ನವದೆಹಲಿ : ಐಸಿಐಸಿಐ ಬ್ಯಾಂಕ್ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಇದರಲ್ಲಿ, ಯುಪಿಐ ಐಡಿಯೊಂದಿಗೆ ವ್ಯವಹಾರ ನಡೆಸಲು ಗ್ರಾಹಕರಿಗೆ ಬ್ಯಾಂಕ್ ಖಾತೆ ಅಗತ್ಯವಿರುವುದಿಲ್ಲ. ಯುಪಿಐ ಐಡಿಯನ್ನು ಡಿಜಿಟಲ್ ವ್ಯಾಲೆಟ್ 'ಪಾಕೆಟ್ಸ್'ಗೆ ಲಿಂಕ್ ಮಾಡುವ ಸೇವೆಯನ್ನು ಬ್ಯಾಂಕ್ ಪ್ರಾರಂಭಿಸಿರುವುದರಿಂದ ಇದು ಸಾಧ್ಯ. ಪ್ರಸ್ತುತ, ಐಸಿಐಸಿಐ ಬ್ಯಾಂಕ್ ಈ ಸೌಲಭ್ಯವನ್ನು ಪ್ರಾರಂಭಿಸಿದ ದೇಶದ ಮೊದಲ ಬ್ಯಾಂಕ್ ಆಗಿದೆ. ಇಲ್ಲಿಯವರೆಗೆ ಯುಪಿಐ ಐಡಿಯನ್ನು ಉಳಿತಾಯ ಖಾತೆಗೆ ಲಿಂಕ್ ಮಾಡಲಾಗುತ್ತಿತ್ತು. ಆದರೆ ಈಗ ಐಸಿಐಸಿಐ ಬ್ಯಾಂಕ್ ಗ್ರಾಹಕರು ಯುಪಿಐ ಐಡಿಯನ್ನು ಬ್ಯಾಂಕಿನ ಡಿಜಿಟಲ್ ವ್ಯಾಲೆಟ್ 'ಪಾಕೆಟ್ಸ್'ಗೆ ಲಿಂಕ್ ಮಾಡಲು ಸಾಧ್ಯವಾಗುತ್ತದೆ. ಈ ಸೇವೆಯೊಂದಿಗೆ, ಬಳಕೆದಾರರು ಯುಪಿಐ ಅನ್ನು ಸುರಕ್ಷಿತ ರೀತಿಯಲ್ಲಿ ಬಳಸಲು ಮತ್ತು ಪಾಕೆಟ್ ವ್ಯಾಲೆಟ್ನಿಂದ ನೇರವಾಗಿ ಸಣ್ಣ ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ.
ಐದು ವರ್ಷಗಳ ಹಿಂದೆ ನಾವು 'ಪಾಕೆಟ್ಸ್' ಅನ್ನು ಪ್ರಾರಂಭಿಸಿದ್ದೇವೆ ಎಂದು ಐಸಿಐಸಿಐ ಬ್ಯಾಂಕಿನ (ICICI Bank) ಡಿಜಿಟಲ್ ಚಾನೆಲ್ ಮತ್ತು ಪಾಲುದಾರಿಕೆ ಮುಖ್ಯಸ್ಥ ಬಿಜಿತ್ ಭಾಸ್ಕರ್ ಹೇಳಿದ್ದಾರೆ. ಬಳಕೆದಾರರು ತಮ್ಮ ಯುಪಿಐ ಐಡಿಯನ್ನು ತಮ್ಮ ಡಿಜಿಟಲ್ ವ್ಯಾಲೆಟ್ಗೆ ಲಿಂಕ್ ಮಾಡಲು ಸಿದ್ಧರಿದ್ದಾರೆ ಎಂದು ನಮ್ಮ ಸಂಶೋಧನೆಯು ಬಹಿರಂಗಪಡಿಸಿದೆ. ಇದರಿಂದಾಗಿ ಅವರು ಸಣ್ಣ ವ್ಯವಹಾರಗಳಿಗೆ ನೇರವಾಗಿ ವ್ಯಾಲೆಟ್ ಅನ್ನು ಬಳಸಬಹುದು. ನಿಮ್ಮ ಉಳಿತಾಯ ಖಾತೆಯನ್ನು ದೊಡ್ಡ ಪಾವತಿಗಳನ್ನು ಮಾಡಲು ಮಾತ್ರ ಬಳಸಲು ಇದರಿಂದ ಸಾಧ್ಯವಾಗುತ್ತದೆ. ಇದರ ದೃಷ್ಟಿಯಿಂದ, ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ಈ ನವೀನ ಪರಿಹಾರವನ್ನು ಪರಿಚಯಿಸಲು ನಾವು ಎನ್‌ಪಿಸಿಐ ಜೊತೆ ನಿಕಟವಾಗಿ ಕೆಲಸ ಮಾಡಿದ್ದೇವೆ ಎಂದವರು ಮಾಹಿತಿ ನೀಡಿದ್ದಾರೆ.
