HSRP Number Plate: HSRP ನಂಬರ್ ಪ್ಲೇಟ್ ಕಡ್ಡಾಯ ಡೆಡ್‌ಲೈನ್ ಅನ್ನು ರಾಜ್ಯ ಸರ್ಕಾರವು ವಿಸ್ತರಿಸಲಿದೆ. ಸೆಪ್ಟೆಂಬರ್ 15ರವರೆಗೆ ಗಡುವು ವಿಸ್ತರಿಸಿದ್ದು, ಈ ಕುರಿತು ಶೀಘ್ರವೇ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಗಡುವು ವಿಸ್ತರಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಇದುವೇ ಫೈನಲ್ ಡೆಡ್‌ಲೈನ್ ಆಗಲಿದೆ ಎಂದು ಸಹ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದ್ವಿಚಕ್ರ, ತ್ರಿಚಕ್ರ & ನಾಲ್ಕು ಚಕ್ರ ಸೇರಿದಂತೆ ಎಲ್ಲಾ ರೀತಿಯ ವಾಹನಗಳಿಗೂ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಜನರು ತಮ್ಮ ವಾಹನದ ಹಳೆಯ ನಂಬರ್ ಪ್ಲೇಟ್ ಯಾವುದೇ ಇದ್ದರೂ ಅದನ್ನು ತೆರವು ಮಾಡಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಈ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತಾ ಸಾರಿಗೆ ಇಲಾಖೆ ಖಡಕ ಎಚ್ಚರ ನೀಡಿದೆ.


ಇದನ್ನೂ ಓದಿ: Kuwait Fire Tragedy: ಕೊಚ್ಚಿ ತಲುಪಿದ 45 ಭಾರತೀಯರ ಮೃತದೇಹ ಹೊತ್ತ ಐಎಎಫ್ ವಿಮಾನ


2023ರ ಆಗಸ್ಟ್‌ 17ರಂದು ಕರ್ನಾಟಕ ಸಾರಿಗೆ ಇಲಾಖೆ HSRP ನಂಬರ್ ಪ್ಲೇಟ್ ಕಡ್ಡಾಯ ತೀರ್ಮಾನವನ್ನು ಜಾರಿಗೆ ತಂದಿತ್ತು. ಆದರೆ ಅಂದಿನಿಂದ ಇಂದಿನವರೆಗೆ ಹಲವು ಬಾರಿ ತನ್ನ ಡೆಡ್‌ಲೈನ್ ಅನ್ನು ವಿಸ್ತರಿಸುತ್ತಲೇ ಬಂದಿದೆ. ಈ ವಿಚಾರವಾಗಿ ವಾಹನ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲವೆಂಬ ಆರೋಪಗಳಿವೆ. ಇದೇ ಕಾರಣ ಸಾರಿಗೆ ಇಲಾಖೆ ಹಲವು ಬಾರಿ ತನ್ನ ಡೆಡ್‌ಲೈನ್ ವಿಸ್ತರಿಸುತ್ತಿದೆ. 2019ರ ಏಪ್ರಿಲ್ 1ಕ್ಕೂ ಮುನ್ನ ಖರೀದಿ ಮಾಡಲಾದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿದೆ. ಇದರ ನಂತರ ಖರೀದಿಸಿದ ವಾಹನಗಳಿಗೆ ಡೀಲರ್‌ಗಳೇ HSRP ನಂಬರ್ ಪ್ಲೇಟ್ ಅಳವಡಿಸಿ ನೀಡುತ್ತಿದ್ದಾರೆ. ಮೂಲಗಳ ಪ್ರಕಾರ 2019ರ ಏಪ್ರಿಲ್ 1ಕ್ಕೆ ಮುನ್ನ ಖರೀದಿಸಿದ ಸುಮಾರು 2 ಕೋಟಿ ವಾಹನಗಳು ರಾಜ್ಯದಲ್ಲಿ ಚಾಲನೆಯಲ್ಲಿವೆ. 


HSRP ನಂಬರ್ ಪ್ಲೇಟ್ ಕಡ್ಡಾಯ ನಿರ್ಧಾರವನ್ನು ಸಾರಿಗೆ ಇಲಾಖೆ ಜಾರಿಗೆ ತಂದಿದೆ. ಆದರೆ ವಾಹನ ಮಾಲೀಕರು ಸುಲಭವಾಗಿ ತಮ್ಮ ನಂಬರ್ ಪ್ಲೇಟ್ ಬದಲಿಸಿಕೊಳ್ಳಲು ಆಗುತ್ತಿದೆ. RC ಮಾಹಿತಿ ತಪ್ಪಾಗಿ ನಮೂದಿಸಿರುವ ಹಲವು ಪ್ರಕರಣಗಳಿವೆ ಅಂತಾ ವಾಹನ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾಹನಗಳ ನಿರ್ಮಾಣ ಮಾಡಿದ ಸಂಸ್ಥೆ, ಮಾಡೆಲ್, ವಿಧ ಸೇರಿದಂತೆ ಹಲವು ಸಮಸ್ಯೆಗಳು ತಮ್ಮ RC ಕಾರ್ಡ್‌ನಲ್ಲಿವೆ ಅಂತಾ ವಾಹನ ಮಾಲೀಕರು ಆಕ್ಷೇಪಿಸಿದ್ದಾರೆ.


ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಕೌನ್ಸಿಲ್ ಜೂನ್ 22ರಂದು ಆರಂಭ


ಈ ಎಲ್ಲಾ ಕಾರಣಗಳಿಂದ HSRP ನಂಬರ್ ಪ್ಲೇಟ್‌ಗಾಗಿ ನೋಂದಣಿ ಮಾಡುವ ವೇಳೆ ತೊಂದರೆಯಾಗುತ್ತಿದೆ. ಕೆಲವು ವಾಹನ ನಿರ್ಮಾಣ ಸಂಸ್ಥೆಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಿವೆ. ಹೀಗಾಗಿ ಇಂತಹ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸುವುದಾದರೂ ಹೇಗೆ ಅನ್ನೋದು ವಾಹನ ಮಾಲೀಕರ ಪ್ರಶ್ನೆಯಾಗಿದೆ? ಕೆಲ ಕಂಪನಿಗಳು ತಮ್ಮ ವಾಹನಗಳ ಉತ್ಪಾದನೆ ನಿಲ್ಲಿಸಿ ಬಾಗಿಲು ಹಾಕಿರುವಾಗ ನಾವು HSRP ನಂಬರ್ ಪ್ಲೇಟ್ ಮಾಡಿಸಲು ಹೋಗುವುದಾದರೂ ಎಲ್ಲಿಗೆ ಅನ್ನೋ ಪ್ರಶ್ನೆ ಸಾರ್ವಜನಿಕರದ್ದಾಗಿದೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.