ನವದೆಹಲಿ: Affordable Bikes - ನೀವೂ ಕೂಡ ಒಂದು ವೇಳೆ ಬೈಕ್ ಖರೀದಿಸಲು ಯೋಜನೆ ಹೊಂದಿದ್ದು, ನಿಮ್ಮ ಬಜೆಟ್ ಗಾತ್ರ ಚಿಕ್ಕದಾಗಿದ್ದರೆ, ಇಲ್ಲಿದೆ ಮಿತವ್ಯಯದೊಂದಿಗೆ ಬಲಿಷ್ಠ ಮೈಲೇಜ್ ನೀಡುವ ಬೈಕ್ (Hero Bikes) ಸುದ್ದಿ ನಿಮಗಾಗಿ. ಭಾರತದ ಅಚ್ಚುಮೆಚ್ಚಿನ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್, ಭಾರತದಲ್ಲಿ ಹಲವಾರು ಸಣ್ಣ ಬಜೆಟ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲಿ ಹೀರೋ HF Delux ಅತ್ಯಂತ ಕೈಗೆಟಕುವ ದರದ ಬೈಕ್ ಆಗಿದೆ. ಮಾರಾಟದ ವಿಷಯದಲ್ಲಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ, ಈ ಮೋಟಾರ್‌ಸೈಕಲ್ ಫುಲ್ ಪೈಸಾ ವಸೂಲ್ ಬೈಕ್ (Cheapest Bike) ಆಗಿದೆ. ಮಿತವ್ಯಯದ ಹೊರತಾಗಿ, ಈ ಬೈಕು ಬಲಿಷ್ಠ ಮೈಲೇಜ್ (Mileage Bikes) ಅನ್ನು ಸಹ ನೀಡುತ್ತದೆ ಮತ್ತು ಇದು ಮಧ್ಯಮ ವರ್ಗದವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಕೇವಲ 4999 ರೂ. ಹಣ ಪಾವತಿಸಿ ಈ ಬೈಕ್ ಅನ್ನು ಮನೆಗೆ ತರಬಹುದು (Business News)
ಹೀರೋ ಕಂಪನಿಯ ಕೈಗೆಟಕುವ ದರದ ಈ ಮೋಟಾರ್‌ಸೈಕಲ್‌ನ ಆನ್-ರೋಡ್ ಬೆಲೆ ರೂ 63,699 ಆಗಿದ್ದು, ನೀವು ರೂ 4,999 ಡೌನ್ ಪೇಮೆಂಟ್ ಮಾಡಿ ಮನೆಗೆ ತರಬಹುದು.ನಂತರ, ಶೇ. 9.7 ರ ಬಡ್ಡಿ ದರದಲ್ಲಿ ಒಂದು ವರ್ಷದವರೆಗೆ EMI ಮೂಲಕ ಉಳಿದ ಹಣವನ್ನು ನೀವು ಪಾವತಿಸಬಹುದು. ಇದರ ಮಾಸಿಕ ಕಂತು ರೂ 5,065 ಆಗಿರುತ್ತದೆ. ಇಲ್ಲಿ ಗ್ರಾಹಕರು ಬಡ್ಡಿ ರೂಪದಲ್ಲಿ ಒಟ್ಟು 3,081 ರೂಗಳನ್ನು ಪಾವತಿಸಬೇಕು. ಇದಲ್ಲದೆ, ಗ್ರಾಹಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಮಾಸಿಕ ಕಂತನ್ನು 2 ವರ್ಷಗಳವರೆಗೆ ಅಥವಾ ಮೂರು ವರ್ಷಗಳವರೆಗೆ ವಿಸ್ತರಿಸಬಹುದು, ಇದರಲ್ಲಿ ಕಂತು ಇನ್ನಷ್ಟು ಸುಲಭವಾಗಲಿದೆ, ಆದರೆ, ಇದಕ್ಕಾಗಿ ನೀವು ಸ್ವಲ್ಪ ಹೆಚ್ಚು ಬಡ್ಡಿಯ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ-ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! 2786 ರೂ.ಗಳಷ್ಟು ಅಗ್ಗವಾಯಿತು ಬಂಗಾರ, ಬೆಳ್ಳಿ ಬೆಲೆಯಲ್ಲೂ ಕುಸಿತ
ಆರಂಭಿಕ ಎಕ್ಸ್ ಷೋರೂಂ ಬೆಲೆ ರೂ.52,700 ಆಗಿರಲಿದೆ
