ನವದೆಹಲಿ: ಹಿಂದೂ ಕ್ಯಾಲೆಂಡರ್ ಪ್ರಕಾರ ಹೋಳಿ ಹಬ್ಬವನ್ನು ಪ್ರತಿ ವರ್ಷ ಫಾಲ್ಗುನ ತಿಂಗಳ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನದಂದು ಹೋಲಿಕಾ ದಹನ ಮಾಡಲಾಗುತ್ತದೆ ಮತ್ತು ಮರುದಿನ ಬಣ್ಣ ಆಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಹೋಲಿಕಾ ದಹನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಈ ದಿನದಂದು ಕೈಗೊಳ್ಳುವ ಕೆಲವು ವಿಶೇಷ ಕ್ರಮಗಳು ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ಈ ದಿನ ವಿಷ್ಣು ಮತ್ತು ಪ್ರಹ್ಲಾದನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಈ ದಿನ ದಾನ ಮಾಡುವುದರಿಂದ ಲಕ್ಷ್ಮಿದೇವಿಯ ಆಶೀರ್ವಾದವೂ ದೊರೆಯುತ್ತದೆ. ಅಲ್ಲದೆ ಶುಭ ಫಲಿತಾಂಶಗಳು ದೊರೆಯುತ್ತವೆ. ಈ ದಿನದಂದು ದಾನ ಮಾಡುವುದರಿಂದ ಸಂಪತ್ತು-ಸಮೃದ್ಧಿ ಮತ್ತು ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ. ಹೋಳಿ ದಿನದಂದು ಯಾವ ವಸ್ತುಗಳನ್ನು ದಾನ ಮಾಡಿದರೆ ಮನುಷ್ಯನು ಶ್ರೀಮಂತನಾಗುತ್ತಾನೆ ಎಂದು ತಿಳಿಯಿರಿ.


ಇದನ್ನೂ ಓದಿ: Shani Uday In Kumbha: ಕುಂಭ ರಾಶಿಯಲ್ಲಿ ಶನಿ ಉದಯ, ಈ 5 ರಾಶಿಯವರಿಗೆ ದೊಡ್ಡ ಗಂಡಾಂತರ!


ಹೋಳಿಯಲ್ಲಿ ಈ ವಸ್ತುಗಳನ್ನು ದಾನ ಮಾಡಿ


ಮೇಷ ರಾಶಿ: ಮೇಷ ರಾಶಿಯವರು ನಿರ್ಗತಿಕರಿಗೆ ಬಟ್ಟೆ ಮತ್ತು ಹಣವನ್ನು ದಾನ ಮಾಡಬೇಕು. ಈ ದಿನ ಬಡವರಿಗೆ ಬೆಲ್ಲವನ್ನು ದಾನ ಮಾಡಿದರೆ ಲಾಭವಾಗುತ್ತದೆ.


ವೃಷಭ ರಾಶಿ: ಈ ರಾಶಿಯ ಜನರು ಹೋಳಿ ದಿನದಂದು ಅನ್ನದಾನ ಮಾಡಬಹುದು. ಈ ದಿನದಂದು ಗಾಢ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದು ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ.


ಮಿಥುನ ರಾಶಿ: ಈ ದಿನದಂದು ಹಸಿರು ಬಟ್ಟೆಗಳನ್ನು ದಾನ ಮಾಡುವುದರಿಂದ ವಿಶೇಷ ಲಾಭಗಳು ದೊರೆಯುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ದಿನದಂದು ಹೆಸರು ಬೇಳೆಯನ್ನು ದಾನ ಮಾಡುವುದು ವಿಶೇಷವಾಗಿ ಪ್ರಯೋಜನಕಾರಿ.


ಕರ್ಕಾಟಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕಾಟಕ ರಾಶಿಯ ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಸರು ಬೇಳೆ ಮಿಶ್ರಿತ ಅನ್ನವನ್ನು ನಿರ್ಗತಿಕರಿಗೆ ದಾನ ಮಾಡಬಹುದು. ಇದರಿಂದ ವಿಶೇಷ ಪ್ರಯೋಜನವಾಗಲಿದೆ.


