ITR Filing: ಆದಾಯ ತೆರಿಗೆ ರಿಟರ್ನ್‌ನಲ್ಲಿ ಪೂರ್ಣ ಹಣ ಬಂದಿಲ್ಲವೇ?

ITR Filing: ನೀವು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದು ಇನ್ನೂ ಪೂರ್ಣ ಮೊತ್ತವನ್ನು ಸ್ವೀಕರಿಸದಿದ್ದರೆ, ನೀವು ಅದಕ್ಕೆ ತಿದ್ದುಪಡಿ ವಿನಂತಿಯನ್ನು ಸಲ್ಲಿಸಬೇಕು.

Written by - Yashaswini V | Last Updated : Jul 18, 2022, 11:25 AM IST
  • ಐಟಿಆರ್ ಸಲ್ಲಿಸುವಾಗ ಇ-ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ ಇರುವುದು ಹಲವು ಬಾರಿ ಕಂಡು ಬರುತ್ತದೆ.
  • ಇದರಿಂದಾಗಿ ಐಟಿಆರ್ ಭರ್ತಿ ಮಾಡುವಲ್ಲಿ ಸಮಸ್ಯೆ ಉಂಟಾಗುತ್ತದೆ.
  • ಅಲ್ಲದೆ, ಕೆಲವೊಮ್ಮೆ ಬಳಕೆದಾರರ ಡೇಟಾವನ್ನು ಪಡೆಯಲಾಗುವುದಿಲ್ಲ.
ITR Filing: ಆದಾಯ ತೆರಿಗೆ ರಿಟರ್ನ್‌ನಲ್ಲಿ ಪೂರ್ಣ ಹಣ ಬಂದಿಲ್ಲವೇ?  title=
Income Tax Refund

ಐಟಿಆರ್ ಫೈಲಿಂಗ್:  ಹಲವು ಬಾರಿ ಜನರು ಇನ್ನೂ ಸಮಯವಿದೆಯಲ್ಲಾ ಎಂದು ಮಾಡಬೇಕಾದ ಕೆಲಸವನ್ನು ಮುಂದೂಡುತ್ತಾ ಬರುತ್ತಾರೆ. ಇದರಿಂದ ಕೆಲಸವೂ ವಿಳಂಬವಾಗುತ್ತದೆ. ಇವುಗಳಲ್ಲಿ ಐಟಿಆರ್ ಕೂಡ ಒಂದು. 

ನೀವು ಸಮಯಕ್ಕೆ ಆದಾಯ ತೆರಿಗೆ ರಿಟರ್ನ್ ಮೊತ್ತವನ್ನು ಬಯಸಿದರೆ, ಇದಕ್ಕಾಗಿ ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವುದು ಅವಶ್ಯಕ. ಪ್ರಸ್ತುತ, ಜುಲೈ 31 ರವರೆಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು. ನೀವು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದು ಇನ್ನೂ ಪೂರ್ಣ ಮೊತ್ತವನ್ನು ಸ್ವೀಕರಿಸದಿದ್ದರೆ, ಇದಕ್ಕೆ ಕೆಲವು ಸಂಭವನೀಯ ಕಾರಣಗಳಿರಬಹುದು. ಅವುಗಳ ಬಗ್ಗೆ ತಿಳಿಯೋಣ...

ಇದನ್ನೂ ಓದಿ- IRCTC Food Service: ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್‌ನಲ್ಲಿ ಈ ರೀತಿ ಫುಡ್ ಆರ್ಡರ್ ಮಾಡಿ

