EPFO Update : ಭವಿಷ್ಯ ನಿಧಿ (ಪಿಎಫ್) ಹಣ ನಿವೃತ್ತಿಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭವಿಷ್ಯ ನಿಧಿ ಮೂಲಕ ನೌಕರರು ಪ್ರತಿ ತಿಂಗಳು ತಮ್ಮ ಪಿಎಫ್ ಖಾತೆಗೆ ನಿರ್ದಿಷ್ಟ ಮೊತ್ತವನ್ನು ಜಮಾ ಮಾಡುತ್ತಾರೆ. ಉದ್ಯೋಗದಾತ/ಕಂಪೆನಿಯು ಸಹ ಅಷ್ಟೇ ಪ್ರಮಾಣದ ಮೊತ್ತವನ್ನು ಪಾವತಿಸುತ್ತದೆ. ಇದು ಪರೋಕ್ಷವಾಗಿ ಉದ್ಯೋಗಿಗಳಿಗೆ ಭವಿಷ್ಯಕ್ಕಾಗಿ ಒಂದು ಒಳ್ಳೆಯ ಮೊತ್ತವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಇದು ಅತ್ಯಂತ ಸುರಕ್ಷಿತ ಮತ್ತು ಉತ್ತಮ ಲಾಭದಾಯಕ ಹೂಡಿಕೆ ಯೋಜನೆಯಾಗಿದೆ. 


COMMERCIAL BREAK
SCROLL TO CONTINUE READING

ಉದ್ಯೋಗದಾತರು ಪ್ರತಿ ತಿಂಗಳು ಅವರ ಸಂಬಳದಿಂದ ಇಪಿಎಫ್ ಮೊತ್ತವನ್ನು ಕಡಿತಗೊಳಿಸುತ್ತಾರೆ. ಕಂಪನಿಯು ಕೂಡಾ ಅಷ್ಟೇ ಮೊತ್ತವನ್ನು ಠೇವಣಿ ಪಿಎಫ್ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಇದರ ಮೇಲೆ ವಾರ್ಷಿಕ ಬಡ್ಡಿ ಸಿಗುತ್ತದೆ.  ಆದರೆ ಇದರಲ್ಲಿ ಪಿಎಫ್ ಸದಸ್ಯರು ಅನೇಕ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಕಂಪನಿಯು ಪಿಎಫ್ ಹಣವನ್ನು ನಿಮ್ಮ ಪಿಎಫ್ ಖಾತೆಗೆ ಜಮಾ ಮಾಡುತ್ತಿದೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. 


ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಬಳಕೆದಾರರೇ ಹುಷಾರ್! ಇಂತಹ ಎಸ್ಎಂಎಸ್ ಬಗ್ಗೆ ಜಾಗರೂಕರಾಗಿರಿ


ಇಪಿಎಫ್ ಹಣವನ್ನು ಯಾವ ಆಧಾರದ ಮೇಲೆ ಕಡಿತಗೊಳಿಸಲಾಗುತ್ತದೆ?  : 
ಪಿಎಫ್ ಹಣವನ್ನು ಕಡಿತಗೊಳಿಸುವ ಪ್ರಮಾಣಿತ ನಿಯಮವೆಂದರೆ ಅದು ಉದ್ಯೋಗಿಯ ಮೂಲ ವೇತನ ಮತ್ತು ಡಿಎಯ ಶೇಕಡಾ 12 ರಷ್ಟು ಮಾಡಲಾಗುತ್ತದೆ. ಇದಲ್ಲದೆ, ಕಂಪನಿಯು ಅವರ ಕಡೆಯಿಂದ ಶೇಕಡಾ 12 ರಷ್ಟು ಕೊಡುಗೆ ನೀಡುತ್ತದೆ. ಕಂಪನಿಯು ಠೇವಣಿ ಮಾಡಿದ ಶೇಕಡಾ 12 ರಲ್ಲಿ, ಕಂಪನಿಯು 3.67 ಶೇಕಡಾವನ್ನು ಪಿಎಫ್ ಖಾತೆಯಲ್ಲಿ ಮತ್ತು ಉಳಿದ ಶೇಕಡಾ 8.33 ಪಿಂಚಣಿ ಯೋಜನೆಯಲ್ಲಿ ಠೇವಣಿ ಮಾಡುತ್ತದೆ.


