Direct Tax Collection: ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ 15.87% ಏರಿಕೆ, 4.75 ಲಕ್ಷ ಕೋಟಿಗೆ ಜಂಪ್‌!

Direct Tax Collection: ಈ ಬಾರಿ ನೇರ ತೆರಿಗೆ ಸಂಗ್ರಹದಲ್ಲಿ ಶೇ.15.87ರಷ್ಟು ಏರಿಕೆಯಾಗಿದ್ದು, 4.75 ಲಕ್ಷ ಕೋಟಿ ರೂ.ಗೆ ತಲುಪಿದೆ. ಹೆಚ್ಚುತ್ತಿರುವ ತೆರಿಗೆ ಸಂಗ್ರಹವು ಆರ್ಥಿಕ ಚಟುವಟಿಕೆಗಳನ್ನು ವೇಗಗೊಳಿಸಲಿದ್ದು, ಇದು ಅದರ ಸಂಕೇತವಾಗಿದೆ.

Written by - Puttaraj K Alur | Last Updated : Jul 10, 2023, 10:08 PM IST
  • ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ನೇರ ತೆರಿಗೆ ಸಂಗ್ರಹದಲ್ಲಿ ಭಾರೀ ಏರಿಕೆಯಾಗಿದೆ
  • ಈ ಬಾರಿ ನೇರ ತೆರಿಗೆ ಸಂಗ್ರಹದಲ್ಲಿ ಶೇ.15.87ರಷ್ಟು ಏರಿಕೆಯಾಗಿ 4.75 ಲಕ್ಷ ಕೋಟಿಗೆ ತಲುಪಿದೆ
  • ಕಳೆದ ವರ್ಷದ ಇದೇ ಅವಧಿಯಲ್ಲಿನ ನಿವ್ವಳ ತೆರಿಗೆ ಸಂಗ್ರಹಕ್ಕಿಂತ ಶೇ.15.87 ಹೆಚ್ಚಾಗಿದೆ
Direct Tax Collection: ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ 15.87% ಏರಿಕೆ, 4.75 ಲಕ್ಷ ಕೋಟಿಗೆ ಜಂಪ್‌! title=
ನೇರ ತೆರಿಗೆ ಸಂಗ್ರಹದಲ್ಲಿ ಏರಿಕೆ

ನೇರ ತೆರಿಗೆ ಸಂಗ್ರಹ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ನೇರ ತೆರಿಗೆ ಸಂಗ್ರಹದಲ್ಲಿ ಭಾರೀ ಏರಿಕೆಯಾಗಿದೆ. ಈ ಬಾರಿ ನೇರ ತೆರಿಗೆ ಸಂಗ್ರಹದಲ್ಲಿ ಶೇ.15.87ರಷ್ಟು ಏರಿಕೆಯಾಗಿದ್ದು, 4.75 ಲಕ್ಷ ಕೋಟಿ ರೂ.ಗೆ ತಲುಪಿದೆ. ಹೆಚ್ಚುತ್ತಿರುವ ತೆರಿಗೆ ಸಂಗ್ರಹವು ಆರ್ಥಿಕ ಚಟುವಟಿಕೆಗಳನ್ನು ವೇಗಗೊಳಿಸಲಿದ್ದು, ಇದು ಅದರ ಸಂಕೇತವಾಗಿದೆ.

ಆದಾಯ ತೆರಿಗೆ ಇಲಾಖೆ ಮಾಹಿತಿ: 2023-24ನೇ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ನೇರ ತೆರಿಗೆ ಸಂಗ್ರಹವು ಒಟ್ಟು ಬಜೆಟ್ ಅಂದಾಜಿನ ಶೇ.26.05ರಷ್ಟು ತಲುಪಿದೆ ಎಂದು ಆದಾಯ ತೆರಿಗೆ ಇಲಾಖೆ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಇದು ಆದಾಯ ತೆರಿಗೆ ಮತ್ತು ಕಂಪನಿ ತೆರಿಗೆಯನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಅಂಚೆ ಕಚೇರಿಯ ಈ ಯೋಜನೆಯಲ್ಲಿ ಕೇವಲ 5 ಲಕ್ಷ ಹೂಡಿಕೆ ಮಾಡಿ, 2 ಲಕ್ಷ ರೂ.ಗಳ ಬಡ್ಡಿ ಲಾಭ ಪಡೆಯಿರಿ!

ನೇರ ತೆರಿಗೆ ಸಂಗ್ರಹ ಮತ್ತು ನಿವ್ವಳ ಮರುಪಾವತಿ 4.75 ಲಕ್ಷ ಕೋಟಿ ರೂ. ಆಗಿದೆ. ಇದು ಅದೇ ಅವಧಿಯ ನಿವ್ವಳ ಸಂಗ್ರಹಕ್ಕಿಂತ ಶೇ.15.87ರಷ್ಟು ಹೆಚ್ಚಾಗಿದೆ. ಈ ಸಂಗ್ರಹವು ಹಣಕಾಸು ವರ್ಷದ ನೇರ ತೆರಿಗೆಗಳ ಒಟ್ಟು ಬಜೆಟ್ ಅಂದಾಜಿನ ಶೇ.26.05ರಷ್ಟಾಗಿದೆ.

ಶೇ.15.87 ಹೆಚ್ಚು: ಮರುಪಾವತಿ ನಂತರ ನೇರ ತೆರಿಗೆ ಸಂಗ್ರಹವು 4.75 ಲಕ್ಷ ಕೋಟಿ ರೂ. ಆಗಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿನ ನಿವ್ವಳ ತೆರಿಗೆ ಸಂಗ್ರಹಕ್ಕಿಂತ ಶೇ.15.87 ಹೆಚ್ಚು. ಸಚಿವಾಲಯದ ಪ್ರಕಾರ ಈ ವರ್ಷದ ಏಪ್ರಿಲ್ 1ರಿಂದ ಜುಲೈ 9ರ ಅವಧಿಯಲ್ಲಿ 42,000 ಕೋಟಿ ರೂ. ಮೌಲ್ಯದ ಮರುಪಾವತಿಯನ್ನು ನೀಡಲಾಗಿದೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಪಡೆದ ತೆರಿಗೆ ಮರುಪಾವತಿಗಿಂತ ಶೇ.2.55 ಹೆಚ್ಚು ಎಂಬುದು ಗಮನಾರ್ಹ.

ಇದನ್ನೂ ಓದಿ: Tata Altroz CNG: ಕಡಿಮೆ ಬೆಲೆಯ ಈ ಸಿಎನ್‌ಜಿ ಕಾರು ಭರ್ಜರಿ ಮೈಲೇಜ್ ನೀಡುತ್ತೆ!

5.17 ಲಕ್ಷ ಕೋಟಿ ರೂ.: ಒಟ್ಟು ನೇರ ತೆರಿಗೆ ಸಂಗ್ರಹವು ಶೇ.14.65ರಷ್ಟು ಏರಿಕೆಯಾಗಿ 5.17 ಲಕ್ಷ ಕೋಟಿ ರೂ. ತಲುಪಿದೆ. 2023-24ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ನೇರ ತೆರಿಗೆ ಸಂಗ್ರಹವು 18.23 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು 2022-23ರ ಹಣಕಾಸು ವರ್ಷದಲ್ಲಿ 16.61 ಕೋಟಿ ರೂ.ಗಿಂತ 9.75 ರಷ್ಟು ಹೆಚ್ಚು. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಜುಲೈ 31, 2023ರ ಮೊದಲು ಮೌಲ್ಯಮಾಪನ ವರ್ಷ 2023-24 ಗಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ವಿನಂತಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News