Holi 2024 Gift: ಎರಡು ಕೋಟಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್, ಯಾವ ಸ್ಕೀಮ್, ಯಾರಿಗೆ ಲಾಭ?
Free LPG Cylinder On Holi 2024: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದೇಶದ ಮಹಿಳೆಯರಿಗೆ ಭಾರಿ ಉಡುಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಗ್ಯಾಸ್ ಸಿಲಿಂಡರ್ ಬೆಲೆಯನ್ನು (LPG Price) ರೂ.100 ಇಳಿಕೆ ಮಾಡಿದ್ದರು. ಇದರಿಂದ ದೇಶದ ಜನರಿಗೆ ಹಣದುಬ್ಬರದಿಂದ ಭಾರಿ ನೆಮ್ಮದಿ ದೊರೆತಂತಾಗಿ (free lpg cylinders to two crore people under ujjwala scheme)ದೆ. ಪ್ರಧಾನಿ ನೀಡಿರುವ ಈ ಉಡುಗೊರೆಯ ಬಳಿಕ ಇದೀಗ ಉತ್ತರ ಪ್ರದೇಶದ ಯೋಗಿ ಸರ್ಕಾರ ಮತ್ತೊಂದು ಉಡುಗೊರೆ ಪ್ರಕಟಿಸಿದೆ. (Business News In Kannada)
Holi 2024 Free LPG Gas Cylinder: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದೇಶದ ಮಹಿಳೆಯರಿಗೆ ಭಾರಿ ಉಡುಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಗ್ಯಾಸ್ ಸಿಲಿಂಡರ್ ಬೆಲೆಯನ್ನು ರೂ.100 ಇಳಿಕೆ ಮಾಡಿದ್ದರು. ಇದರಿಂದ ದೇಶದ ಜನರಿಗೆ ಹಣದುಬ್ಬರದಿಂದ ಭಾರಿ ನೆಮ್ಮದಿ ದೊರೆತಂತಾಗಿದೆ (free lpg cylinders to two crore people under ujjwala scheme). ಪ್ರಧಾನಿ ನೀಡಿರುವ ಈ ಉಡುಗೊರೆಯ ಬಳಿಕ ಇದೀಗ ಉತ್ತರ ಪ್ರದೇಶದ ಯೋಗಿ ಸರ್ಕಾರ ಮತ್ತೊಂದು ಉಡುಗೊರೆ ಪ್ರಕಟಿಸಿದೆ. ಉತ್ತರ ಪ್ರದೇಶದ ಯೋಗಿ ಸರ್ಕಾರ (Yogi Government) ಹೋಳಿ ಹಬ್ಬದಂದು ಸುಮಾರು 2 ಕೋಟಿ ಕುಟುಂಬಗಳಿಗೆ ಉಚಿತ ಸಿಲಿಂಡರ್‌ಗಳನ್ನು ನೀಡಲು ಹೊರಟಿದೆ. ಯುಪಿ ಸರ್ಕಾರವು ಹೋಳಿ ಹಬ್ಬದಂದು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (PM Ujjwala Yojana) ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಅನ್ನು ನೀಡುತ್ತಿದೆ. ಈ ಕುರಿತು ನವೆಂಬರ್ 2023 ರಲ್ಲಿ ಯುಪಿ ಕ್ಯಾಬಿನೆಟ್ ಘೋಷಣೆ ಮಾಡಿತ್ತು. (Business News In Kannada)
ಇದನ್ನೂ ಓದಿ-ಏನಿದು No Cost EMI? ನಿಜಕ್ಕೂ ಹೆಚ್ಚುವರಿ ಹಣ ಪಾವತಿಸಬೇಕಾಗುವುದಿಲ್ಲವೇ?
ಯೋಗಿ ಸರ್ಕಾರದ ಉಚಿತ ಸಿಲಿಂಡರ್ ಯೋಜನೆ ಏನು?
ಹೋಳಿ ಹಬ್ಬ ಸಂದರ್ಭದಲ್ಲಿ ಯೋಗಿ ಸರ್ಕಾರ 2 ಕೋಟಿ ಉಜ್ವಲ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ನೀಡಲಿದೆ. ಕಳೆದ ವರ್ಷವೇ ನವೆಂಬರ್ 2023 ರಲ್ಲಿ ಯೋಗಿ ಸರ್ಕಾರ ಈ ಉಡುಗೊರೆಯನ್ನು ಪ್ರಕಟಿಸಿತ್ತು. ಪ್ರಕಟಣೆಯ ಪ್ರಕಾರ, ಯುಪಿ ಸರ್ಕಾರವು ಉಜ್ವಲಾ ಫಲಾನುಭವಿಗಳಿಗೆ ವರ್ಷಕ್ಕೆ ಎರಡು ಬಾರಿ ಉಚಿತ ಸಿಲಿಂಡರ್‌ಗಳನ್ನು ವಿತರಿಸುವುದಾಗಿ ಹೇಳಿಟ್ಟು. ದೀಪಾವಳಿ ಮತ್ತು ಹೋಳಿ ಸಂದರ್ಭದಲ್ಲಿ, ಈ ಹಿನ್ನೆಲೆ ಇದೀಗ ಫಲಾನುಭವಿಗಳಿಗೆ ಮತ್ತೆ ಉಚಿತ ಎಲ್ಪಿಜಿ ಸಿಲಿಂಡರ್ ನೀಡಲಿದೆ. ಇದರಿಂದ ರಾಜ್ಯದ ಸುಮಾರು 2 ಕೋಟಿ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಈ ಯೋಜನೆಗೆ ಯೋಗಿ ಸರ್ಕಾರ 2312 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ. ಹೋಳಿ ಹೊರತುಪಡಿಸಿ, ಸರ್ಕಾರವು ಧಂತೇರಸ್‌ನಲ್ಲಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಸಹ ನೀಡುತ್ತದೆ.
ಇದನ್ನೂ ಓದಿ-NPS New Rule: ನ್ಯಾಷನಲ್ ಪೆನ್ಷನ್ ಸಿಸ್ಟಮ್ ನಿಯಮದಲ್ಲಿ ಬದಲಾವಣೆ, ಈ ದಿನದಿಂದ ನಿಯಮ ಜಾರಿ
ಉಚಿತ ಸಿಲಿಂಡರ್ ಯೋಜನೆಯ ಷರತ್ತುಗಳೇನು?
ಈ ಉಚಿತ ಸಿಲಿಂಡರ್ ಯೋಜನೆಗೆ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ. ಈ ಷರತ್ತಿನ ಪ್ರಕಾರ, ಈ ಪ್ರಯೋಜನವು ಉತ್ತರ ಪ್ರದೇಶದ ನಿವಾಸಿಗಳಾಗಿರುವ ಫಲಾನುಭವಿಗಳಿಗೆ ಮಾತ್ರ ಸಿಗಲಿವೆ. ಅಂದರೆ ಉತ್ತರ ಪ್ರದೇಶದ ಜನರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯುತ್ತಾರೆ. ಈ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು, ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಫಲಾನುಭವಿಯು ಉಜ್ವಲ ಯೋಜನೆಗೆ ಅರ್ಹರಾಗಿರಬೇಕು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