GPay/Google Pay: ಪ್ರಸಿದ್ಧ ಆನ್‌ಲೈನ್ ಪಾವತಿ ಪ್ಲಾಟ್‌ಫಾರ್ಮ್ ಆಗಿರುವ Gಪೇ/ಗೂಗಲ್ ಪೇ ಇತ್ತೀಚಿನ ದಿನಗಳಲ್ಲಿ ಹಣಕಾಸು ವಹಿವಾಟನ್ನು ತುಂಬಾ ಸುಲಭಗೊಳಿಸಿದೆ. ವಾಸ್ತವವಾಗಿ, ಡಿಜಿಟಲ್ ವಹಿವಾಟುಗಳಿಗಾಗಿ ಹೆಚ್ಚು ಬಳಸಿದ ಅಪ್ಲಿಕೇಶನ್‌ಗಳಲ್ಲಿ ಒಂದಾಗಿರುವ ಗೂಗಲ್ ಪೇ ದೈನಂದಿನ ಡಿಜಿಟಲ್ ವಹಿವಾಟುಗಳನ್ನು ಸುಲಭಗೊಳಿಸಿದ್ದು ತುಂಬಾ ಜನ ಸ್ನೇಹಿ ಆಗಿದೆ. ಈ ಹಿಂದೆ ಇದರಲ್ಲಿ ವಹಿವಾಟು ಹಿಸ್ಟರಿ ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಅಪ್ಲಿಕೇಶನ್‌ನಲ್ಲಿ ಬದಲಾವಣೆಗಳನ್ನು ತಂದ ಬಳಿಕ ಇದರಲ್ಲಿ ಟ್ರ್ಯಾನ್ಸ್ಯಕ್ಷನ್ ಹಿಸ್ಟರಿ ವೀಕ್ಷಣೆಯ ಸೌಲಭ್ಯವೂ ಲಭ್ಯವಿದೆ. 


COMMERCIAL BREAK
SCROLL TO CONTINUE READING

ಗೂಗಲ್ ಪೇ ವಹಿವಾಟು ಇತಿಹಾಸವನ್ನು ಎಲ್ಲಿ ವೀಕ್ಷಿಸಬಹುದು: 
ಗೂಗಲ್ ಪೇ ಅಪ್ಲಿಕೇಶನ್‌ನ ಮುಖಪುಟದ ಕೆಳಭಾಗದಲ್ಲಿ ವಹಿವಾಟಿನ ಇತಿಹಾಸವು ಗೋಚರಿಸುತ್ತದೆ. ವಹಿವಾಟು ಇತಿಹಾಸವನ್ನು ವೀಕ್ಷಿಸಲು ಈ ಹಂತಗಳನ್ನು ಅನುಸರಿಸಿ. 
ಹಂತ- 1: ನಿಮ್ಮ ಮೊಬೈಲ್ ಫೋನ್ ನಲ್ಲಿ ಮೊದಲು ಗೂಗಲ್ ಅಪ್ಲಿಕೇಶನ್ ತೆರೆದು ಸ್ಕ್ರಾಲ್ ಡೌನ್ ಮಾಡಿ. 
ಹಂತ- 2: ಕೆಳಗೆ ನೀವು ವಹಿವಾಟಿನ ಇತಿಹಾಸವನ್ನು ತೋರಿಸು ಎಂಬ ಆಯ್ಕೆಯನ್ನು ನೋಡುತ್ತೀರಿ.
ಹಂತ -3: > ಚಿಹ್ನೆಯನ್ನು ಟ್ಯಾಪ್ ಮಾಡಿ, ನಿಮ್ಮ ವಹಿವಾಟಿನ ಇತಿಹಾಸವು ತೆರೆಯುತ್ತದೆ.
ಹಂತ-4: ಇಲ್ಲಿ ನೀವು ಕಳುಹಿಸಿದ ಮತ್ತು ಸ್ವೀಕರಿಸಿದ ಎಲ್ಲಾ ರೀತಿಯ ವಹಿವಾಹೂಗಳ ವಿವರವನ್ನು ಪಡೆಯುತ್ತೀರಿ. 


ಇದನ್ನೂ ಓದಿ- ಯುಪಿಐ ತಪ್ಪು ವಹಿವಾಟು ನಡೆದಾಗ ಏನು ಮಾಡಬೇಕು? ಚಿಟಿಕೆ ಹೊಡೆಯೋದ್ರಲ್ಲಿ ಈ ರೀತಿ ಹಣ ವಾಪಸ್ ಪಡೆಯಿರಿ!


ಗೂಗಲ್ ಪೇ ವಹಿವಾಟು ಇತಿಹಾಸದಲ್ಲಿ ಏನನ್ನು ವೀಕ್ಷಿಸಬಹುದು: 
ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಮೂಲಕ ನೀವು ಯಾರಿಗಾದರೂ ಹಣವನ್ನು ಕಳುಹಿಸಿದಾಗ, ಅಥವಾ ಯಾರಿಂದಲಾದರೂ ಹಣ ಸ್ವೀಕರಿಸಿದಾಗ ಅದರ ಸಮಯ, ಮೊತ್ತ, ವಹಿವಾಟು ಐಡಿ ಮತ್ತು ಎಲ್ಲಾ ಇತರ ವಿವರಗಳನ್ನು ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಇದನ್ನು ನೀವು ಟ್ರ್ಯಾನ್ಸ್ಯಕ್ಷನ್ ಹಿಸ್ಟರಿಯಲ್ಲಿ ವೀಕ್ಷಿಸಬಹುದು. 