ಪೋರ್ಟಲ್ ಸಮಸ್ಯೆ :
ಐಟಿಆರ್ ಸಲ್ಲಿಸುವಾಗ ಇ-ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ ಇರುವುದು ಹಲವು ಬಾರಿ ಕಂಡು ಬರುತ್ತದೆ. ಇದರಿಂದಾಗಿ ಐಟಿಆರ್ ಭರ್ತಿ ಮಾಡುವಲ್ಲಿ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಕೆಲವೊಮ್ಮೆ ಬಳಕೆದಾರರ ಡೇಟಾವನ್ನು ಪಡೆಯಲಾಗುವುದಿಲ್ಲ. ಐಟಿಆರ್ ಸಲ್ಲಿಸುವ ಸಮಯದಲ್ಲಿ ನಿಮಗೆ ಈ ರೀತಿಯ ಏನಾದರೂ ಸಮಸ್ಯೆಗಳು ಸಂಭವಿಸಿದಲ್ಲಿ, ಈ ಕಾರಣದಿಂದ ನೀವು ಸಂಪೂರ್ಣ ಹಣವನ್ನು ಸ್ವೀಕರಿಸದಿರಬಹುದು. ಆದರೆ ಈಗ ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅಂತಹ ಸ್ಥಿತಿಯಲ್ಲಿ ನೀವು ತಿದ್ದುಪಡಿ ವಿನಂತಿಯನ್ನು ಸಲ್ಲಿಸಬೇಕು. ಐಟಿಆರ್ ಸಲ್ಲಿಸುವಲ್ಲಿ ನಿಮ್ಮ ಕಡೆಯಿಂದ ಯಾವುದೇ ತಪ್ಪು ಇಲ್ಲದಿದ್ದಾಗ ಈ ವಿನಂತಿಯನ್ನು ಸಲ್ಲಿಸಬಹುದು. 

ಆದರೆ, ಹಲವು ಬಾರಿ ನೀವು ಆದಾಯ ತೆರಿಗೆ ರಿಟರ್ನ್ಸ್ನಲ್ಲಿ ಕಡಿಮೆ ಹಣವನ್ನು ಸ್ವೀಕರಿಸಬಹುದು. ಇದಕ್ಕೆ ಕಾರಣವೇನು ಮತ್ತು ಸ್ವೀಕರಿಸಿದ ಮೊತ್ತವು ಕಡಿಮೆಯಾಗಿದ್ದರೆ ಏನು ಮಾಡಬೇಕು?

ಇದನ್ನೂ ಓದಿ- GST rates revised: ಕೇಂದ್ರದ ನೂತನ GST ನೀತಿ: ಈ ಎಲ್ಲಾ ವಸ್ತುಗಳು ಇನ್ಮುಂದೆ ದುಬಾರಿ!

ಆದಾಯ ತೆರಿಗೆ ರಿಟರ್ನ್‌ನಲ್ಲಿ ಪೂರ್ಣ ಹಣ ಬರದಿರಲು ಕಾರಣ?
ತೆರಿಗೆ ಸಾಲದಲ್ಲಿನ ವ್ಯತ್ಯಾಸವೂ ಇದಕ್ಕೆ ಕಾರಣವಾಗಿರಬಹುದು. ಫಾರ್ಮ್ 26AS ನ TDS ಕ್ರೆಡಿಟ್‌ನಲ್ಲಿ ವಿಳಂಬವಾಗುವುದರಿಂದ ಮತ್ತು ಹೊಸ ಪೋರ್ಟಲ್‌ನಲ್ಲಿ ತೆರಿಗೆ ಸಲ್ಲಿಸುವಾಗ ಹಣವನ್ನು ಸರಿಯಾಗಿ ಪಡೆಯಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ತೆರಿಗೆ ರಿಟರ್ನ್‌ನಲ್ಲಿನ ಮಾಹಿತಿಯನ್ನು ಸೇರಿಸಲು ಸಾಧ್ಯವಾಗದಿರಬಹುದು. ಆಗಲೂ ನಿಮ್ಮ ಮರುಪಾವತಿ ಕಡಿಮೆಯಾಗಬಹುದು. ಇಂತಹ ಸಂದರ್ಭದಲ್ಲಿಯೂ ಬಳಕೆದಾರರು ತಿದ್ದುಪಡಿ ವಿನಂತಿಯನ್ನು ನಮೂದಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News