New Rules in July 2023: ದೇಶದ ಸಾಮಾನ್ಯ ಜನರು ಮತ್ತೆ ಹಣದುಬ್ಬರದಿಂದ ಬಳಲುವಂತಾಗಿದೆ. ಏಕೆಂದರೆ ಜುಲೈ 1, 2023 ರಿಂದ ಅನೇಕ ನಿಯಮ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಬಹುದು. ಜುಲೈ 1ರಿಂದ ಬ್ಯಾಂಕ್, ತೆರಿಗೆ ವ್ಯವಸ್ಥೆ ಹಾಗೂ ಕಾನೂನಿಗೆ ಸಂಬಂಧಿಸಿದ ಕೆಲವು ವಿಷಯಗಳಲ್ಲಿ ಹೊಸ ನಿಯಮಗಳು ಜಾರಿಯಾಗಲಿವೆ. ಬದಲಾಗಿರುವ ಈ ಹೊಸ ನಿಯಮಗಳ ಕುರಿತು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಉತ್ತರಾಖಂಡದಲ್ಲಿ ಶೀಘ್ರವೇ ಏಕರೂಪ ನಾಗರಿಕ ಸಂಹಿತೆ ಜಾರಿ: ಸಿಎಂ ಧಾಮಿ


ಈಗ ದೇಶದಲ್ಲಿ ಕಳಪೆ ಗುಣಮಟ್ಟದ ಶೂ ಮತ್ತು ಚಪ್ಪಲಿಗಳನ್ನು ಮಾರಾಟ ಮಾಡದಿರುವುದೇ ಒಳ್ಳೆಯದು. ಏಕೆಂದರೆ ಜುಲೈ 1, 2023 ರಿಂದ ದೇಶದಲ್ಲಿ ಕಳಪೆ ಗುಣಮಟ್ಟದ ಪಾದರಕ್ಷೆಗಳ ತಯಾರಿಕೆ ಮತ್ತು ಮಾರಾಟವನ್ನು ಸಹ ನಿಷೇಧಿಸಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳನ್ನು ಅನುಸರಿಸಿ, ಭಾರತ ಸರ್ಕಾರವು ಪಾದರಕ್ಷೆ ಘಟಕಗಳಿಗೆ ಗುಣಮಟ್ಟ ನಿಯಂತ್ರಣ ಆದೇಶವನ್ನು (QCO) ಜಾರಿಗೊಳಿಸಲು ಆದೇಶಿಸಿದೆ, ಅದರ ಅಡಿಯಲ್ಲಿ 27 ಪಾದರಕ್ಷೆ ಉತ್ಪನ್ನಗಳನ್ನು ಸೇರಿಸಲಾಗಿದೆ.


ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಅಗ್ಗ:


ಜುಲೈ 1, 2023 ರಿಂದ, ಮೊಬೈಲ್‌ ಗಳು, ಕಂಪ್ಯೂಟರ್‌ ಗಳು, ಲ್ಯಾಪ್‌ಟಾಪ್‌ ಗಳಂತಹ ಅನೇಕ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಗಳಲ್ಲಿ ಕಡಿತವನ್ನು ಕಾಣಬಹುದು. ಮಾಹಿತಿಯ ಪ್ರಕಾರ, ಅನೇಕ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಅವುಗಳ ಘಟಕಗಳ ದರಗಳು ಸಾಕಷ್ಟು ಕಡಿಮೆಯಾಗಿದೆ. ಸೆಮಿಕಂಡಕ್ಟರ್‌ ಗಳು, ಕ್ಯಾಮೆರಾ ಮಾಡೆಲ್‌ಗಳು ಸೇರಿದಂತೆ ಎಲ್ಲಾ ಸ್ಮಾರ್ಟ್‌ಫೋನ್ ಘಟಕಗಳ ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ ಮೊಬೈಲ್, ಟಿವಿ, ಫ್ರಿಜ್‌ಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.


