PVC Aadhaar Card Order: ಆಧಾರ್ ಕಾರ್ಡ್ ಭಾರತದಲ್ಲಿ ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ಕಳೆದು ಹೋದರೆ ಜನರ ಹಲವು ಅಗತ್ಯ ಕೆಲಸಗಳು ನಿಂತು ಹೋಗುತ್ತವೆ. ಈ ಕಾರಣಕ್ಕಾಗಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, PVC ಆಧಾರ್ ಕಾರ್ಡ್ ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ನೀಡಿದೆ. ಈ ಕಾರ್ಡ್ ಅನ್ನು ಯುಐಡಿಎಐ ಅಧಿಕೃತ ವೆಬ್‌ಸೈಟ್ ಮೂಲಕ ಪಡೆಯಬಹುದಾಗಿದೆ. 


COMMERCIAL BREAK
SCROLL TO CONTINUE READING

ಕೇವಲ 50 ರೂ. ಪಾವತಿಸಿ PVC Aadhaar Card  ಪಡೆಯಬಹುದು : 
ಪಿವಿಸಿ ಆಧಾರ್ ಕಾರ್ಡ್  ಅನ್ನು ಕೇವಲ 50 ರೂಪಾಯಿ  ಶುಲ್ಕ ಪಾವತಿಸುವ ಮೂಲಕ ಪಡೆಯಬಹುದಾಗಿದೆ. ಸುರಕ್ಷಿತ ಕ್ಯೂಆರ್ ಕೋಡ್, ಹೊಲೊಗ್ರಾಮ್, ಹೆಸರು, ಫೋಟೋ, ಜನ್ಮ ದಿನಾಂಕ ಇತ್ಯಾದಿ ಮಾಹಿತಿಯನ್ನು ಈ ಕಾರ್ಡ್‌ನಲ್ಲಿ ದಾಖಲಿಸಲಾಗುತ್ತದೆ.  PVC ಆಧಾರ್ ಕಾರ್ಡ್ ಅನ್ನು  ಡೌನ್ ಲೋಡ್ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ : ಹೆಚ್ಚಿನ ಪಿಂಚಣಿ ಪಡೆಯಬೇಕಾದರೆ ಇಂದೇ ಪೂರೈಸಬೇಕು ಈ ಕೆಲಸ ! ಇಲ್ಲವಾದರೆ ನಿಮಗೇ ನಷ್ಟ


PVC ಆಧಾರ್ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ? : 
1. ಮೊದಲು https://uidai.gov.in/ ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ .
2. ನಂತರ My Aadhaar ಆಯ್ಕೆಗೆ ಹೋಗಿ.
3. ಇದರಲ್ಲಿ Order Aadhaar PVC Card ಮೇಲೆ ಕ್ಲಿಕ್ ಮಾಡಿ.
4. ಇಲ್ಲಿ ನೀವು 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
5. ಬೇಕಾದರೆ 16 ಅಂಕಿಯ ವರ್ಚುವಲ್ ಐಡಿಯನ್ನು ಸಹ ನೀಡಬಹುದು. 6. ಇದರ ನಂತರ ಭದ್ರತಾ ಕೋಡ್ ಅಥವಾ ಕ್ಯಾಪ್ಚಾವನ್ನು ನಮೂದಿಸಿ.
7. ನಂತರ OTP ಅನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
8. ಅದನ್ನು ಇಲ್ಲಿ ನಮೂದಿಸಿ  ಸಬ್ಮಿಟ್ ಮಾಡಿ. 
9. ಇಲ್ಲಿ  PVC ಆಧಾರ್ ಕಾರ್ಡ್‌ನ  ಪ್ರಿವ್ಯೂ ಕಾಣಿಸುತ್ತದೆ. 
10. ಇದಕ್ಕೆ 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತೆ.  ಈ ಪಾವತಿಯನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಮಾಡಬಹುದು.
11 . ಪೇಮೆಂಟ್ ಆದ ನಂತರ PVC ಕಾರ್ಡ್ ಅನ್ನು ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ಮನೆಯ ವಿಳಾಸಕ್ಕೆ ಕಳುಹಿಸಲಾಗುತ್ತದೆ.


ಆಫ್‌ಲೈನ್ PVC ಆಧಾರ್ ಕಾರ್ಡ್‌ಗಾಗಿ ಈ ರೀತಿ ಅರ್ಜಿ ಸಲ್ಲಿಸಿ : 
PVC ಆಧಾರ್ ಕಾರ್ಡ್ ಅನ್ನು ಆಫ್‌ಲೈನ್‌ನಲ್ಲಿಯೂ ಪಡೆಯಬಹುದು. ಇದಕ್ಕಾಗಿ ನೀವು  ಆಧಾರ್ ಕೇಂದ್ರಕ್ಕೆ ಹೋಗಿ ಫಾರ್ಮ್ ಫಿಲ್ ಮಾಡಬೇಕು. ಇದರ ನಂತರ ನೀವು ಪಿವಿಸಿ ಕಾರ್ಡ್‌ಗೆ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.  5 ರಿಂದ  6 ದಿನಗಳಲ್ಲಿ  ಈ ಕಾರ್ಡ್ ಅನ್ನು ನಿಮ್ಮ ಮನೆಯ ವಿಳಾಸಕ್ಕೆ ಕಳುಹಿಸಲಾಗುತ್ತದೆ.


ಇದನ್ನೂ ಓದಿ : Tips For Newly Wed Brides: ನವವಿವಾಹಿತ ವಧು ಈ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು


ಆಧಾರ್ ಇಲ್ಲದೆ ಈ ಯೋಜನೆಗಳ ಲಾಭ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ :  
ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಹೊರಹೊಮ್ಮಿದೆ. ಸರ್ಕಾರದ ಯಾವುದೇ ಯೋಜನೆ, ಶಾಲಾ ಕಾಲೇಜು ಪ್ರವೇಶ, ಪ್ರಯಾಣ ಇತ್ಯಾದಿ ಸಮಯದಲ್ಲಿ ಆಧಾರ್ ಕಾರ್ಡ್ ಅಗತ್ಯವಿದೆ. ಇದರೊಂದಿಗೆ, ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆ ತೆರೆಯಲು ಮತ್ತು ಅನೇಕ ಹಣಕಾಸಿನ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಹೀಗಿರುವಾಗ ನಿಮ್ಮ ಆಧಾರ್ ಕಳೆದುಹೋಗಿದ್ದರೆ, ಅದನ್ನು ಇಂದೇ ಆರ್ಡರ್ ಮಾಡಿ. ಇಲ್ಲವಾದರೆ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು. 

 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.