ಈ ಬ್ಯಾಂಕ್ ಸೇವೆಯ ಪ್ರಯೋಜನಗಳು:
>> ಐಸಿಐಸಿಐ ಬ್ಯಾಂಕಿನ ಹೊಸ ಬಳಕೆದಾರರು ಮತ್ತು ಇತರ ಬ್ಯಾಂಕುಗಳ ಗ್ರಾಹಕರು ಕೂಡಲೇ ಯುಪಿಐ ಐಡಿ (UPI ID) ಪಡೆಯಬಹುದು, ಇದನ್ನು ಸ್ವಯಂಚಾಲಿತ ಹೊಸ ಸೇವಾ ವ್ಯಾಲೆಟ್ 'ಪಾಕೆಟ್ಸ್' ಗೆ ಲಿಂಕ್ ಮಾಡಲಾಗುತ್ತದೆ. ಈಗಾಗಲೇ ಯುಪಿಐ ಐಡಿ ಹೊಂದಿರುವ ಗ್ರಾಹಕರು 'ಪಾಕೆಟ್ಸ್' ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡುವ ಮೂಲಕ ಹೊಸ ಐಡಿ ಪಡೆಯುತ್ತಾರೆ.
>> ಬಳಕೆದಾರರು 'ಪಾಕೆಟ್ಸ್' ಅಪ್ಲಿಕೇಶನ್‌ನಲ್ಲಿ ಭೀಮಾ ಯುಪಿಐ ಮೂಲಕ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು ಮತ್ತು ವ್ಯಾಪಾರಿ ಮಳಿಗೆಗಳಲ್ಲಿ ಅಥವಾ ಇತರ ಸ್ಥಳಗಳಲ್ಲಿ ಪಾವತಿ ಮಾಡಬಹುದು.
>> ಮತ್ತೊಂದು ಬಳಕೆದಾರ ಅಥವಾ ಅಪ್ಲಿಕೇಶನ್ ಕಳುಹಿಸಿದ ಕಲೆಕ್ಟ್ ರಿಕ್ವೆಸ್ಟ್ ಆಧಾರದ ಮೇಲೆ ಪಾವತಿ ಮಾಡಲು ಗ್ರಾಹಕರು ತಮ್ಮ 'ಪಾಕೆಟ್ಸ್' ಯುಪಿಐ ಐಡಿ ಬಳಸಬಹುದು.
>> ಬಳಕೆದಾರರು ತಮ್ಮ ಪೋನ್ ಲಿಸ್ಟ್ ನಲ್ಲಿರುವ ಸಂಪರ್ಕಗಳಿಗೂ ಪಾವತಿಸಬಹುದು.
ಇದನ್ನೂ ಓದಿ - Aarogya Setu ಅಪ್ಲಿಕೇಶನ್‌ನಲ್ಲಿ ಬ್ಲೂ ಟಿಕ್ ವೈಶಿಷ್ಟ್ಯ
ಐಸಿಐಸಿಐ ಬ್ಯಾಂಕ್ ಪಾಕೆಟ್ಸ್ ಅಪ್ಲಿಕೇಶನ್ (ICICI Bank Pockets app): ಹೇಗೆ ಪ್ರಾರಂಭಿಸಬೇಕು
ಈ ಸೇವೆಗಾಗಿ, ಹೊಸ ಬಳಕೆದಾರರು ಮೊದಲು ಬ್ಯಾಂಕಿನ 'ಪಾಕೆಟ್ಸ್' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ಅದಕ್ಕೆ ಲಾಗ್ ಇನ್ ಆಗಬೇಕಾಗುತ್ತದೆ. ಯಶಸ್ವಿ ಲಾಗಿನ್‌ನಲ್ಲಿ, ಬಳಕೆದಾರರ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಆಧರಿಸಿ 'ಪಾಕೆಟ್ಸ್' ವಿಪಿಎ ಸ್ವಯಂಚಾಲಿತವಾಗಿ ರಚಿಸಲ್ಪಡುತ್ತದೆ. ಉದಾಹರಣೆಗೆ 9999xxxxxx @ ಪಾಕೆಟ್ಸ್, ಇದು 9999xxxxxx ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿದೆ. ಯುಪಿಐ ಐಡಿ ರಚಿಸಲು ಯಾವುದೇ ಬ್ಯಾಂಕ್ ಖಾತೆ ವಿವರಗಳು ಅಗತ್ಯವಿಲ್ಲ. ಇದಲ್ಲದೆ, ಬಳಕೆದಾರರು ತಮ್ಮ ಆಯ್ಕೆಯ ಐಡಿಯಲ್ಲಿ ಸ್ವಯಂ-ರಚಿಸಿದ ಯುಪಿಐ ಐಡಿಯನ್ನು ಅಪ್ಲಿಕೇಶನ್‌ನೊಳಗಿನ 'ಭೀಮಾ ಯುಪಿಐ' ಅಡಿಯಲ್ಲಿರುವ 'ಮಾರ್ಪಡಿಸು' ಆಯ್ಕೆಯ ಮೂಲಕ ಮಾರ್ಪಡಿಸಬಹುದು. ಅದೇ ಸಮಯದಲ್ಲಿ, ಅಸ್ತಿತ್ವದಲ್ಲಿರುವ ಬಳಕೆದಾರರು ತಮ್ಮ 'ಪಾಕೆಟ್ಸ್' ಅಪ್ಲಿಕೇಶನ್ ಅನ್ನು ಹೊಸ ಆವೃತ್ತಿಯಲ್ಲಿ ನವೀಕರಿಸಬಹುದು ಎಂದು ಬ್ಯಾಂಕ್ ಮಾಹಿತಿ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.