ಬೆಂಗಳೂರು : ಹೋಂಡಾ ಕಾರ್ಸ್ ಇಂಡಿಯಾ ಜೂನ್ 2022 ರಲ್ಲಿ ತನ್ನ ಕಾರುಗಳ ಮೇಲೆ ಭಾರೀ ಡಿಸ್ಕೌಂಟ್ ನೀಡುತ್ತಿದೆ. ಜಪಾನಿನ ವಾಹನ ತಯಾರಕ ಕಂಪನಿಯು ತನ್ನ ಎಲ್ಲಾ ಕಾರುಗಳ ಮೇಲೆ ಈ ಆಫರ್ ನೀಡುತ್ತಿದೆ. ಆಫರ್ ಜೂನ್ 30 ರವರೆಗೆ ಗ್ರಾಹಕರಿಗೆ ಲಭ್ಯವಿರುತ್ತದೆ. ಈ ಎಲ್ಲಾ ರಿಯಾಯಿತಿಗಳನ್ನು ಹೋಂಡಾ ಸಿಟಿಯ ಐದನೇ ಮತ್ತು ನಾಲ್ಕನೇ ಜನರರೇಶನಿನ ಹೋಂಡಾ ಅಮೇಜ್, ಹೋಂಡಾ ಡಬ್ಲ್ಯುಆರ್‌ವಿ ಮತ್ತು ಹೋಂಡಾ ಜಾಝ್‌ನಲ್ಲಿ ಲಭ್ಯವಿರಲಿದೆ.  ಈ ಎಲ್ಲಾ ಕಾರುಗಳ ಮಾಡೆಲ್ ಮತ್ತು ರೂಪಾಂತರಡ ಆಧಾರದ ಮೇಲೆ ಹೋಂಡಾ ಕಾರ್ಸ್ ಇಂಡಿಯಾ ಒಟ್ಟು  27,396 ರೂ. ವರೆಗೆ ಕೊಡುಗೆಗಳನ್ನು ನೀಡಿದೆ.


COMMERCIAL BREAK
SCROLL TO CONTINUE READING

ಹೋಂಡಾ ಸಿಟಿ ಐದನೇ ಜನರೇಶನ್  ಹೋಂಡಾ ಸಿಟಿ :
ಕಂಪನಿಯು ಈ ಸೆಡಾನ್ ಮೇಲೆ ಗರಿಷ್ಠ 27,396 ರೂ.ಗಳ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ 5,000 ರೂ.ವರೆಗಿನ ನಗದು ರಿಯಾಯಿತಿ, ಕಾರು ವಿನಿಮಯದ ಮೇಲೆ ರೂ. 5,396 ಲಾಭ,  ಹಳೆಯ ಹೋಂಡಾ ಗ್ರಾಹಕರಿಗೆ  5,000 ರೂ. ವರೆಗೆ ಲಾಯಲ್ಟಿ ಬೋನಸ್,  5,000 ರೂ. ವರೆಗೆ ಹೋಂಡಾ ಕಾರು ವಿನಿಮಯ ಬೋನಸ್, ಅಸ್ತಿತ್ವದಲ್ಲಿರುವ ಹೋಂಡಾಗೆ ರೂ. 7,000 ವರೆಗೆ ಹೆಚ್ಚುವರಿ ವಿನಿಮಯ ರಿಯಾಯಿತಿ ಮತ್ತು 8,000 ರೂ . ಗಳ ಕಾರ್ಪೊರೇಟ್ ರಿಯಾಯಿತಿ ನೀಡಲಾಗುವುದು. 


ಇದನ್ನೂ ಓದಿ : Gold Price Today : ಮತ್ತೆ ಏರಿದ ಚಿನ್ನದ ಬೆಲೆ, ಬೆಳ್ಳಿ ಕೂಡಾ ದುಬಾರಿ


ನಾಲ್ಕನೇ ಜನರೇಶನ್   ಹೋಂಡಾ ಸಿಟಿ :
ಫೋರ್ಥ್ ಜೆನ್ ಹೋಂಡಾ ಸಿಟಿಯಲ್ಲಿ 12,000 ರೂ.ವರೆಗಿನ ಒಟ್ಟು ಆಫರ್  ನೀಡಲಾಗಿದೆ. ಕಂಪನಿಯು ಈ ಕಾರಿನಲ್ಲಿ ಹಳೆಯ ಹೋಂಡಾ ಗ್ರಾಹಕರಿಗೆ  5,000 ರೂ. ವರೆಗಿನ ಲಾಯಲ್ಟಿ ಬೋನಸ್ ಮತ್ತು  7,000 ರೂ. ವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಿದೆ. ಜೂನ್ 2022 ರಲ್ಲಿ ಕಂಪನಿಯು ಈ ಐಷಾರಾಮಿ ಕಾರಿನ ಮೇಲೆ ಹೆಚ್ಚಿನ ಕೊಡುಗೆಗಳನ್ನು ನೀಡಿಲ್ಲ.


