Mahindra Scorpioಯಿಂದ Boleroವರೆಗೆ 1.79 ಲಕ್ಷ ರಿಯಾಯಿತಿ ದರದಲ್ಲಿ ಸಿಗುತ್ತಿವೆ ಈ ಕಾರುಗಳು
Offers On Mahindra Cars : ಮಹೀಂದ್ರ ಸ್ಕಾರ್ಪಿಯೋ ಮೇಲೆ 1.79 ಲಕ್ಷದವರೆಗೆ ಆಫರ್‌ಗಳನ್ನು ನೀಡುತ್ತಿದೆ. ಇದರ ಮಿಡ್-ಸ್ಪೆಕ್ S5 ಮತ್ತು ಟಾಪ್-ಸ್ಪೆಕ್ S11 ರೂಪಾಂತರಗಳು ಸಹ ಕ್ರಮವಾಗಿ ರೂ 1.45 ಲಕ್ಷ ಮತ್ತು ರೂ 1.25 ಲಕ್ಷ ನಗದು ರಿಯಾಯಿತಿಗಳನ್ನು ಪಡೆಯುತ್ತಿವೆ.
Offers On Mahindra Cars : ಮಹೀಂದ್ರಾ ತನ್ನ ಸ್ಕಾರ್ಪಿಯೊ, ಬೊಲೆರೊ, ಕೆಯುವಿ100 ಎನ್‌ಎಕ್ಸ್‌ಟಿ, ಎಕ್ಸ್‌ಯುವಿ300, ಮರಾಜೊ ಮತ್ತು ಅಲ್ಟುರಾಸ್ ಜಿ4 ಮೇಲೆ ಜುಲೈ ತಿಂಗಳಿನಲ್ಲಿ 1.79 ಲಕ್ಷದವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ರಿಯಾಯಿತಿ ಕೊಡುಗೆಗಳು ನಗದು, ವಿನಿಮಯ ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಒಳಗೊಂಡಿವೆ. ಕಂಪನಿಯು ತನ್ನ ಜನಪ್ರಿಯ ಮಾದರಿಗಳಾದ ಥಾರ್, ಬೊಲೆರೊ ನಿಯೋ ಮತ್ತು ಎಕ್ಸ್‌ಯುವಿ 700 ಮೇಲೆ ಯಾವುದೇ ಕೊಡುಗೆಗಳನ್ನು ನೀಡುತ್ತಿಲ್ಲ. ಮಹೀಂದ್ರ ಸ್ಕಾರ್ಪಿಯೋ ಮೇಲೆ 1.79 ಲಕ್ಷದವರೆಗೆ ಆಫರ್‌ಗಳನ್ನು ನೀಡುತ್ತಿದೆ. ಇದರ ಮಿಡ್-ಸ್ಪೆಕ್ S5 ಮತ್ತು ಟಾಪ್-ಸ್ಪೆಕ್ S11 ರೂಪಾಂತರಗಳು ಸಹ ಕ್ರಮವಾಗಿ 1.45 ಲಕ್ಷ ರೂ. ಮತ್ತು 1.25 ಲಕ್ಷ ರೂ. ನಗದು ರಿಯಾಯಿತಿಗಳನ್ನು ಪಡೆಯುತ್ತಿವೆ.
ಮಹೀಂದ್ರ KUV100 NXT ಮೇಲೆ ವಿವಿಧ ರಿಯಾಯಿತಿ ಕೊಡುಗೆಗಳನ್ನು ಸಹ ನೀಡಲಾಗುತ್ತಿದೆ. ಈ ಕಾರನ್ನು ಖರೀದಿಸಿದರೆ 61,055 ರೂ.ವರೆಗೆ ಉಳಿಸಬಹುದು. ಇದರ ಟಾಪ್-ಸ್ಪೆಕ್ K8 ರೂಪಾಂತರದ ಮೇಲೆ 38,055 ರೂ .ವರೆಗೆ ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ. ಮಹೀಂದ್ರಾ XUV300 ನಲ್ಲಿ 62,000 ರೂ. ವರೆಗೆ ಆಫರ್ ಗಳಿವೆ. ಟಾಪ್-ಸ್ಪೆಕ್ W8 (O) ಟ್ರಿಮ್ ಮೇಲೆ 23,000 ರೂ. ವರೆಗೆ ನಗದು ರಿಯಾಯಿತಿ ಸಿಗುತ್ತಿದೆ.
ಇದನ್ನೂ ಓದಿ : Arecanut Price: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ
ಮಹೀಂದ್ರ ಬೊಲೆರೊದ ಎಲ್ಲಾ ರೂಪಾಂತರಗಳಲ್ಲಿ 20,500 ರೂ.ವರೆಗಿನ ಆಫರ್ ಲಭ್ಯವಿದೆ. ಇದರ ಮೇಲೆ ಯಾವುದೇ ರೀತಿಯ ನಗದು ರಿಯಾಯಿತಿ ಇಲ್ಲ. ಮಹೀಂದ್ರ ಮರಾಝೋ ಬೇಸ್-ಸ್ಪೆಕ್ M2 ರೂಪಾಂತರದಲ್ಲಿ 20,000 ರೂ. ನಗದು ರಿಯಾಯಿತಿ ಸಿಗಲಿದೆ. M4 ಮತ್ತು M6 ರೂಪಾಂತರಗಳ ಮೇಲೆ 15,000 ರೂಪಾಯಿಗಳ ರಿಯಾಯಿತಿ ಇದೆ.
Mahindra Alturas G4ನಲ್ಲಿ 81,500 ರೂ.ವರೆಗಿನ ರಿಯಾಯಿತಿಗಳನ್ನು ನೀಡಲಾಗುತ್ತಿದೆ. Alturas G4 ನಲ್ಲಿ ಯಾವುದೇ ನಗದು ರಿಯಾಯಿತಿ ಲಭ್ಯವಿಲ್ಲ. ಆಫರ್ ಏನೇ ಇರಲಿ, ಅದು ನಗದು ರಿಯಾಯಿತಿಯಿಂದ ಪ್ರತ್ಯೇಕವಾಗಿರುತ್ತದೆ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಕೊಡುಗೆಗಳು ಸ್ಥಳ ಮತ್ತು ಡೀಲರ್‌ಶಿಪ್‌ಗೆ ಅನುಗುಣವಾಗಿ ಬದಲಾವಣೆಗೆ ಒಳಪಟ್ಟಿರುತ್ತವೆ. ಆದ್ದರಿಂದ, ಖರೀದಿಸುವ ಮೊದಲು ಅವುಗಳನ್ನು ಹತ್ತಿರದ ಡೀಲರ್‌ಶಿಪ್‌ನಲ್ಲಿ ದೃಢೀಕರಿಸಿ.
ಇದನ್ನೂ ಓದಿ : ITR Filing: ಆದಾಯ ತೆರಿಗೆ ರಿಟರ್ನ್‌ನಲ್ಲಿ ಪೂರ್ಣ ಹಣ ಬಂದಿಲ್ಲವೇ?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.