ಸಿಂಹ ರಾಶಿ: ಈ ರಾಶಿಯವರು ಹೋಳಿ ದಿನದಂದು ಗೋಧಿಯನ್ನು ದಾನ ಮಾಡಬೇಕು. ಅಲ್ಲದೆ ಈ ದಿನದಂದು ಜ್ಯೋತಿ, ಮೇಣದಬತ್ತಿಯಂತಹ ವಸ್ತುಗಳನ್ನು ದಾನ ಮಾಡುವುದರಿಂದ ವಿಶೇಷ ಪ್ರಯೋಜನಗಳು ಸಹ ದೊರೆಯುತ್ತವೆ.


ಕನ್ಯಾ ರಾಶಿ: ಈ ರಾಶಿಯ ಜನರು ನಿರ್ಗತಿಕರಿಗೆ ಆಹಾರವನ್ನು ನೀಡಬೇಕು. ಹಾಗೆಯೇ ಮನೆಯ ಹತ್ತಿರವಿರುವ ದೇವಸ್ಥಾನದಲ್ಲಿ ಹತ್ತಿಯನ್ನು ದಾನ ಮಾಡಿದರೆ ಶುಭವಾಗುತ್ತದೆ. 


ತುಲಾ ರಾಶಿ: ಹೋಳಿ ದಿನದಂದು ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಯಾವುದೇ ದೇವಸ್ಥಾನಕ್ಕೆ ಅಥವಾ ಅಗತ್ಯವಿರುವವರಿಗೆ ಸಕ್ಕರೆ, ಕೊತ್ತಂಬರಿ ಅಥವಾ ಸಕ್ಕರೆ ಮಿಠಾಯಿ ದಾನ ಮಾಡಿ. ಇದರಿಂದ ವ್ಯಕ್ತಿಯು ಸಂಪತ್ತು ಮತ್ತು ಧಾನ್ಯಗಳನ್ನು ಪಡೆಯುತ್ತಾನೆ. 


ಇದನ್ನೂ ಓದಿ: Holi 2023 : ಹೋಳಿ ಹಬ್ಬದಂದು ಈ 2 ಬಣ್ಣದ ಬಟ್ಟೆ ಧರಿಸಬೇಡಿ, ಮನೆಯಲ್ಲಿ ದುಷ್ಟ ಶಕ್ತಿಗಳ ಸಮಾಗಮವಾಗುತ್ತೆ


ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಇರುವವರು ಈ ದಿನ ಸಿರಿಧಾನ್ಯ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ದಾನ ಮಾಡಬಹುದು. ಇದರಿಂದ ಗ್ರಹಗಳಿಗೆ ಶಾಂತಿ ಸಿಗುತ್ತದೆ.


ಧನು ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೋಳಿ ದಿನದಂದು ಬೇಳೆಕಾಳು ಮತ್ತು ಹಳದಿ ಬಟ್ಟೆಯನ್ನು ದಾನ ಮಾಡಬೇಕು. ಅಷ್ಟೇ ಅಲ್ಲ, ಈ ಸಮಯದಲ್ಲಿ ಹಣವನ್ನು ಸಹ ದಾನ ಮಾಡಬಹುದು.


ಮಕರ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ರಾಶಿಯವರು ಹಣ್ಣುಗಳು ಮತ್ತು ಯಾವುದೇ ಕಬ್ಬಿಣದ ವಸ್ತುವನ್ನು ಅಗತ್ಯವಿರುವ ವ್ಯಕ್ತಿಗೆ ದಾನ ಮಾಡಬೇಕು.


ಕುಂಭ ರಾಶಿ: ಈ ರಾಶಿಯ ಜನರು ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಉದ್ದಿನ ಬೇಳೆ ಮತ್ತು ಕಂಬಳಿಯನ್ನು ದಾನ ಮಾಡಬೇಕು. ಇದು ವ್ಯಕ್ತಿಗೆ ವಿಶೇಷ ಪ್ರಯೋಜನ ನೀಡುತ್ತದೆ.


ಮೀನ ರಾಶಿ: ಈ ದಿನ ನಿರ್ಗತಿಕರಿಗೆ ಅಥವಾ ಬಡವರಿಗೆ ಹೊಸ ಬಟ್ಟೆಯನ್ನು ದಾನ ಮಾಡಿ. ಇದರೊಂದಿಗೆ 7 ಬಗೆಯ ದಾಳಿಂಬೆಗಳನ್ನೂ ಸಹ ದಾನ ಮಾಡಬಹುದು.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.