PF ಖಾತೆಯಲ್ಲಿ ಹಣ ಜಮೆಯಾಗಿದೆಯೇ ಎಂದು ತಿಳಿಯುವುದು ಹೇಗೆ? : 
- ಉದ್ಯೋಗಿಗಳು ತಮ್ಮ ಪಿಎಫ್ ಪಾಸ್‌ಬುಕ್‌ನಿಂದ ಕಂಪನಿಯು ಉದ್ಯೋಗಿಗಳ ಖಾತೆಗೆ ಹಣವನ್ನು ಜಮಾ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು. 
- ಪಾಸ್‌ಬುಕ್ ಪರಿಶೀಲಿಸಲು, ಉದ್ಯೋಗಿಗಳು ಮೊದಲು ಇಪಿಎಫ್‌ಒ ಪೋರ್ಟಲ್‌ಗೆ ಭೇಟಿ ನೀಡಬೇಕು. ನಿಮ್ಮ UAN ಸಂಖ್ಯೆಯನ್ನು ಇಲ್ಲಿ ಸಕ್ರಿಯಗೊಳಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- EPFO ​​ವೆಬ್‌ಸೈಟ್‌ಗೆ ಹೋಗಿ, 'Our Services' ಟ್ಯಾಬ್‌ಗೆ ಹೋಗಿ ಮತ್ತು 'for employees' ಆಯ್ಕೆಯನ್ನು ಆರಿಸಿ.
- ಇದರ ನಂತರ 'member passbook' ಅನ್ನು ಕ್ಲಿಕ್ ಮಾಡಬೇಕು.
- ಅದರ ನಂತರ ನಿಮ್ಮ UAN ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ.
- ಯಶಸ್ವಿ ಲಾಗಿನ್ ನಂತರ, ನಿಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.
- ನಿಮ್ಮ PF ಖಾತೆಯ ಬ್ಯಾಲೆನ್ಸ್, ಎಲ್ಲಾ ಠೇವಣಿಗಳ ವಿವರಗಳಂತಹ ವಿವರಗಳನ್ನು ಇಲ್ಲಿ ನೀವು ನೋಡಬಹುದು.


ಇದನ್ನೂ ಓದಿ : ಹೊಸ ವೇತನ ಆಯೋಗ ರಚನೆ ಬಹುತೇಕ ಪಕ್ಕಾ ! ಮೂಲ ವೇತನದಲ್ಲಿ ಭಾರೀ ಹೆಚ್ಚಳ


ಉಮಾಂಗ್ ಅಪ್ಲಿಕೇಶನ್ ಮೂಲಕ ನೀವು ಈ ರೀತಿಯಲ್ಲಿ ಪರಿಶೀಲಿಸಬಹುದು :
- ಉಮಂಗ್ ಅಪ್ಲಿಕೇಶನ್ ಅನೇಕ ಸರ್ಕಾರಿ ಸೇವೆಗಳಿಗೆ  ಅಕ್ಸೆಸ್ ಒದಗಿಸುತ್ತದೆ.
- Google Play Store ಅಥವಾ Apple App Store ನಿಂದ UMANG ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
- ನಿಮ್ಮ ಫೋನ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿ.
- ನಂತರ, " ಆಲ್ ಸರ್ವಿಸ್ " ಟ್ಯಾಬ್ ಅಡಿಯಲ್ಲಿ, 'EPFO' ಅನ್ನು ಹುಡುಕಿ.
- ನಂತರ 'ವ್ಯೂ ಪಾಸ್‌ಬುಕ್ ' ಆಯ್ಕೆಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಪಡೆದ UAN ಮತ್ತು OTP ಅನ್ನು ನಮೂದಿಸಿ.
- ಒಮ್ಮೆ ಲಾಗ್ ಇನ್ ಮಾಡಿದ ನಂತರ, ನಿಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ನೀವು ನೋಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.