ಸಂಚಾರ ನಿಯಮಗಳಲ್ಲಿ ಬದಲಾವಣೆ:


ಈಗ ಹೊಸ ಸಂಚಾರ ನಿಯಮವು ಇಡೀ ಮಹಾರಾಷ್ಟ್ರದಲ್ಲಿ ಮತ್ತು ವಿಶೇಷವಾಗಿ ಮುಂಬೈನಲ್ಲಿ ಅನ್ವಯಿಸುತ್ತದೆ. ಜುಲೈ 1 ರಿಂದ ನಾಲ್ಕು ಚಕ್ರದ ವಾಹನಗಳಲ್ಲಿ ಹಿಂಬದಿಯಲ್ಲಿ ಕುಳಿತುಕೊಳ್ಳುವವರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಈ ನಿಯಮವು ಇಡೀ ದೇಶದಲ್ಲಿ ಅನ್ವಯವಾಗಿದೆ.


ಅಡುಗೆ ಅನಿಲ ಬೆಲೆಗಳು:


ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳು ಅಡುಗೆ ಅನಿಲದ ಬೆಲೆಯನ್ನು ಬದಲಾಯಿಸುತ್ತವೆ. ಕಳೆದ ತಿಂಗಳು, ಎಲ್‌ ಪಿ ಜಿ ಗ್ಯಾಸ್ ಸಿಲಿಂಡರ್‌ ಗಳನ್ನು ಮಾರಾಟ ಮಾಡುವ ಪೆಟ್ರೋಲಿಯಂ ಕಂಪನಿಗಳು ಎಲ್‌ ಪಿ ಜಿ ದರವನ್ನು ಬದಲಾಯಿಸಿದ್ದವು. ಈಗ ಮತ್ತೊಮ್ಮೆ ಅದರ ಬೆಲೆಗಳನ್ನು ಬದಲಾಯಿಸಬಹುದು.


ಪ್ಯಾನ್-ಆಧಾರ್ ಅಪ್ಡೇಟ್:


ಪಾನ್ ಕಾರ್ಡ್ ಅನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡದ ಜನರ ಪ್ಯಾನ್ ಕಾರ್ಡ್ ಅನ್ನು ಇಂದಿನಿಂದ ಅಂದರೆ ಜುಲೈ 1, 2023 ರಿಂದ ನಿಷ್ಕ್ರಿಯಗೊಳಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ ನೀವು ITR ಅನ್ನು ಫೈಲ್ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ನಿಮ್ಮ ಬಾಕಿ ಇರುವ ರಿಟರ್ನ್ ಪ್ರಕ್ರಿಯೆಯು ಮುಂದುವರಿಯುವುದಿಲ್ಲ. ನಿಮ್ಮ ಬಾಕಿಯಿರುವ ಮರುಪಾವತಿಗಳನ್ನು ಸಹ ನೀಡಲಾಗುವುದಿಲ್ಲ ಮತ್ತು ನಿಮ್ಮ ತೆರಿಗೆ ಕಡಿತವು ಹೆಚ್ಚಿನ ದರದಲ್ಲಿರುತ್ತದೆ.


ಇದನ್ನೂ ಓದಿ: CM Siddaramaiah : ಮುಸ್ಲಿಂ ಬಾಂಧವರೊಂದಿಗೆ ಬಕ್ರೀದ್‌ ಆಚರಿಸಿದ ಸಿದ್ದರಾಮಯ್ಯ..!


HDFC ವಿಲೀನ:


ಇಂದು, ಜುಲೈ 1, 2023 ರಿಂದ, ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಅಂದರೆ HDFC ಲಿಮಿಟೆಡ್ ನ ವಿಲೀನವು ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ಬ್ಯಾಂಕ್‌ ನೊಂದಿಗೆ ಸಂಭವಿಸಲಿದೆ. ಈ ವಿಲೀನದ ನಂತರ, HDFC ಲಿಮಿಟೆಡ್‌ ನ ಸೇವೆಗಳು ಬ್ಯಾಂಕ್‌ ನ ಎಲ್ಲಾ ಶಾಖೆಗಳಲ್ಲಿ ಲಭ್ಯವಿರುತ್ತವೆ. ಈಗ ಎಚ್‌ ಡಿ ಎಫ್‌ ಸಿ ಬ್ಯಾಂಕ್‌ ನ ಶಾಖೆಯಲ್ಲಿ ಸಾಲ, ಬ್ಯಾಂಕಿಂಗ್ ಸೇರಿದಂತೆ ಇತರ ಎಲ್ಲ ಸೇವೆಗಳನ್ನು ಒದಗಿಸಲಾಗುವುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