Hero Splendorಗೆ ಭಾರಿ ಪೈಪೋಟಿ ನೀಡಲು ಮಾರುಕಟ್ಟೆಗಿಳಿಯಲಿದೆ Honda
Hero MotoCorp ದೀರ್ಘ ಕಾಲದಿಂದ 100-150 ಸಿಸಿ ಸೆಗ್ಮೆಂಟ್ ನಲ್ಲಿ ತನ್ನ ಪಾರುಪತ್ತ್ಯ ಮೆರೆದಿದೆ. ಇದೀಗ Honda ಕೂಡ ಈ ಸೆಗ್ಮೆಂಟ್ ನಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸುವ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಶೀಘ್ರದಲ್ಲೇ ಹೀರೋ ಸ್ಪ್ಲೆಂಡರ್ ಗೆ ಪೈಪೋಟಿ ನೀಡಲು ಕೈಗೆಟಕುವ ದರದ ಹೊಸ ದ್ವಿಚಕ್ರವಾಹನವನ್ನು ಬಿಡುಗಡೆ ಮಾಡಲಿದೆ.
ನವದೆಹಲಿ: Honda Activa ಮೂಲಕ ಭಾರತೀಯ ಸ್ಕೂಟರ್ ಮಾರುಕಟ್ಟೆಯ ಮೇಲೆ ಬಲವಾದ ಹಿಡಿತ ಸಾಧಿಸಿರುವ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI), ಮೋಟಾರ್‌ಸೈಕಲ್ ವಿಭಾಗದಲ್ಲಿ ಅನೇಕ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಹೀರೊ ಮೋಟೊಕಾರ್ಪ್‌ಗೆ ಪೈಪೋಟಿ ನೀಡಲು ಈ ಹೊಸ ಬೈಕ್‌ಗಳನ್ನು (Affordable Bikes) ವಿಶೇಷವಾಗಿ ಬಿಡುಗಡೆ ಮಾಡಲಾಗುತ್ತಿದೆ. ಕಂಪನಿಯು ಹೊಸ ಎಂಟ್ರಿ ಲೆವಲ್ ವಾಹನಗಳನ್ನು ಬಿಡುಗಡೆ ಮಾಡಲು ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದೆ.
ಇದುವರೆಗೆ ಕಂಪನಿಯು ಕೇವಲ CD110 ಮೂಲಕ ಮಾತ್ರ ಈ ಸೆಗ್ಮೆಂಟ್ ನಲ್ಲಿ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಕಂಪನಿಯು 150 ಸಿಸಿ ವಿಭಾಗದಲ್ಲಿ ಬೈಕ್‌ಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ, ಈ ಸೆಗ್ಮೆಂಟ್ ನಲ್ಲಿ ಗ್ರಾಹಕರು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಎಂದು ಕಂಪನಿ ಹೇಳಿದೆ.
ಈ ಕುರಿತು ಮಾತನಾಡಿರುವ HMSI ಅಧ್ಯಕ್ಷ ಅಸುಶಿ ಒಗಾಟಾ, “ನಿಸ್ಸಂಶಯವಾಗಿ ನಾವು CD110 ನಂತಹ ಅಗ್ಗದ ಮೋಟಾರ್‌ಸೈಕಲ್ ಅನ್ನು ಹೊಂದಿದ್ದೇವೆ, ಆದರೆ ನಮಗಿರುವ ಸ್ಪರ್ಧೆಗೆ ನಾವು ಅದನ್ನು ಹೋಲಿಸಿದರೆ ನಾವು ತುಂಬಾ ದುರ್ಬಲರಾಗಿದ್ದೇವೆ. ಇದರರ್ಥ ನಾವು ಈ ರೀತಿಯ ಗ್ರಾಹಕರ ಬೇಡಿಕೆಯನ್ನು ಎಂದಿಗೂ ಪೂರೈಸಿಲ್ಲ. ಹೀಗಾಗಿ ಕೈಗೆಟುಕುವ ಬೈಕ್‌ಗಳ ವಿಭಾಗವು ಎಷ್ಟು ದೊಡ್ಡದಾಗಿದೆ ಎಂಬುದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸಿದ್ದೇವೆ. ಈ ನಿಟ್ಟಿನಲ್ಲಿ ಅಧ್ಯಯನ ಪೂರ್ಣಗೊಂಡಿದ್ದು, ಈಗ ನಾವು ಕೈಗೆಟುಕುವ ವಿಭಾಗದಲ್ಲಿ ಹೊಸ ಮೋಟಾರ್‌ಸೈಕಲ್ ಅನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದೇವೆ" ಎಂದಿದ್ದಾರೆ.
ಇದನ್ನೂ ಓದಿ-Affordable Bikes: ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವ 4 ಬೈಕ್‌ಗಳಿವು
ಹೀರೋ ಮೋಟೋಕಾರ್ಪ್‌ನ ಪ್ರಬಲ ಹಿಡಿತ
ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ಒಟ್ಟು 42 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಈ ಪೈಕಿ ಶೇ.56 ರಷ್ಟು ದ್ವಿಚಕ್ರ ವಾಹನಗಳು 75-110 ಸಿಸಿ ವಿಭಾಗದಲ್ಲಿವೆ. ಈ ವಿಭಾಗದಲ್ಲಿ Hero MotoCorp ನ ಭಾಗವಹಿಸುವಿಕೆ ಅದ್ಭುತವಾಗಿದೆ ಮತ್ತು ಪ್ರತಿ ನಾಲ್ಕು ಮೋಟಾರ್‌ಸೈಕಲ್‌ಗಳಲ್ಲಿ ಮೂರು ಹೀರೋ ಒಡೆತನದಲ್ಲಿವೆ. HMSI ಪ್ರಸ್ತುತ ಈ ವಿಭಾಗದಲ್ಲಿ ಕೇವಲ ಶೇ. 3.6 ರಷ್ಟು ಪಾಲನ್ನು ಹೊಂದಿದೆ. ಆದರೆ, ಜಪಾನ್‌ನ ಈ ದ್ವಿಚಕ್ರ ವಾಹನ ತಯಾರಕ ಕಂಪನಿ 110-125 ಸಿಸಿ ವಿಭಾಗದಲ್ಲಿ ಉತ್ತಮ ಹಿಡಿತವನ್ನು ಹೊಂದಿದೆ, 2022 ರ ಹಣಕಾಸು ವರ್ಷದಲ್ಲಿ ಏಪ್ರಿಲ್ ಮತ್ತು ಜನವರಿ ನಡುವೆ ಕಂಪನಿಯು ಈ ವಿಭಾಗದಲ್ಲಿ ಸುಮಾರು 9.25 ಲಕ್ಷ ಬೈಕ್‌ಗಳನ್ನು ಮಾರಾಟ ಮಾಡಿದೆ. ಈ ವಿಭಾಗದಲ್ಲಿಯೂ ಕೂಡ Hero MotoCorp ಪ್ರಾಬಲ್ಯ ಹೊಂದಿದ್ದು, ಕಂಪನಿಯು ಶೇ.48 ರಷ್ಟು ಮಾರುಕಟ್ಟೆಯ ಪಾಲನ್ನು ಹೊಂದಿದೆ.
ಇದನ್ನೂ ಓದಿ-Activa ಸ್ಕೂಟರ್ ಗೆ ಪರ್ಯಾಯ ಮಾದರಿ ಬಿಡುಗಡೆ ಮಾಡಿದ Honda, ಇಲ್ಲಿದೆ ವೈಶಿಷ್ಟ್ಯಗಳ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.