಪನ್ನಕ್ಕೆ ವಲಸೆ ಹೋಗುವುದು ಹಳೆಯ ಕಾಯುವ ಅವಧಿಯನ್ನು ಸೇರಿಸುತ್ತದೆ.
- ಟೆಲಿಮೆಡಿಸಿನ್ ವೆಚ್ಚಗಳು ಸಹ ಹಕ್ಕಿನ ಭಾಗವಾಗಿದೆ.
- ಚಿಕಿತ್ಸೆಯ ಮೊದಲು ಮತ್ತು ನಂತರ ಟೆಲಿಮೆಡಿಸಿನ್ ಬಳಕೆ.
- ಟೆಲಿಮೆಡಿಸಿನ್‌ನ ಸಂಪೂರ್ಣ ವೆಚ್ಚವು ಒಪಿಡಿ ವ್ಯಾಪ್ತಿಯೊಂದಿಗೆ ಪಾಲಿಸಿಯಲ್ಲಿ ಲಭ್ಯವಿರುತ್ತದೆ.
- ವೈದ್ಯರಿಗೆ ಟೆಲಿಮೆಡಿಸಿನ್ ಬಳಸಲು ಸೂಚಿಸಲಾಗಿದೆ.
- ಕಂಪನಿಗಳು ಅನುಮೋದನೆ ಪಡೆಯುವುದಿಲ್ಲ, ವಾರ್ಷಿಕ ಮಿತಿ ನಿಯಮ ಅನ್ವಯಿಸುತ್ತದೆ.