Ayodhya Ram Mandir : ಬಹು ಕೋತಿ ಹಿಂದೂಗಳ ಆಸೆಯಂತೆ ರಾಮಲಲ್ಲಾ ಅಯೋಧ್ಯೆಯಲ್ಲಿ ನೆಲೆಸಿಯಾಗಿದೆ.ಜನವರಿ 22 ರಂದು ರಾಮಮಂದಿರದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ರಾಮಲಲ್ಲಾನನ್ನು ಪ್ರತಿಷ್ಠಾಪಿಸಲಾಯಿತು. ಈ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಪಂಚದಾದ್ಯಂತ ಕೋಟಿಗಟ್ಟಲೆ ರೂಪಾಯಿ ದೇಣಿಗೆ ರೂಪದಲ್ಲಿ ಹರಿದು ಬಂದಿವೆ.ಭವ್ಯ ಮಂದಿರ ನಿರ್ಮಾಣಕ್ಕೆ 1,800 ಕೋಟಿ ರೂ.ಗಳ ಅಂದಾಜು ವೆಚ್ಚ ಮಾಡಲಾಗಿತ್ತು. ಈ ಪೈಕಿ 1100 ಕೋಟಿ ರೂ.ಈಗಾಗಲೇ ಖರ್ಚು ಮಾಡಲಾಗಿದೆ. ಈ ದೇವಾಲಯದ ನಿರ್ಮಾಣಕ್ಕಾಗಿ ಸಾಮಾನ್ಯರಿಂದ ಹಿಡಿದು ಕೋಟ್ಯಾಧಿಪತಿಯವರೆಗೆ ದೇಣಿಗೆ ನೀಡಿದ್ದಾರೆ. ಹೀಗೆ ನೀಡಿದ ದೇಣಿಗೆಯಲ್ಲಿ ಸಂಗ್ರಹವಾದ ಮೊತ್ತ 3,200 ಕೋಟಿ ರೂ. ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಅತಿ ಹೆಚ್ಚು ದೇಣಿಗೆ ನೀಡಿದ್ದು ಯಾರು ? : 
ಅಂಬಾನಿ-ಅದಾನಿ ಅಥವಾ ಟಾಟಾ ಗ್ರೂಪ್‌ನಂತಹ ದೊಡ್ಡ ಕೈಗಾರಿಕೋದ್ಯಮಿಗಳು ರಾಮಮಂದಿರಕ್ಕಾಗಿ ಅತಿ ಹೆಚ್ಚು ದೇಣಿಗೆ ನೀಡಿದ್ದಾರೆ ಎಂದು ನೀವು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ದೇಶಾದ್ಯಂತ ಕೋಟಿಗಟ್ಟಲೆ ಜನರು, ಖ್ಯಾತನಾಮರು, ಉದ್ಯಮಿಗಳು, ಋಷಿಮುನಿಗಳು ಮತ್ತು ಸಂತರು ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ. ಮೂಲಗಳ ಪ್ರಕಾರ, ಸೂರತ್‌ನ ಉದ್ಯಮಿಯೊಬ್ಬರು ದೇವಸ್ಥಾನಕ್ಕೆ 101 ಕೆಜಿ ಚಿನ್ನವನ್ನು ದಾನ ಮಾಡಿದ್ದಾರೆ. ವಜ್ರದ ವ್ಯಾಪಾರ ಮಾಡುತ್ತಿರುವ ದಿಲೀಪ್ ಕುಮಾರ್ ವಿ ಲಾಖಿ ಅವರು ರಾಮ ಮಂದಿರಕ್ಕೆ ಅತಿ ದೊಡ್ಡ ದೇಣಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ದಿಲೀಪ್ ಕುಮಾರ್ ಅವರು ದೇವಾಲಯದ ಟ್ರಸ್ಟ್‌ಗೆ 101 ಕೆಜಿ ಚಿನ್ನವನ್ನು ದೇಣಿಗೆ ನೀಡಿದ್ದಾರೆ. ಇದನ್ನು ಗರ್ಭಗುಡಿಯ ಚಿನ್ನ, ಕಂಬಗಳು ಇತ್ಯಾದಿಗಳಲ್ಲಿ ಬಳಸಲಾಗಿದೆ.ಇದನ್ನು ಹಣದ ರೂಪದಲ್ಲಿ ನೋಡುವುದಾದರೆ ಸದ್ಯ 10 ಗ್ರಾಂ ಚಿನ್ನದ ಬೆಲೆ ಸುಮಾರು 68 ಸಾವಿರ ರೂ. ಈ ಪರಿಸ್ಥಿತಿಯಲ್ಲಿ ದಿಲೀಪ್ ಸುಮಾರು 68 ಕೋಟಿ ರೂ.ಯನ್ನು ದಾನ ಮಾಡಿದಂತೆ ಆಗಿದೆ. 


ಇದನ್ನೂ ಓದಿ :  ಐ‌ಆರ್‌ಸಿ‌ಟಿ‌ಸಿಯ ಈ ಪ್ಯಾಕೇಜ್‌ನಲ್ಲಿ ಪ್ರವಾಸಿಗರಿಗೆ ಅಯೋಧ್ಯೆ ಸೇರಿದಂತೆ ಈ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ


ರಾಮಮಂದಿರಕ್ಕೆ ಎರಡನೇ ಅತಿ ದೊಡ್ಡ ದೇಣಿಗೆ ನೀಡಿದವರು ಕಥೆಗಾರ ಮತ್ತು ಆಧ್ಯಾತ್ಮಿಕ ಗುರು ಮೊರಾರಿ ಬಾಪು. ಇವರು ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ಗೆ 18.6 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಟ್ರಸ್ಟ್ ಪ್ರಕಾರ, ಗುಜರಾತ್‌ನ ಆಧ್ಯಾತ್ಮಿಕ ಗುರು ