ಇನ್ನು ಮುಂದೆ ಲಭ್ಯವಿಲ್ಲ ಆಧಾರ್ ನ ಈ ಸೇವೆ ; UIDAI ನಿರ್ಧಾರದ ಹಿಂದಿನ ಕಾರಣ ಏನು?

ಯುಐಡಿಎಐ , ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಅನೇಕ ಸೇವೆಗಳನ್ನು ಹೆಚ್ಚು ಉತ್ತಮ ಮತ್ತು ಸುಲಭಗೊಳಿಸಿದೆ. ಆಧಾರ್ ನಲ್ಲಿರುವ ಫೋಟೋ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಾದರೆ, ಸಣ್ಣ ಪ್ರಕ್ರಿಯೆಯ ಮೂಲಕ ಕುಳಿತಲ್ಲಿಂದಲೇ ಮಾಡಿ ಮುಗಿಸಿಕೊಳ್ಳಬಹುದು. ಆದರೆ, ಯುಐಡಿಎಐ ಈಗ ಆಧಾರ್ ಗೆ ಸಂಬಂಧಿಸಿದ ಬಹುಮುಖ್ಯ ಸೇವೆಯೊಂದನ್ನು ಸ್ಥಗಿತಗೊಳಿಸಿದೆ.

Written by - Ranjitha R K | Last Updated : May 27, 2021, 08:51 AM IST
  • ಆಧಾರ್ ಕಾರ್ಡ್ ಅಂದರೆ ಅದೊಂದು ಪ್ರಮುಖ ದಾಖಲೆ.
  • ಆಧಾರ್ ಗೆ ಸಂಬಂಧಿಸಿದ ಬಹುಮುಖ್ಯ ಸೇವೆ ಸ್ಥಗಿತ
  • ಇನ್ನು ಆಧಾರ್ ಕಾರ್ಡ್ನ ಮರುಮುದ್ರಣ ಆಗುವುದಿಲ್ಲ
ಇನ್ನು ಮುಂದೆ ಲಭ್ಯವಿಲ್ಲ ಆಧಾರ್ ನ ಈ ಸೇವೆ ; UIDAI ನಿರ್ಧಾರದ ಹಿಂದಿನ ಕಾರಣ ಏನು? title=
ಆಧಾರ್ ಗೆ ಸಂಬಂಧಿಸಿದ ಬಹುಮುಖ್ಯ ಸೇವೆ ಸ್ಥಗಿತ (file photo Zee news)

ನವದೆಹಲಿ : ಆಧಾರ್ ಕಾರ್ಡ್ ಅಂದರೆ ಅದೊಂದು ಪ್ರಮುಖ ದಾಖಲೆ. ಇದಲ್ಲದೆ ಹೋದರೆ, ಸರ್ಕಾರದ ಯಾವ ಯೋಜನೆಯ ಲಾಭ ಪಡೆಯುವುದೂ ಸಾಧ್ಯವಿಲ್ಲ. ಸರ್ಕಾರದ ಯಾವುದೇ ಕೆಲಸಗಳಿಗೂ ಆಧಾರ್ ಬೇಕೇ ಬೇಕು. ಈ ಆಧಾರ್ ಕಾರ್ಡ್ ನಲ್ಲೂ (Aadhaar Card) ಸರ್ಕಾರ ಕಾಲಕಾಲಕ್ಕೆ ಕೆಲವು ಬದಲಾವಣೆಗಳನ್ನು ತಂದಿದೆ. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಈ ವರ್ಷ ಪಿವಿಸಿ ಆಧಾರ್ ಕಾರ್ಡ್ (PVC Aadhaar Card)ತಂದಿದೆ. 

ಕೊನೆಯಾಯಿತು ಆಧಾರ್ ಕಾರ್ಡ್‌ನ ಈ ಸೇವೆ : 
ಯುಐಡಿಎಐ (UIDAI), ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಅನೇಕ ಸೇವೆಗಳನ್ನು ಹೆಚ್ಚು ಉತ್ತಮ ಮತ್ತು ಸುಲಭಗೊಳಿಸಿದೆ. ಆಧಾರ್ ನಲ್ಲಿರುವ ಫೋಟೋ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಾದರೆ, ಸಣ್ಣ ಪ್ರಕ್ರಿಯೆಯ ಮೂಲಕ ಕುಳಿತಲ್ಲಿಂದಲೇ ಮಾಡಿ ಮುಗಿಸಿಕೊಳ್ಳಬಹುದು. ಆದರೆ, ಯುಐಡಿಎಐ ಈಗ ಆಧಾರ್ ಗೆ ಸಂಬಂಧಿಸಿದ ಬಹುಮುಖ್ಯ ಸೇವೆಯೊಂದನ್ನು ಸ್ಥಗಿತಗೊಳಿಸಿದೆ. ಹೌದು, ಈ ಮೊದಲು, ಆಧಾರ್ ಕಾರ್ಡ್ (Aadhaar) ಕಳೆದುಕೊಂಡಿದ್ದರೆ ಅಥವಾ ಹರಿದು ಹೋಗಿದ್ದರೆ,  ಯುಐಡಿಐಎ ವೆಬ್‌ಸೈಟ್‌ ಮೂಲಕ, ಹೊಸ ಆಧಾರ್ ಕಾರ್ಡ್ ಆರ್ಡರ್ ಮಾಡಿಕೊಳ್ಳಬಹುದಾಗಿತ್ತು.  ಇದಕ್ಕಾಗಿ 50 ರೂ. ಪಾವತಿಸಬೇಕಾಗಿತ್ತು. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ಯುಐಡಿಎಐ ಈ ಸೇವೆಯನ್ನು ನಿಲ್ಲಿಸಿದೆ.

