ನವದೆಹಲಿ: ಮುಂಬರುವ ಹಬ್ಬದ ಸೀಜನ್ ನಲ್ಲಿ ಒಂದು ವೇಳೆ ನೀವು ನಿಮ್ಮ ಕನಸಿನ ಮನೆಯನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಿಮಗಾಗಿ ಒಂದು ಉತ್ತಮ ಆಫರ್ ಹೊತ್ತು ತಂದಿದೆ. ಇದರಲ್ಲಿ ಬ್ಯಾಂಕ್ ಗೃಹ ಸಾಲವನ್ನು ಅತ್ಯಂತ ರಿಯಾಯಿತಿ ದರದಲ್ಲಿ ನೀಡುತ್ತಿದೆ. ಇದರೊಂದಿಗೆ ಗೃಹ ಸಾಲದ ಬಡ್ಡಿದರದ ಮೇಲೆಯೂ ಕೂಡ ಹಲವು ರಿಯಾಯಿತಿ ಮತ್ತು ಕೊಡುಗೆಗಳನ್ನು ಸಹ ನೀಡಲಾಗುತ್ತಿದೆ. ಹಾಗಾದರೆ ನಿಮಗೆ ರಿಯಾಯಿತಿ ಎಷ್ಟು ಸಿಗಲಿದೆ ಎಂಬುದನ್ನೊಮ್ಮೆ ತಿಳಿಯೋಣ.
ಇದನ್ನು ಓದಿ- PM Kisan ಯೋಜನೆಯ ಲಾಭಾರ್ಥಿ ರೈತರಿಗೆ ಸಿಗಲಿದೆ 10 ಸಾವಿರ ರೂ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮನೆ ಖರೀದಿಸಲು ನೀವು ಸಾಲ ತೆಗೆದುಕೊಂಡರೆ, ನೀವು ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಬ್ಯಾಂಕಿನ ಪ್ರಸ್ತಾಪದಡಿಯಲ್ಲಿ, ವಸತಿ ಸಾಲದ ಪ್ರಕ್ರಿಯೆ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ.
ನೀವು ಸಾಲವನ್ನು ತೆಗೆದುಕೊಂಡು ಕಂತುಗಳನ್ನು ಸರಿಯಾದ ಸಮಯಕ್ಕೆ ಪಾವತಿಸಿದರೆ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ತುಂಬಾ ಉತ್ತಮವಾಗಿದ್ದರೆ, ನೀವು ಬಡ್ಡಿದರದ ಮೇಲೆ 10 ಬೇಸಿಸ್ ಪಾಯಿಂಟ್‌ಗಳವರೆಗೆ ರಿಯಾಯಿತಿ ಪಡೆಯಬಹುದು. ಈ ರೀತಿ, ನೀವು ಅತ್ಯಂತ ಕಡಿಮೆ ಬಡ್ಡಿಗೆ ಗೃಹ ಸಾಲವನ್ನು ಪಡೆಯಲು ಸಾಧ್ಯವಾಗಲಿದೆ.
ಇದನ್ನು ಓದಿ- 2 ವರ್ಷಗಳವರೆಗೆ ಎಲ್ಲಾ ರೀತಿಯ ಲೋನ್ ಮರುಪಾವತಿಸಲು ಸಿಗಲಿದೆ ನೆಮ್ಮದಿ, SBI ತಂದಿದೆ ಈ ಸ್ಕೀಮ್
ನೀವು ಎಷ್ಟು ಮೊತ್ತದ ಸಾಲವನ್ನು ಪಡೆದಿರುವಿರಿ ಎಂಬುದನ್ನು ಆಧರಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರದಲ್ಲಿ ರಿಯಾಯಿತಿ ನೀಡುತ್ತಿದೆ. ಇದೇ ವೇಳೆ, ನೀವು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಗೃಹ ಸಾಲದ ಸಹಾಯಧನಕ್ಕೂ ಅರ್ಜಿ ಸಲ್ಲಿಸಬಹುದು. ಸಾಲ ತೆಗೆದುಕೊಳ್ಳುವಾಗ ನೀವು ಸಬ್ಸಿಡಿಗೆ ಅರ್ಜಿ ಸಲ್ಲಿಸದಿದ್ದರೆ, ನಿಮಗೆ ಲಾಭ ಸಿಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ಪ್ರಸ್ತಾಪದಡಿಯಲ್ಲಿ ನೀವು ಒಂದು ವೇಳೆ ಎಸ್‌ಬಿಐ ಯೊನೊ ಆಪ್ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ಗೃಹ ಸಾಲದ ಬಡ್ಡಿದರದ ಮೇಲೆ ನೀವು ಐದು ಬೇಸಿಸ್ ಪಾಯಿಂಟ್‌ಗಳವರೆಗೆ ರಿಯಾಯಿತಿ ಪಡೆಯಬಹುದು.
ಇದನ್ನು ಓದಿ- ನೌಕರರಿಗೆ ಇಲ್ಲಿದೆ ಸಂತಸದ ಸುದ್ದಿ, ಒಂದು ವರ್ಷ ಸೇವೆ ಸಲ್ಲಿಸಿದವರಿಗೂ ಕೂಡ ಸಿಗಲಿದೆ Gratuity ಲಾಭ !
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು, ನೀವು https://sbiyono.sbi ವೆಬ್‌ಸೈಟ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನೀವು ಬ್ಯಾಂಕಿನ ಟೋಲ್ ಫ್ರೀ ಸಂಖ್ಯೆ 1800112018 ಗೆ ಕರೆ ಮಾಡಬಹುದು.