Astro Tips: ಇಂತವರು ಅಪ್ಪಿತಪ್ಪಿಯೂ ರುದ್ರಾಕ್ಷಿ ಧರಿಸಬಾರದು, ಶಿವನ ಕೋಪಕ್ಕೆ ತುತ್ತಾಗಬೇಕಾಗುತ್ತದೆ!

ರುದ್ರಾಕ್ಷಿ ಧರಿಸುವ ನಿಯಮಗಳು: ರುದ್ರಾಕ್ಷಿಯನ್ನು ದೇಹದ ಮೇಲೆ, ಕುತ್ತಿಗೆ ಅಥವಾ ಕೈಯಲ್ಲಿ ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವರು ಅಪ್ಪಿತಪ್ಪಿಯೂ ಈ ಮಾಲೆಯನ್ನು ಧರಿಸಬಾರದು. ಹೀಗೆ ಮಾಡಿದ್ರೆ ಅವರ ಕುಟುಂಬದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಬಹುದು.

Written by - Puttaraj K Alur | Last Updated : Mar 4, 2023, 07:43 AM IST
  • ಧಾರ್ಮಿಕ ವಿದ್ವಾಂಸರ ಪ್ರಕಾರ ಮಾಂಸಾಹಾರ ಸೇವಿಸುವವರು ರುದ್ರಾಕ್ಷಿ ಧರಿಸಬಾರದು
  • ಸ್ಮಶಾನದಲ್ಲಿ ರುದ್ರಾಕ್ಷಿಯನ್ನು ಧರಿಸುವುದು ಅಶುಭವೆಂದು ಪರಿಗಣಿಸಲಾಗಿದೆ
  • ರಾತ್ರಿ ಮಲಗುವಾಗ ಯಾವಾಗಲೂ ರುದ್ರಾಕ್ಷಿಯನ್ನು ತೆಗೆಯಬೇಕೆಂದು ಹೇಳಲಾಗಿದೆ
Astro Tips: ಇಂತವರು ಅಪ್ಪಿತಪ್ಪಿಯೂ ರುದ್ರಾಕ್ಷಿ ಧರಿಸಬಾರದು, ಶಿವನ ಕೋಪಕ್ಕೆ ತುತ್ತಾಗಬೇಕಾಗುತ್ತದೆ! title=
ರುದ್ರಾಕ್ಷಿ ಧರಿಸುವ ನಿಯಮಗಳು

ನವದೆಹಲಿ: ಸನಾತನ ಧರ್ಮದಲ್ಲಿ ರುದ್ರಾಕ್ಷಿ ಮಾಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ರುದ್ರಾಕ್ಷಿಯನ್ನು ಭಗವಾನ್ ಶಿವನ ಕಣ್ಣೀರಿನಿಂದ ರಚಿಸಲಾಗಿದೆ ಎಂದು ಹೇಳಲಾಗುತ್ತದೆ, ಆದ್ದರಿಂದ ಇದನ್ನು ಮಹಾದೇವನ ಆಭರಣವೆಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿ ಮಣಿಗಳನ್ನು ಧರಿಸುವುದರಿಂದ ಅನೇಕ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳು ದೊರೆಯುತ್ತವೆಂದು ನಂಬಲಾಗಿದೆ. ಆದರೆ ಪ್ರತಿಯೊಬ್ಬರೂ ಇದನ್ನು ತಮ್ಮಿಚ್ಛೆಯಂತೆ ಧರಿಸಲು ಸಾಧ್ಯವಿಲ್ಲ. ಇದನ್ನು ಧರಿಸಲು ಕೆಲವು ವಿಶೇಷ ನಿಯಮಗಳಿವೆ. ಇದರ ಬಗ್ಗೆ ನಾವು ತಿಳಿದುಕೊಳ್ಳಬೇಕು, ಇಲ್ಲದಿದ್ದರೆ ಶಿವನ ಕೋಪಕ್ಕೆ ತುತ್ತಾಗಬೇಕಾಗುತ್ತದೆ.

ಈ ಜನರು ರುದ್ರಾಕ್ಷಿ ಧರಿಸಬಾರದು

ಮಾಂಸ ತಿನ್ನುವವರು: ಧಾರ್ಮಿಕ ವಿದ್ವಾಂಸರ ಪ್ರಕಾರ ಮಾಂಸಾಹಾರ ಸೇವಿಸುವವರು ರುದ್ರಾಕ್ಷಿಯನ್ನು ಧರಿಸಬಾರದು. ಹೀಗೆ ಮಾಡಿದರೆ ರುದ್ರಾಕ್ಷಿಯು ಅಶುದ್ಧವಾಗುತ್ತದೆ, ಇದರಿಂದ ನಿಮ್ಮ ಕುಟುಂಬವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತವರು ರುದ್ರಾಕ್ಷಿ ಧರಿಸಬಯಸಿದರೆ ಮೊದಲು ಧೂಮಪಾನ ಮತ್ತು ಮಾಂಸಾಹಾರ ತ್ಯಜಿಸಬೇಕು.