ಆದಾಗ್ಯೂ ಗೂಗಲ್ ಪೇನಲ್ಲಿ ವಹಿವಾಟು ಇತಿಹಾಸವನ್ನು ಡಿಲೀಟ್ ಮಾಡಲು ನಿಮಗೆ ಗೂಗಲ್ ಪೇ ಅಪ್ಲಿಕೇಶನ್‌ನಲ್ಲಿ ಯಾವುದೇ ಆಯ್ಕೆ ಲಭ್ಯವಿಲ್ಲ. ಒಂದೊಮ್ಮೆ ನೀವು ಗೂಗಲ್ ಪೇ ಟ್ರ್ಯಾನ್ಸ್ಯಕ್ಷನ್ ಹಿಸ್ಟರಿ ಡಿಲೀಟ್ ಮಾಡಲು ಬಯಸಿದರೆ ಪರ್ಯಾಯ ಮಾರ್ಗಗಳಿದ್ದು, ಕೆಲವು ಸುಲಭ ಹಂತಗಳನ್ನು ಅನುಸರಿಸಿ ಹಿಸ್ಟರಿ ಕ್ಲಿಯರ್ ಮಾಡಬಹುದು. 


ಇದನ್ನೂ ಓದಿ- ಡಿಎಲ್ , ಆರ್‌ಸಿಗೆ ಡಿಜಿಟಲ್ ಸ್ಪರ್ಶ ನೀಡಲು ಮುಂದಾದ ಸಾರಿಗೆ ಇಲಾಖೆ..!!


ಗೂಗಲ್ ಪೇ ಟ್ರ್ಯಾನ್ಸ್ಯಕ್ಷನ್ ಹಿಸ್ಟರಿ ಡಿಲೀಟ್ ಮಾಡುವ ವಿಧಾನ: 
>> ನಿಮ್ಮ ಫೋನ್‌ನಲ್ಲಿ Google Chrome ಗೆ ಹೋಗಿ.
>>  www.google.com ಗೆ ಹೋಗಿ ಮತ್ತು ನಿಮ್ಮ Google ಖಾತೆಯನ್ನು ಸರ್ಚ್ ಮಾಡಿ.
>> ನಿಮ್ಮ ಗೂಗಲ್ ರುಜುವಾತುಗಳನ್ನು ನಮೂದಿಸುವ ಮೂಲಕ ನಿಮ್ಮ ಖಾತೆಗೆ ಲಾಗಿನ್ ಮಾಡಿ.
>> ಮೇಲಿನ ಮೂಲೆಯಲ್ಲಿ ನೀವು ಮೂರು ಚುಕ್ಕೆಗಳನ್ನು ನೋಡುತ್ತೀರಿ, ಅವುಗಳ ಮೇಲೆ ಕ್ಲಿಕ್ ಮಾಡಿ.
>> 'ಡೇಟಾ ಮತ್ತು ಗೌಪ್ಯತೆ' ಆಯ್ಕೆಮಾಡಿ ಮತ್ತು 'ಇತಿಹಾಸ ಸೆಟ್ಟಿಂಗ್‌ಗಳು' ಗೆ ಹೋಗಿ.
>>  'ವೆಬ್ ಮತ್ತು ಅಪ್ಲಿಕೇಶನ್ ಚಟುವಟಿಕೆ' ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವೆಬ್ ಮತ್ತು ಅಪ್ಲಿಕೇಶನ್ ಚಟುವಟಿಕೆಯನ್ನು ನಿರ್ವಹಿಸಿ.
>> ಹುಡುಕಾಟ ಪಟ್ಟಿಯಲ್ಲಿ ಮೂರು ಚುಕ್ಕೆಗಳು ಗೋಚರಿಸುತ್ತವೆ, ಅದರ ಮೇಲೆ ಕ್ಲಿಕ್ ಮಾಡಿ.
>> 'ಇತರ Google ಚಟುವಟಿಕೆ' ಆಯ್ಕೆಮಾಡಿ ಮತ್ತು Google Pay ಎಕ್ಷ್ಪಿರಿಯನ್ಸ್ ಆಯ್ಕೆಯನ್ನು ಆರಿಸಿ. 
>> Google Pay ಎಕ್ಷ್ಪಿರಿಯನ್ಸ್  (ಅನುಭವದಲ್ಲಿ) 'ಚಟುವಟಿಕೆಯನ್ನು ನಿರ್ವಹಿಸಿ' ಆಯ್ಕೆಯನ್ನು ಟ್ಯಾಪ್ ಮಾಡಿ.
>> ಡ್ರಾಪ್ ಡೌನ್ ಬಾಣದ ಮೇಲೆ ಅಳಿಸು ಕ್ಲಿಕ್ ಮಾಡಿ ಮತ್ತು ಈಗ ನೀವು ಅಳಿಸಲು ಬಯಸುವ ವಹಿವಾಟಿನ ಇತಿಹಾಸವನ್ನು ಆಯ್ಕೆ ಮಾಡಿ. 
>> ಇದರಲ್ಲಿ ನೀವು ದಿನಾಂಕವನ್ನು  ಆಯ್ಕೆಮಾಡಿ ಮತ್ತು ವಹಿವಾಟಿನ ಇತಿಹಾಸವನ್ನು ಅಳಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.