ಇದನ್ನೂ ಓದಿ : SSY: ನಿತ್ಯ ರೂ.100 ಉಳಿತಾಯ ಮಾಡಿ 15 ಲಕ್ಷ ರೂ. ಪಡೆಯಿರಿ, ಏನಿದು ಸರ್ಕಾರದ ಸ್ಕೀಮ್ ?

ಬಂದಿದೆ ಪಿವಿಸಿ ಆಧಾರ್ ಕಾರ್ಡ್ : 
 ಈಗ  ಯುಐಡಿಎಐ ಪಿವಿಸಿ (PVC) ಸ್ವರೂಪದಲ್ಲಿ ಆಧಾರ್ ಕಾರ್ಡ್ ಅನ್ನು ತಯಾರಿಸುತ್ತಿದೆ. ಇದು ಗಾತ್ರ ರೂಪದಲ್ಲಿ ಡೆಬಿಟ್ ಕಾರ್ಡ್‌ನ್ನೇ (Debit card) ಹೋಲುತ್ತದೆ.  ಯುಐಡಿಎಐ ಹಿಂದೆ ಇದ್ದ ದೊಡ್ಡ ಗಾತ್ರದ ಆಧಾರ್ ಕಾರ್ಡ್ ನ ಮುದ್ರಣ ನಿಲ್ಲಿಸಿದ್ದು,  ಅದನ್ನು ಪಿವಿಸಿ ಆಧಾರ್ ಕಾರ್ಡ್‌ಗೆ ಬದಲಾಯಿಸಲಾಗಿದೆ. ಈ ನೀವೇನಾದರೂ ಹೊಸ ಆಧಾರ್ ಕಾರ್ಡ್ ಪಡೆಯಲು ಬಯಸಿದರೆ, ಪಿವಿಸಿ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. 

UIDAI ಹೇಳಿದ್ದೇನು ? 
ಇತ್ತೀಚೆಗೆ ವ್ಯಕ್ತಿಯೊಬ್ಬರು, ಆಧಾರ್ ಕಾರ್ಡ್ ಮರುಮುದ್ರಣ ಮಾಡಬಹುದೇ ಎಂದು ಆಧಾರ್ ಸಹಾರವಾಣಿ ಕೇಂದ್ರವನ್ನು ಟ್ವಿಟರ್ (Twitter) ಮೂಲಕ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ  UIDAI,  ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಿಸಿದೆ. ನೀವು ಆನ್‌ಲೈನ್ ಮೂಲಕ ಆಧಾರ್ ಪಿವಿಸಿ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. 

ಇದನ್ನೂ ಓದಿ : ನೀವೂ Syndicate Bank ಖಾತೆದಾರರಾಗಿದ್ದರೆ ಜೂನ್ 30ರೊಳಗೆ ಪೂರೈಸಿಕೊಳ್ಳಿ ಈ ಕೆಲಸ

ಪಿವಿಸಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ? 
1. ನೀವು  PVC  ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾದರೆ, ಯುಐಡಿಎಐ ವೆಬ್‌ಸೈಟ್ uidai.gov.in ಅಥವಾ esident.uidai.gov.in ಗೆ ಭೇಟಿ ನೀಡಿ. 
2. ವೆಬ್‌ಸೈಟ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ವರ್ಚುವಲ್ ಐಡಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
3. 50 ರೂಪಾಯಿ ಶುಲ್ಕವನ್ನು ಪಾವತಿಸುವ ಮೂಲಕ ಪಿವಿಸಿ ಕಾರ್ಡ್ ಗೆ ಅರ್ಜಿ ಸಲ್ಲಸಬಹುದು. ಕೆಲವು ದಿನಗಳ ನಂತರ ಅದು ನಿಮ್ಮ ನೋಂದಾಯಿತ ವಿಳಾಸಕ್ಕೆ ಕಾರ್ಡ್ ಕಳುಹಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News