Finger in ice cream : ಐಸ್ ಕ್ರೀಂ.. ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲದೆ ತಿನ್ನಲು ಇಷ್ಟಪಡುವ ಆಹಾರ. ಬೇಸಿಗೆಯಲ್ಲಿ ಐಸ್ ಕ್ರೀಮ್‌ಗಳ ಬೇಡಿಕೆಯಂತೂ ಹೇಳತೀರದು. ಕೆಲವು ಜನರು ಪ್ರತಿದಿನ ಐಸ್ ಕ್ರೀಂನ ರುಚಿಯನ್ನು ಸವಿಯಲು ಇಷ್ಟಪಡುತ್ತಾರೆ. ಇನ್ನು ಕೆಲವರು ಮನೆಯಲ್ಲಿಯೇ ಐಸ್ ಕ್ರೀಮ್ ತಯಾರಿಸಿ ತಿನ್ನುತ್ತಾರೆ. ಸಧ್ಯ ಮುಂಬೈನಲ್ಲಿ ನಡೆದ ಘಟನೆಯೊಂದು ಐಸ್ ಕ್ರೀಮ್ ಪ್ರಿಯರಿಗೆ ಶಾಕ್ ನೀಡಿದೆ..
ಇತ್ತೀಚೆಗೆ ಆಹಾರ ಪದಾರ್ಥಗಳಲ್ಲಿ ಹುಳುಗಳು ಪತ್ತೆಯಾಗಿರುವ ಘಟನೆಗಳು ಹೆಚ್ಚುತ್ತಿವೆ.. ಆರ್ಡರ್ ಮಾಡಿ ಮನೆಗೆ ತರಿಸುವ ಆಹಾರ ಪದಾರ್ಥಗಳಲ್ಲಿ ಕ್ರಿಮಿಕೀಟಗಳ ಅವಶೇಷಗಳು ಪತ್ತೆಯಾಗಿರುವ ಘಟನೆಗಳು ವಿಪರೀತವಾಗಿವೆ. ಇಂತಹ ಘಟನೆಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಈ ಪೈಕಿ ಮುಂಬೈನ ವೈದ್ಯರೊಬ್ಬರಿಗೆ ಆಘಾತಕಾರಿ ಅನುಭವವಾಗಿದೆ. ಅವರು ಆರ್ಡರ್ ಮಾಡಿದ್ದ ಐಸ್ ಕ್ರೀಂನಲ್ಲಿ ಮಾನವನ ಬೆರಳು ಸಿಕ್ಕಿತು. ಈ ಕುರಿತು ವಿಡಿಯೋ ವೈರಲ್ ಆಗಿದೆ..
ಹೌದು... ಮುಂಬೈನಲ್ಲಿ ವಾಸವಿರುವ ವೈದ್ಯ ಓರ್ಲೆಮ್ ಬ್ರೆಂಡನ್ ಸೆರಾವೊ Zeptolo ನಲ್ಲಿ ಐಸ್ ಕ್ರೀಮ್ ಆರ್ಡರ್ ಮಾಡಿದರು. Yummo ಐಸ್ ಕ್ರೀಮ್ ಪಾರ್ಲರ್‌ನಿಂದ ಮೂರು ಬಟರ್‌ಸ್ಕಾಚ್ ಐಸ್ ಕ್ರೀಮ್ ಕೋನ್‌ಗಳನ್ನು ತರಿಸಿಕೊಂಡಿದ್ದರು. ಡೆಲಿವರಿ ಬಾಯ್ ತಂದುಕೊಟ್ಟ ಐಸ್ ಕ್ರೀಮ್ ಅನ್ನು ಉತ್ಸಾಹದಿಂದ ತಿನ್ನಲು ಪ್ರಾರಂಭಿಸಿದನು. ಅಷ್ಟರಲ್ಲಿ ನಾಲಿಗೆಗೆ ಏನೋ ಗಟ್ಟಿಯಾದ ವಸ್ತು ಅಂಟಿಕೊಂಡಂತಾಯಿತು. ಮೊದಲಿಗೆ ಅದು ಚಾಕೊಲೇಟ್ ತುಂಡು ಇರಬಹುದು ಅಂತ ಅವರು ಭಾವಿಸಿದ್ದರು.
Human finger: ఐస్ క్రీమ్ లో బైటపడ్డ మనిషి వేలు..#Icecream #Finger #ViralVideo pic.twitter.com/RfmZ9ypH1r
— Zee Telugu News (@ZeeTeluguLive) June 13, 2024
ಅನುಮಾನಗೊಂಡು ಐಸ್ ಕ್ರೀಮ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ 2 ಇಂಚು ಉದ್ದದ ಮಾನವನ ಬೆರಳು ಕಾಣಿಸಿಕೊಂಡಿತು. ಇದರಿಂದ ಅವರು ಆಘಾತಕ್ಕೊಳಗಾದರು. ಕೂಡಲೇ ವಿಡಿಯೋ ತೆಗೆದು ಸಮೀಪದ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಬೆರಳಿದ್ದ ಐಸ್ ಕ್ರೀಂ ತೆಗೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ:ಸಿನಿಮಾ ಮಾಡ್ತೀನಿ ಅಂತ ಕೋಟಿ ಕೋಟಿ ಸಂಭಾವನೆ ಪಡೆದ ʼಡೆವಿಲ್ʼ..! ನಟನ ನಂಬಿ ಹಣ ಕೊಟ್ಟವರು ಯಾರ್‍ಯಾರು ಗೊತ್ತೆ..?
ಈ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಅಪ್ಪಿತಪ್ಪಿಯೂ ಬೆರಳನ್ನು ಕಚ್ಚಿದರೆ..? ಥೂ.. ಅಂತ ಕಾಮೆಂಟ್ ಮಾಡುತ್ತಿದ್ದಾರೆ.. ಇನ್ನು ಕೆಲವರು ಇದು ನಿಜವಾಗಿಯೂ ಮನುಷ್ಯನ ಬೆರಳಾ..? ಪ್ರಶ್ನೆ ಮಾಡಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