Activa ಸ್ಕೂಟರ್ ಗೆ ಪರ್ಯಾಯ ಮಾದರಿ ಬಿಡುಗಡೆ ಮಾಡಿದ Honda, ಇಲ್ಲಿದೆ ವೈಶಿಷ್ಟ್ಯಗಳ ಮಾಹಿತಿ

Honda ಕಂಪನಿಯ (Astra Honda Motors) ಇಂಡೋನೆಷ್ಯಾ ವಿಭಾಗ ಎಸ್ಟ್ರಾ ಹೊಂಡಾ ಮೋಟರ್ಸ್ ಸ್ಥಳೀಯ ಮಾರುಕಟ್ಟೆಗೆ 2022 Honda Genio 110 ಬಿಡುಗಡೆ ಮಾಡಿದೆ. ಈ ಸ್ಕೂಟರ್ ನ (Genio Scooter) ಸ್ಟೈಲ್ ಹಾಗೂ ವಿನ್ಯಾಸ ತುಂಬಾ ಅದ್ಭುತವಾಗಿದೆ. ಯುರೋಪಿಯನ್ ವಿನ್ಯಾಸದ ಮೇಲೆ ಈ ಸ್ಕೂಟರ್ ಅನ್ನು ಸಿದ್ಧಪಡಿಸಲಾಗಿದೆ. ಇದು ನೋಡಲು ತುಂಬಾ ಸುಂದರವಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್ Activa ಸ್ಕೂಟರ್ ಗೆ ಪರ್ಯಾಯ ಸಾಬೀತಾಗುವ ಸಾಧ್ಯತೆ ಇದೆ.  

Written by - Nitin Tabib | Last Updated : Mar 19, 2022, 10:10 AM IST
  • ಬಿಡುಗಡೆಯಾಗಿದೆ 2022 Honda Genio 110
  • ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.93,000 ಇರುವ ಸಾಧ್ಯತೆ ಇದೆ
  • ಈ ಸ್ಕೂಟರ್ ನೋಡಲು ತುಂಬಾ ಸುಂದರವಾಗಿದೆ.
Activa ಸ್ಕೂಟರ್ ಗೆ ಪರ್ಯಾಯ ಮಾದರಿ ಬಿಡುಗಡೆ ಮಾಡಿದ Honda, ಇಲ್ಲಿದೆ ವೈಶಿಷ್ಟ್ಯಗಳ ಮಾಹಿತಿ  title=
Honda Genio 110 Launched (File Photo)

ನವದೆಹಲಿ: Honda Genio 110 Launched - ಹೋಂಡಾ ದ್ವಿಚಕ್ರ ವಾಹನ ಕಂಪನಿಯ ಇಂಡೋನೇಷ್ಯಾ ವಿಭಾಗ ಅಸ್ಟ್ರಾ ಹೋಂಡಾ ಮೋಟಾರ್ಸ್, 2022 Honda Genio 110 ಅನ್ನು ಅಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಸ್ಕೂಟರ್ ನೋಡಲು ಸಾಕಷ್ಟು ಸುಂದರವಾಗಿದೆ ಮತ್ತು ಅದರೊಂದಿಗೆ ಶಕ್ತಿಯುತ ವಿನ್ಯಾಸ, ವೈಶಿಷ್ಟ್ಯ ಮತ್ತು ತಂತ್ರಜ್ಞಾನವನ್ನು ಒಳಗೊಂಡಿದೆ. ಬೆಲೆಯ ಬಗ್ಗೆ ಹೇಳುವುದಾದರೆ, ಇದು ಭಾರತೀಯ ಕರೆನ್ಸಿಯಲ್ಲಿ ಇದರ ಬೆಲೆ ಸುಮಾರು 93,000 ರೂಪಾಯಿಗಳಷ್ಟು ಇರುವ ಸಾಧ್ಯತೆ ಇದೆ. ಈ ಸ್ಕೂಟರ್ ಅನ್ನು ನೋಡಿದರೆ, ಭಾರತದಲ್ಲಿ ಮಾರಾಟವಾಗುವ ಯಮಹಾ ಫ್ಯಾಸಿನೊ 125 (Yamaha Fascino 125) ಹೈಬ್ರಿಡ್‌ನಂತೆ ಕಾಣುತ್ತದೆ. ಹೊಸ ಸ್ಕೂಟರ್ ಅನ್ನು ಯುರೋಪಿಯನ್ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ, ಇದಕ್ಕೆ ವಿಭಿನ್ನ ರೀತಿಯ ಎಲ್ಇಡಿ ಹೆಡ್ಲೈಟ್ ನೀಡಲಾಗಿದೆ. ಇದಲ್ಲದೆ, ಬಾಡಿ ಮೇಲೆ ಗೋಲ್ಡ್ ಆಕ್ಸಂಟ್ ನೀಡಲಾಗಿದೆ.