ಹೋಂಡಾ ಜಾಝ್ : 
ಹೋಂಡಾ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಗ್ರಾಹಕರಿಗೆ  25,947ರೂ  ವರೆ.ಗೆ ಒಟ್ಟು ಆಫರ್ ನೀಡಿದೆ. ಇದರಲ್ಲಿ 5,000 ರೂ.ವರೆಗಿನ ನಗದು ರಿಯಾಯಿತಿ ಅಥವಾ 5,947 ರೂ.ವರೆಗಿನ FOC ಪರಿಕರಗಳು, ವಿನಿಮಯ ಬೋನಸ್‌ಗಾಗಿ 5,000,  ರೂ. ಹಳೆಯ ಹೋಂಡಾ ಗ್ರಾಹಕರಿಗೆ 5,000 ರೂ.  ವರೆಗೆ ಲಾಯಲ್ಟಿ ಬೋನಸ್, ಹೋಂಡಾ ಕಾರ್ ಎಕ್ಸ್‌ಚೇಂಜ್‌ನಲ್ಲಿ  7,000 ಮತರೂ. ತು ರೂ. 3,000 ವರೆಗಿನ ಕಾರ್ಪೊರೇಟ್ ರಿಯಾಯಿತಿ.
ಸೇರಿದೆ. 


ಇದನ್ನೂ ಓದಿ: LPG Gas Subsidy: ನಿಮ್ಮ ಖಾತೆಗೆ ಬರುತ್ತಿದೆಯೇ ಗ್ಯಾಸ್ ಸಿಲಿಂಡರ್ ಸಬ್ಸಿಡಿ ? ಸುಲಭವಾಗಿ ಹೀಗೆ ತಿಳಿದುಕೊಳ್ಳಿ


ಹೋಂಡಾ WR-V :
ಕಂಪನಿಯು ತನ್ನ ಸಬ್ ಕಾಂಪ್ಯಾಕ್ಟ್ SUV ಹೋಂಡಾ WR-V ಮೇಲೆ ಒಟ್ಟು 27,000 ಆಫರ್‌ಗಳನ್ನು ನೀಡಿದೆ. ಇದನ್ನು ಎಲ್ಲಾ ರೂಪಾಂತರಗಳಲ್ಲಿ ನೀಡಲಾಗುತ್ತಿದೆ. ಕಾರು ವಿನಿಮಯದ ಮೇಲೆ 10,000 ರೂ. ವರೆಗಿನ ಬೋನಸ್, ಹಳೆಯ ಗ್ರಾಹಕರಿಗೆ  5,000 ರೂ. ವರೆಗಿನ ಲಾಯಲ್ಟಿ ಬೋನಸ್, ಹೋಂಡಾ ಕಾರುಗಳನ್ನು ವಿನಿಮಯ ಮಾಡಿಕೊಳ್ಳುವಲ್ಲಿ 7,000  ರೂ. ವರೆಗಿನ ಪ್ರಯೋಜನಗಳು ಮತ್ತು5,000  ರೂ.  ವರೆಗೆ ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ.


ಹೋಂಡಾ ಅಮೇಜ್ :
 ಇದು ಅಮೇಜ್ ಸಬ್-ಕಾಂಪ್ಯಾಕ್ಟ್ ಸೆಡಾನ್‌ನ ಆಗಿದ್ದು,  ಅದರ ಎಲ್ಲಾ ರೂಪಾಂತರಗಳ ಮೇಲೆ ಕಂಪನಿಯು  ಒಟ್ಟು 8,000 ರೂ. ವರೆಗೆ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ, 2022 ರ ಜೂನ್ 30 ರವರೆಗೆ ಹಳೆಯ ಹೋಂಡಾ ಗ್ರಾಹಕರಿಗೆ 5,000 ರೂ . ವರೆಗಿನ ಲಾಯಲ್ಟಿ ಬೋನಸ್ ಮತ್ತು  3,000 ರೂ. ವರೆಗಿನ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿದೆ.



https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