Honda Offers: ಹೋಂಡಾ ಕಾರುಗಳ ಮೇಲೆ ಭಾರೀ ಡಿಸ್ಕೌಂಟ್

Honda Cars India: ಹೋಂಡಾ ಕಾರ್ಸ್ ಇಂಡಿಯಾ ತನ್ನ ಎಲ್ಲಾ ಕಾರುಗಳ ಮೇಲೆ 36,000 ರೂ.ವರೆಗೆ ರಿಯಾಯಿತಿಯನ್ನು ನೀಡಿದೆ, ಗ್ರಾಹಕರು 31 ಮಾರ್ಚ್ 2022 ರವರೆಗೆ ಇದರ ಲಾಭವನ್ನು ಪಡೆಯಬಹುದು. ಯಾವ ಕಾರುಗಳಲ್ಲಿ ಎಷ್ಟು ಲಾಭ ಸಿಗಲಿದೆ ಎಂಬುದನ್ನು ತಿಳಿಯಿರಿ.

Written by - Yashaswini V | Last Updated : Mar 4, 2022, 11:15 AM IST
  • ಕಡಿಮೆ ಬೆಲೆಯಲ್ಲಿ ಹೋಂಡಾ ಕಾರು ಖರೀದಿಸುವ ಅವಕಾಶ
  • ಎಲ್ಲಾ ಹೋಂಡಾ ಕಾರುಗಳ ಮೇಲೆ ಆಕರ್ಷಕ ಆಫರ್‌ಗಳು
  • ಗ್ರಾಹಕರು ಮಾರ್ಚ್ 31 ರವರೆಗೆ ಪ್ರಯೋಜನಗಳನ್ನು ಪಡೆಯುತ್ತಾರೆ
Honda Offers: ಹೋಂಡಾ ಕಾರುಗಳ ಮೇಲೆ ಭಾರೀ ಡಿಸ್ಕೌಂಟ್ title=
Honda Offers

Honda Cars India: ಹೋಂಡಾ ಕಾರ್ಸ್ ಇಂಡಿಯಾ ಮಾರ್ಚ್ 2022 ರಲ್ಲಿ ತನ್ನ ಕಾರುಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡಿದೆ. ಈ ಜಪಾನಿನ ವಾಹನ ತಯಾರಕ ಸಂಸ್ಥೆಯು ತನ್ನ ಎಲ್ಲಾ ಕಾರುಗಳ ಮೇಲೆ ಈ ಕೊಡುಗೆಗಳನ್ನು ನೀಡಿದೆ, ಇದು ಮಾರ್ಚ್ 31 ರವರೆಗೆ ಗ್ರಾಹಕರಿಗೆ ಲಭ್ಯವಿರುತ್ತದೆ. ಈ ಎಲ್ಲಾ ರಿಯಾಯಿತಿಗಳನ್ನು ಹೋಂಡಾ ಅಮೇಜ್, ಹೋಂಡಾ ಸಿಟಿಯ ಐದನೇ ಮತ್ತು ನಾಲ್ಕನೇ ತಲೆಮಾರಿನ, ಹೋಂಡಾ ಡಬ್ಲ್ಯುಆರ್‌ವಿ (ಡಬ್ಲ್ಯುಆರ್-ವಿ) ಮತ್ತು ಹೋಂಡಾ ಜಾಝ್‌ನಲ್ಲಿ ಲಭ್ಯಗೊಳಿಸಲಾಗಿದೆ. ಹೋಂಡಾ ಕಾರ್ಸ್ ಇಂಡಿಯಾ ಈ ಎಲ್ಲಾ ಕಾರುಗಳ ಮೇಲೆ ಮಾಡೆಲ್ ಮತ್ತು ವೇರಿಯಂಟ್ ಅನ್ನು ಅವಲಂಬಿಸಿ ಒಟ್ಟು ರೂ. 35,596 ವರೆಗೆ ಕೊಡುಗೆಗಳನ್ನು ನೀಡಿದೆ.

5 ನೇ ತಲೆಮಾರಿನ ಹೋಂಡಾ ಸಿಟಿ  (Honda City 5th Generation):
ಕಂಪನಿಯು ಈ ಸೆಡಾನ್ ಮೇಲೆ ಗರಿಷ್ಠ 35,596 ರೂ.ಗಳ ರಿಯಾಯಿತಿಯನ್ನು ನೀಡಿದೆ. ಇವುಗಳಲ್ಲಿ 10,000 ರೂ.ವರೆಗಿನ ನಗದು ರಿಯಾಯಿತಿಗಳು (Honda Car Offers), ಕಾರು ವಿನಿಮಯದ ಮೇಲೆ ರೂ. 5,000 ಪ್ರಯೋಜನಗಳು, ಹಳೆಯ ಹೋಂಡಾ ಗ್ರಾಹಕರಿಗೆ ರೂ. 5,000 ವರೆಗೆ ಲಾಯಲ್ಟಿ ಬೋನಸ್, ರೂ. 7,000 ವರೆಗೆ ಹೋಂಡಾ ಕಾರು ವಿನಿಮಯ ಬೋನಸ್ ಮತ್ತು ರೂ. 8,000 ವರೆಗೆ ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ.

ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ (Honda City 4th Generation):
ನಾಲ್ಕನೇ ತಲೆಮಾರಿನ ಹೋಂಡಾ ಸಿಟಿಯಲ್ಲಿ (Honda City 4th Generation) 20,000 ರೂ.ವರೆಗಿನ ಒಟ್ಟು ಕೊಡುಗೆಗಳನ್ನು ನೀಡಲಾಗಿದೆ. ಕಂಪನಿಯು ಹಳೆಯ ಹೋಂಡಾ ಗ್ರಾಹಕರಿಗೆ ರೂ. 5,000 ವರೆಗಿನ ಲಾಯಲ್ಟಿ ಬೋನಸ್, ರೂ. 7,000 ವರೆಗಿನ ಹೋಂಡಾ ಕಾರ್ ಎಕ್ಸ್ಚೇಂಜ್ ಆಫರ್ ಮತ್ತು ಈ ಕಾರಿನ ಮೇಲೆ ರೂ. 8,000 ವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಿದೆ.

ಇದನ್ನೂ ಓದಿ- Maruti Suzuki Offers: ಮಾರುತಿಯ ಕಾರುಗಳ ಮೇಲೆ ಭಾರೀ ರಿಯಾಯಿತಿ

ಹೋಂಡಾ ಜಾಝ್ (Honda Jazz):
ಹೋಂಡಾ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಗ್ರಾಹಕರಿಗೆ ರೂ. 33,158 ವರೆಗೆ ಒಟ್ಟು ಲಾಭವನ್ನು ನೀಡಿದೆ. ಇದರಲ್ಲಿ 10,000 ರೂ.ವರೆಗಿನ ನಗದು ರಿಯಾಯಿತಿ ಅಥವಾ 12,158 ರೂ.ವರೆಗಿನ FOC ಪರಿಕರಗಳು, ಎಕ್ಸ್‌ಚೇಂಜ್ ಬೋನಸ್‌ಗಾಗಿ ರೂ. 5,000, ಹಳೆಯ ಹೋಂಡಾ ಗ್ರಾಹಕರಿಗೆ ರೂ. 5,000 ವರೆಗೆ ಲಾಯಲ್ಟಿ ಬೋನಸ್, ಹೋಂಡಾ ಕಾರ್ ಎಕ್ಸ್‌ಚೇಂಜ್‌ನಲ್ಲಿ ರೂ. 7,000 ಮತ್ತು ರೂ. 4,000 ವರೆಗಿನ ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿದೆ.

ಹೋಂಡಾ WR-V (Honda WR-V):
ಕಂಪನಿಯು ತನ್ನ ಸಬ್ ಕಾಂಪ್ಯಾಕ್ಟ್ SUV ಹೋಂಡಾ WR-V (Honda WR-V) ನಲ್ಲಿ ಒಟ್ಟು 26,000 ಆಫರ್‌ಗಳನ್ನು ನೀಡಿದೆ, ಇದನ್ನು ಎಲ್ಲಾ ಪೆಟ್ರೋಲ್ ರೂಪಾಂತರಗಳಲ್ಲಿ ನೀಡಲಾಗುತ್ತಿದೆ. ಇವುಗಳಲ್ಲಿ ಕಾರು ವಿನಿಮಯದ ಮೇಲೆ ರೂ. 10,000 ವರೆಗಿನ ಬೋನಸ್, ಹಳೆಯ ಗ್ರಾಹಕರಿಗೆ ರೂ. 5,000 ವರೆಗಿನ ಲಾಯಲ್ಟಿ ಬೋನಸ್, ಹೋಂಡಾ ಕಾರುಗಳನ್ನು ವಿನಿಮಯ ಮಾಡಿಕೊಳ್ಳುವಲ್ಲಿ ರೂ. 7,000 ವರೆಗಿನ ಪ್ರಯೋಜನಗಳು ಸೇರಿವೆ.

ಇದನ್ನೂ ಓದಿ- Hero Electric: ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲೈಸೆನ್ಸ್ ಇಲ್ಲದೆ ಓಡಿಸಬಹುದು

ಹೋಂಡಾ ಅಮೇಜ್ (Honda Amaze):
ಅಂತಿಮವಾಗಿ, ಇದು ಅಮೇಜ್ (Honda Amaze) ಸಬ್-ಕಾಂಪ್ಯಾಕ್ಟ್ ಸೆಡಾನ್‌ನ ಸರದಿಯಾಗಿದ್ದು, ಅದರ ಮೇಲೆ ಕಂಪನಿಯು ಎಲ್ಲಾ ರೂಪಾಂತರಗಳ ಮೇಲೆ ರೂ. 15,000 ವರೆಗೆ ಒಟ್ಟು aadhaar pan ರಿಯಾಯಿತಿಯನ್ನು ನೀಡಿದೆ. ಇದರಲ್ಲಿ, ಹೋಂಡಾದ ಹಳೆಯ ಗ್ರಾಹಕರಿಗೆ ರೂ. 5,000 ವರೆಗೆ ಲಾಯಲ್ಟಿ ಬೋನಸ್, ರೂ. 6,000 ವರೆಗೆ ಹೋಂಡಾ ಕಾರ್ ಎಕ್ಸ್ಚೇಂಜ್ ಬೋನಸ್ ಮತ್ತು ರೂ. 4,000 ವರೆಗೆ ಕಾರ್ಪೊರೇಟ್ ಡಿಸ್ಕೌಂಟ್ ಅನ್ನು 31 ಮಾರ್ಚ್ 2022 ರವರೆಗೆ ನೀಡಲಾಗುತ್ತದೆ ಎಂದು ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News