ಇದನ್ನೂ ಓದಿ-Interest Rate : ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರದ ಬಗ್ಗೆ ತಿಳಿದಿರಲಿ ಈ ಮಾಹಿತಿ

ಮೊದಲಿನಂತೆಯೇ 110 ಸಿಸಿ ಎಂಜಿನ್ ನೀಡಲಾಗಿದೆ
ಕಂಪನಿಯು ಈ ಹೋಂಡಾ ಸ್ಕೂಟರ್‌ಗೆ 12 ಇಂಚಿನ ಚಕ್ರಗಳನ್ನು ನೀಡಿದೆ, ಇದು ಹಿಂದಿನ 14 ಇಂಚಿನ ಚಕ್ರಗಳಿಗಿಂತ ಸ್ವಲ್ಪ ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿದೆ. ಸ್ಕೂಟರ್‌ನ ಹೊಸ ಟೈರ್‌ಗಳು ಸಾಕಷ್ಟು ಅಗಲವಾಗಿವೆ ಮತ್ತು ಸಸ್ಪೆನ್ಷನ್ ಜೊತೆಗೆ ಬ್ರೇಕಿಂಗ್ ಸೆಟಪ್ ಅನ್ನು ಹಳೆಯ ಮಾದರಿಯಂತೆಯೇ ಬಳಸಲಾಗಿದೆ. 2022 ಹೋಂಡಾ ಜೆನಿಯೊ 110 ನಲ್ಲಿ ಮೊದಲಿನ ರೀತಿಯೇ 110 ಸಿಸಿ ಎಂಜಿನ್‌ ನೀಡಲಾಗಿದ್ದು, ಇದು 8.9 ps ಪವರ್ ಮತ್ತು 9.3 nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಸ್ಕೂಟರ್ ಜೊತೆಗೆ, ಕಂಪನಿಯು ಹೋಂಡಾ ISS ಅಂದರೆ ಐಡ್ಲಿಂಗ್ ಸ್ಟಾಪ್ ಸಿಸ್ಟಮ್ ಅನ್ನು ಸಹ ನೀಡಿದೆ, ಇದು ಸ್ಕೂಟರ್ ನ ಕಾರ್ಯಕ್ಷಮತೆಯಲ್ಲಿ ಸಾಕಷ್ಟು ಬದಲಾವಣೆಯನ್ನು ತರುತ್ತದೆ.

ಇದನ್ನೂ ಓದಿ-EPFO Alert : ಆನ್‌ಲೈನ್‌ನಲ್ಲಿ PF ಖಾತೆಗೆ ನಾಮಿನಿ ಮಾಡುವುದು, ಬದಲಾಯಿಸುವುದು ಹೇಗೆ?

ಹೋಂಡಾ ಆಕ್ಟಿವಾಗೆ ಒಂದು ಸಾಲಿಡ್ ರಿಪ್ಲೇಸ್ಮೆಂಟ್ 
ಕಂಪನಿಯು ಸದ್ಯಕ್ಕೆ ಹೊಸ ಹೋಂಡಾ ಜಿನಿಯೊ 110 ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದರ ಕುರಿತು ಯಾವುದೇ ಸಂಕೇತಗಳನ್ನು ನೀಡಿಲ್ಲ. ಆದರೆ, ಈ ಸ್ಕೂಟರ್ ದೇಶದಲ್ಲಿ ಹೋಂಡಾ ಆಕ್ಟಿವಾಕ್ಕೆ ಬಲವಾದ ಪರ್ಯಾಯ ಸಾಬೀತಾಗುವ ಸಾಧ್ಯತೆ ಇದೆ.. ಆದ್ದರಿಂದ ನೀವು ಪ್ರಸ್ತುತ ಭಾರತದಲ್ಲಿ 110 ಸಿಸಿ ವಿಭಾಗದ ಸ್ಕೂಟರ್ ಅನ್ನು ಖರೀದಿಸಲು ಬಯಸುತ್ತಿದ್ದರೆ, ಟಿವಿಎಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ಜೂಪಿಟರ್ (TVS Jupiter Smart Connect) ಉತ್ತಮ ಆಯ್ಕೆಯಾಗಿದೆ, ಇದು ಸಾಕಷ್ಟು ಹೊಸ ಮತ್ತು ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಭಾರತಕ್ಕೆ ಬಂದಿದೆ. ಕಂಪನಿಯು ಈ ಸ್ಕೂಟರ್‌ನೊಂದಿಗೆ ಸ್ಮಾರ್ಟ್‌ಕನೆಕ್ಟ್ ಅಪ್ಲಿಕೇಶನ್ ಅನ್ನು ನೀಡಿದೆ ಮತ್ತು ಈ ಹೊಸ ಸ್ಕೂಟರ್ ಈಗ ಧ್ವನಿ ಸಹಾಯದ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ. 

ಇದನ್ನೂ ಓದಿ-Budget Cars: 4 ಲಕ್ಷಕ್ಕೂ ಕಡಿಮೆ ಬಜೆಟ್ ನಲ್ಲಿ ಕಾರ್ ಖರೀದಿಸಬೇಕೇ? ಈ ಮೂರು ಆಪ್ಶನ್ ಟ್ರೈ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News