ನವದೆಹಲಿ : ಆನ್‌ಲೈನ್ ಮತ್ತು ಡಿಜಿಟಲ್ ಸೇವೆಗಳ ಏಕೀಕರಣದಿಂದಾಗಿ, ಬ್ಯಾಂಕಿನಿಂದ ವೈಯಕ್ತಿಕ ಸಾಲ (personal loan) ಪಡೆಯುವ ಪ್ರಕ್ರಿಯೆ ಈಗ ಸುಲಭ. ಯಾವುದೇ ವ್ಯಕ್ತಿ ನೆಟ್ ಬ್ಯಾಂಕಿಂಗ್ (Net Banking) ಅಥವಾ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ (Mobile App)  ಮೂಲಕ ನಿಮಿಷಗಳಲ್ಲಿ ವೈಯಕ್ತಿಕ ಸಾಲಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


COMMERCIAL BREAK
SCROLL TO CONTINUE READING

ಸಾಲ ವಿತರಣಾ ಪ್ರಕ್ರಿಯೆಯೂ ಕೂಡಾ ಈಗ ಯಾವುದೇ ಗೊಂದಲವಿಲ್ಲದೆ, ತ್ವರಿತವಾಗಿ ನಡೆಯುತ್ತದೆ. ಅರ್ಜಿದಾರರು ಬ್ಯಾಂಕಿಗೆ (Bank) ಸಲ್ಲಿಸಿದ ಎಲ್ಲಾ ವಿವರಗಳು ಸರಿಯಾಗಿದ್ದರೆ, ಒಂದು ವಾರ ಅಥವಾ ಕೆಲವೇ ದಿನಗಳಲ್ಲಿ ಸಾಲವನ್ನು (Loan) ಪಡೆಯಬಹುದು.


ಇದನ್ನೂ ಓದಿ : ICICI Bank: ಯುಪಿಐ ಐಡಿಯೊಂದಿಗೆ ವ್ಯವಹಾರ ನಡೆಸಲು ಇದರ ಅಗತ್ಯವಿಲ್ಲ


COVID-19 ಸಮಯದಲ್ಲಿ ತುರ್ತು ಹಣದ ಅಗತ್ಯತೆಯ ಅನೇಕ ಉದಾಹರಣೆಗಳಿವೆ. ಆರೋಗ್ಯ ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳಂತಹ ಸಂದರ್ಭಗಳಲ್ಲಿ, ಜನರು ಒಂದು ದಿನದೊಳಗೆ ಹಣವನ್ನು ಹೊಂದಿಸಬೇಕಾದ ಅನಿವಾರ್ಯತೆ ಇರುತ್ತದೆ. ಈಗ ಹೆಚ್ಚಿನ ಖಾಸಗಿ ಬ್ಯಾಂಕುಗಳು (Private bank) ತಮ್ಮ ಕೆಲವು ಗ್ರಾಹಕರಿಗೆ ತ್ವರಿತ ಸಾಲ ಸೌಲಭ್ಯವನ್ನು ಒದಗಿಸುತ್ತವೆ, ಅಗತ್ಯವಾದ ಮೊತ್ತವನ್ನು ನಿಮಿಷಗಳಲ್ಲಿ ಪಡೆಯಲು ಈ ಸಾಲ ಸೌಲಭ್ಯ ಅನುವು ಮಾಡಿಕೊಡುತ್ತದೆ. 


ಅರ್ಜೆಂಟ್ ಲೋನ್ ಪಡೆಯುವ ಪ್ರಕ್ರಿಯೆ ಹೇಗೆ ? 
- ಅರ್ಜೆಂಟ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಾಮಾನ್ಯ ಆನ್‌ಲೈನ್ ಸಾಲಕ್ಕೆ ಅರ್ಜಿ ಸಲ್ಲಿಸುವಂತೆಯೇ ಇರುತ್ತದೆ. ಪ್ರಸ್ತುತ ಬ್ಯಾಂಕ್ ಖಾತೆ ಮತ್ತು ನಿಯಮಿತ ವೇತನ ಅಥವಾ ಆದಾಯ ಹೊಂದಿದ್ದರೆ, ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು 
- ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಬ್ಯಾಂಕ್ ಪ್ರೀ ಅಪ್ರೂವ್ಡ್ ಸಾಲದ (pre approved loan) ಆಫರ್  ನೀಡುತ್ತದೆ. ಪ್ರೀ ಅಪ್ರೂವ್ಡ್ ಸಾಲಗಳಿಗೆ ಬ್ಯಾಂಕುಗಳಿಂದ ತ್ವರಿತ ಅನುಮೋದನೆ ಸಿಗುತ್ತದೆ. ಅಲ್ಲದೆ, ಇದಕ್ಕಾಗಿ ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ. ಅನುಮೋದನೆಯ ಕೆಲವೇ ನಿಮಿಷಗಳಲ್ಲಿ ಸಾಲದ ವಿತರಣೆ ನಡೆಯುತ್ತದೆ.
- ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಉತ್ತಮ ಮರುಪಾವತಿ ಹಿಸ್ಟರಿಯನ್ನು ಹೊಂದಿರುವ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ (credit score) ಇರುವ ಹಳೆಯ ಗ್ರಾಹಕರಿಗೆ ಈ ಸಾಲಗಳನ್ನು ಹೆಚ್ಚಾಗಿ ನೀಡಲಾಗುತ್ತದೆ.


ಇದನ್ನೂ ಓದಿ : ಇನ್ನು ಮುಂದೆ ಲಭ್ಯವಿಲ್ಲ ಆಧಾರ್ ನ ಈ ಸೇವೆ ; UIDAI ನಿರ್ಧಾರದ ಹಿಂದಿನ ಕಾರಣ ಏನು?


-ತತ್ಕಾಲ್  ವೈಯಕ್ತಿಕ ಸಾಲಕ್ಕೆ ಅರ್ಹರಾಗಿದ್ದಾರೆಯೇ ಎಂದು ಪರಿಶೀಲಿಸಲು ಬ್ಯಾಂಕಿಗೆ ಅರ್ಜಿ ಸಲ್ಲಿಸುವ ಮೂಲಕ ತಿಳಿದುಕೊಳ್ಳಬಹುದು. ಅಥವಾ ನೆಟ್ ಬ್ಯಾಂಕಿಂಗ್ (Net banking)  ಬಳಸಿ ಕೂಡಾ ತಿಳಿಸುಕೊಳ್ಳಬಹುದು. ಅಥವಾ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿಯೂ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.  
- ಈ  ಸಾಲದ ಬಡ್ಡಿದರವು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಬ್ಯಾಂಕ್ ನಿಮಗೆ ಮೊದಲೇ ನಿಡಿದ ಪ್ರೀ ಅಪ್ರೂವ್ಡ್ ಆಫರ್ ಮೇಲೆ ನಿರ್ಧಾರವಾಗಿರುತ್ತದೆ. ನೀವು ಈಗಾಗಲೇ  ವೈಯಕ್ತಿಕ ಸಾಲವನ್ನು ಹೊಂದಿದ್ದರೆ, ಅಸ್ತಿತ್ವದಲ್ಲಿರುವ ಮೊತ್ತದ ಮೇಲೆ ಟಾಪ್ ಅಪ್ (top up) ಪಡೆದುಕೊಳ್ಳಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.