ಇದನ್ನೂ ಓದಿ: Surya Gochar 2023: ಈ ರಾಶಿಯವರ ಅದೃಷ್ಟವು ಸೂರ್ಯನಂತೆ ಹೊಳೆಯುತ್ತದೆ, ಹಣದ ಮಳೆಯಾಗುತ್ತದೆ!

ಸ್ಮಶಾನಕ್ಕೆ ಹೋಗುವಾಗ: ಸ್ಮಶಾನದಲ್ಲಿ ರುದ್ರಾಕ್ಷಿಯನ್ನು ಧರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಹೀಗಾಗಿ ನೀವು ಯಾರಾದರೂ ಸಾವನ್ನಪ್ಪಿದ್ರೆ ಸ್ಮಶಾನಕ್ಕೆ ಹೋದಾಗ, ಮನೆಯಲ್ಲಿಯೇ ರುದ್ರಾಕ್ಷಿ ಜಪಮಾಲೆಯನ್ನುಇಟ್ಟುಹೋಗಬೇಕು. ಅಪ್ಪಿತಪ್ಪಿಯೂ ನೀವು ಅದನ್ನು ಧರಿಸಿ ಸ್ಮಶಾನಕ್ಕೆ ಹೋಗಬೇಡಿ. ಸ್ಮಶಾನಕ್ಕೆ ಪ್ರವೇಶಿಸುವ ಮೊದಲು ಅದನ್ನು ತೆಗೆದುಹಾಕಿ ನಿಮ್ಮ ಜೇಬಿನಲ್ಲಿರಿಸಿ.

ಮಲಗುವಾಗ ರುದ್ರಾಕ್ಷಿ ಧರಿಸಬೇಡಿ: ರಾತ್ರಿ ಮಲಗುವಾಗ ಯಾವಾಗಲೂ ರುದ್ರಾಕ್ಷಿಯನ್ನು ತೆಗೆಯಬೇಕು. ಹೀಗೆ ಮಾಡುವುದರಿಂದ ರಾತ್ರಿಯಲ್ಲಿ ಕೆಟ್ಟ ಕನಸುಗಳು ದೂರವಿದ್ದು, ನಿದ್ರೆಯೂ ಚೆನ್ನಾಗಿರುತ್ತದೆ. ರಾತ್ರಿ ಭಯದಿಂದ ತೊಂದರೆಗೀಡಾದ ಜನರು ತಮ್ಮ ತಲೆಯ ಮೇಲೆ ರುದ್ರಾಕ್ಷಿ ಇಟ್ಟುಕೊಳ್ಳುವುದರಿಂದ ಪ್ರಯೋಜನ ಪಡೆಯುತ್ತಾರೆ.

ಇದನ್ನೂ ಓದಿ: ದ್ಧೂರಿಯಾಗಿ ʼಹೋಳಿʼ ಆಚರಣೆ ಮಾಡ್ಬೇಕು ಅಂದ್ರೆ, ಮಿಸ್‌ ಮಾಡದೇ ಈ ಸ್ಥಳಗಳಿಗೆ ಭೇಟಿ ನೀಡಿ..!

ಮಗುವಿನ ಜನನದ ಸಮಯದಲ್ಲಿ: ಸನಾತನ ಧರ್ಮದ ನಂಬಿಕೆಗಳ ಪ್ರಕಾರ ಮಹಿಳೆಯರಿಗೆ ರುದ್ರಾಕ್ಷಿ ಧರಿಸಲು ಸಲಹೆ ನೀಡಲಾಗುತ್ತದೆ. ಆದರೆ ಮಗುವಿನ ಜನನದ ನಂತರ ಸೂತಕ ಅವಧಿ ಮುಗಿಯುವವರೆಗೆ ಅವರು ರುದ್ರಾಕ್ಷಿಯನ್ನು ತೆಗೆಯಬೇಕು. ಅಷ್ಟೇ ಅಲ್ಲ ರುದ್ರಾಕ್ಷಿ ಧರಿಸಿದವರು ಹೊಸದಾಗಿ ಹುಟ್ಟಿದ ಮಗು ಮತ್ತು ಅದರ ತಾಯಿ ಇರುವ ಸ್ಥಳಕ್ಕೆ ಹೋಗಬಾರದು.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News