ನವದೆಹಲಿ : ಇದು ಡಿಜಿಟಲ್ ಯುಗ. ಡಿಜಿಟಲ್ ಯುಗ ಪ್ರವರ್ಧಮಾನಕ್ಕೆ ಬರುತ್ತಿರುವಂತೆಯೇ, ಡಿಜಿಟಲ್ ಯುಗದ ನ್ಯೂನತೆಗಳೂ ಬಹಿರಂಗವಾಗುತ್ತಿದೆ. ಡಿಜಿಟಲ್ ಯುಗದ ನ್ಯೂನತೆಗಳಲ್ಲಿ ಪ್ರಮುಖವಾದುದು  ಹ್ಯಾಕಿಂಗ್ (Hacking). ಹ್ಯಾಕರ್ಸ್, ಡಿಜಿಟಲ್ ವಂಚಕರು ಹೇಗಾದರೂ ಮಾಡಿ ನಿಮ್ಮ ಪಾಸ್ ವರ್ಡ್ (Password) ಕದ್ದು, ನಿಮ್ಮ ಡೇಟಾ ಕದಿಯುವ ಅಥವಾ ಸೆನ್ಸೆಟಿವ್ ಮಾಹಿತಿ ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾಕುವ ಕಾರ್ಯಯೋಜನೆ ರೂಪಿಸಿರುತ್ತಾರೆ. ಹ್ಯಾಕರ್ಸ್ ಗಳ ಜಾಲಕ್ಕೆ ನೀವು ಬಿದ್ದರೆ, ನಿಮಗೆ ಗೊತ್ತಿಲ್ಲದಂತೆ ವಂಚಕರು ನಿಮ್ಮ ಖಾತೆಯನ್ನು ಬಳಸಿ ದುಷ್ಕೃತ್ಯ ಮಾಡಬಹುದು. ಇದರಿಂದ ಪಾರಾಗುವ ಏಕೈಕ ಉಪಾಯವೆಂದರೆ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲದಂತಹ ಪಾಸ್ ವರ್ಡ್ (How to set strong Password) ಸೃಷ್ಟಿಸುವುದು. 


COMMERCIAL BREAK
SCROLL TO CONTINUE READING

ಹ್ಯಾಕ್ ಮಾಡಲು ಸಾಧ್ಯವೇ ಇಲ್ಲದಂತಹ ಪಾಸ್ ವರ್ಡ್ ರೂಪಿಸಲು ಸಾಧ್ಯವೇ..? ಈ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ.  ಸ್ಟ್ರಾಂಗ್ ಪಾಸ್ ವರ್ಡ್ (Strong password) ರೂಪಿಸುವುದು ಹೇಗೆ ಎಂಬ ಮಾಹಿತಿ ನಾವಿಂದು ನಿಮಗೆ ನೀಡುತ್ತಿದ್ದೇವೆ.


ಇದನ್ನೂ ಓದಿ : Post Office ಈ ಯೋಜನೆಯಲ್ಲಿ ಕೇವಲ ₹1,411 ಹೂಡಿಕೆ ಮಾಡಿ ಪಡೆಯಿರಿ ₹ 35 ಲಕ್ಷ..!


ಸ್ಟ್ರಾಂಗ್ ಪಾಸ್ ವರ್ಡ್ ರೂಪಿಸುವುದು ಹೇಗೆ..? ಇಲ್ಲಿದೆ ಟಿಪ್ಸ್
1. ನಿಮ್ಮ ಪಾಸ್ ವರ್ಡ್ ಕ್ಯಾಪಿಟಲ್ ಮತ್ತು ಸ್ಮಾಲ್ ಲೆಟರಿನ ಸಂಯೋಜನೆಯಲ್ಲಿರಬೇಕು. ಉದಾ - aBjsE7uG
2. ನಿಮ್ಮ ಪಾಸ್ ವರ್ಡ್ ನಲ್ಲಿ ಕ್ಯಾಪಿಟಲ್ ಮತ್ತು ಸ್ಮಾಲ್ ಅಕ್ಷರಗಳ ಜೊತೆಗೆ ಸಂಖ್ಯೆ ಮತ್ತು ಚಿಹ್ನೆಗಳನ್ನೂ ಬಳಸಿ. ಉದಾಹರಣೆಗೆ - AbjsE7uG61!@
3. ನಿಮ್ಮ ಪಾಸ್‌ವರ್ಡ್‌ನಲ್ಲಿ ಕನಿಷ್ಠ 8 ಅಕ್ಷರಗಳಿರಬೇಕು. ಉದಾ - aBjsE7uG
4. ಡಿಕ್ಷನರಿಯಲ್ಲಿ ಬಳಸುವ ಪದಗಳನ್ನು ಬಳಸಬೇಡಿ (Dictionary words) ಉದಾಹರಣೆಗೆ, itislocked ಅಥವಾ thisismypassword
5. ಬೇರೆಯವರ ಊಹೆಗೆ ನಿಲುಕುವ ಮತ್ತು ನೆನಪಿಡಲು ಸುಲಭವಾಗುವ ಪಾಸ್ ವರ್ಡ್ ಯಾವತ್ತಿಗೂ ರೂಪಿಸಬಾರದು. ಉದಾ 'qwerty' ಅಥವಾ 'asdfg' ಬದಲಾಗಿ ":) '',":/' ಚಿಹ್ನೆಗಳನ್ನು ಬಳಸಿ. 
6. ಹೆಚ್ಚು ಸಾಮಾನ್ಯ ಪಾಸ್‌ವರ್ಡ್‌ಗಳನ್ನು ರಚಿಸಬೇಡಿ. ಉದಾ - 12345678 ಅಥವಾ abcdefg
7. ಊಹಿಸಲು ಸುಲಭವಾದ ಪರ್ಯಾಯಗಳನ್ನು ಬಳಸಬೇಡಿ. ಉದಾ DOORBELL-DOOR8377 8377
8. ನಿಮ್ಮ ಪಾಸ್‌ವರ್ಡ್ ದೀರ್ಘವಾಗಿರಲಿ. ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕದೊಂದಿಗೆ ಪಾಸ್ ವರ್ಡ್ ಸಂಯೋಜಿಸಬೇಡಿ. ಉದಾಹರಣೆಗೆ Ramesh@1967


ಇದನ್ನೂ ಓದಿ : Electricity Bill Payment: 2025 ರ ವೇಳೆಗೆ ದೇಶಾದ್ಯಂತ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ


ನಿಮ್ಮ ಪಾಸ್‌ವರ್ಡ್ ನಿಮ್ಮ ಸಹಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of India) ಹೇಳುತ್ತದೆ. ನಿಮ್ಮ ಸಹಿಯನ್ನು ಯಾರೂ ಫೋರ್ಜರಿ ಮಾಡಲು ಸಾಧ್ಯವಿಲ್ಲದ ರೀತಿಯಲ್ಲಿ ನೀವು ಬರೆಯುತ್ತೀರಿ. ಅದೇ ಮಾನದಂಡವನ್ನು ಪಾಸ್ವರ್ಡ್ ರೂಪಿಸುವಾಗ ಕೂಡಾ  ಅನ್ವಯಿಸಬೇಕು. ನಿಮ್ಮ ಸಹಿಯಂತೆ ನಿಮ್ಮ ಪಾಸ್‌ವರ್ಡ್ ಯಾವಾಗಲೂ ಬಲವಾಗಿರಬೇಕು ಮತ್ತು ಅನನ್ಯವಾಗಿರಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