Hero MotoCorp, HF Delux ಬೈಕ್ ನಲ್ಲಿ BS6 ಕಂಪ್ಲೈಂಟ್ 97.2 cc ಏರ್-ಕೂಲ್ಡ್ 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ನೀಡಲಾಗಿದೆ.ಈ ಎಂಜಿನ್ 8000 rpm ನಲ್ಲಿ 8.24 bhp ಪವರ್ ಮತ್ತು 5000 rpm ನಲ್ಲಿ 8.05 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯು ಬೈಕ್‌ನ ಎಂಜಿನ್‌ಗೆ 4-ಸ್ಪೀಡ್ ಟ್ರಾನ್ಸ್‌ಮಿಷನ್ ನೀಡಿದೆ. ಈ ಮೋಟಾರ್ ಸೈಕಲ್ ಅನ್ನು ಒಂದು ಲೀಟರ್ ಪೆಟ್ರೋಲ್ ನಲ್ಲಿ 83 ಕಿ.ಮೀ ವರೆಗೆ ಓಡಿಸಬಹುದು. ದೆಹಲಿಯಲ್ಲಿ ಈ ಬೈಕಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 52,700 ರೂ.ಗಳಾಗಿದೆ. ಇದು ಎಲ್ಲಾ Fi-i3S ಗಳಿಗಾಗಿ 63,400 ರೂ.ಗಳವರೆಗೆ ತಲುಪುತ್ತದೆ. ಬೈಕಿನ ಡ್ರಮ್ ಬ್ರೇಕ್ - ಅಲಾಯ್ ವೀಲ್ ಮಾದರಿಯ ಬೆಲೆ 53,700 ರೂ.ಆಗಿದೆ.
ಇದನ್ನೂ ಓದಿ-Advance Tax ಪಾವತಿಸಲು ನಾಳೆಯೇ ಕೊನೆಯ ದಿನ! ತಪ್ಪಿದರೆ ತೆರಬೇಕಾಗುತ್ತದೆ ಭಾರೀ ದಂಡ
ಅಗ್ಗದ ಮತ್ತು ಬಲಿಷ್ಠ ಮೈಲೇಜ್ ಹೊಂದಿರುವ ಬೈಕ್
ಈ ಬೈಕ್ ನ ಸೆಲ್ಫ್ ಸ್ಟಾರ್ಟ್ ಮಾಡೆಲ್ ಬೆಲೆ 61, 900 ಆಗಿದೆ, ಇದು ಬ್ಲಾಕ್ ವೇರಿಯಂಟ್ ಮಾಡೆಲ್ ಗೆ 62,500 ರೂ.ವರೆಗೆ ತಲುಪುತ್ತದೆ. ಹೀರೋ ಹೆಚ್‌ಎಫ್ ಡಿಲಕ್ಸ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಸಸ್ಪೆನ್ಶನ್ ನೀಡಲಾಗಿದ್ದರೆ, ಅದರ ಹಿಂಭಾಗವು 2-ಹಂತದ ಅಡ್ಜೆಸ್ಟೇಬಲ್ ಸಸ್ಪೆನ್ಶನ್ ಮತ್ತು ಹಿಂಭಾಗದ ಸ್ವಿಂಗ್ ಆರ್ಮ್‌ನೊಂದಿಗೆ ಬರುತ್ತದೆ. ಬೈಕ್‌ನ ಮುಂಭಾಗದ ಚಕ್ರಕ್ಕೆ 130 ಎಂಎಂ ಡ್ರಮ್ ಬ್ರೇಕ್ ನೀಡಲಾಗಿದ್ದು, ಹಿಂಬದಿ ಚಕ್ರಕ್ಕೆ 130 ಎಂಎಂ ಡ್ರಮ್ ಬ್ರೇಕ್ ನೀಡಲಾಗಿದೆ. ಈ ಬ್ರೇಕಿಂಗ್ ಸಿಸ್ಟಮ್ CBS ಅಂದರೆ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಬರುತ್ತದೆ. ಆದ್ದರಿಂದ ನೀವು ಅಗ್ಗದ ಮತ್ತು ಬಲಿಷ್ಠ ಮೈಲೇಜ್ ಬೈಕು ಖರೀದಿಸಲು ಯೋಜಿಸುತ್ತಿದ್ದರೆ ಇದು ನಿಮಗೆ ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ-RBI Update: RBI ನಿಂದ ನೂತನ ನಿಯಮ ಜಾರಿ, ನಿಮ್ಮ ಹಣಕಾಸಿನ ಮೇಲೂ ನೇರ ಪ್ರಭಾವ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.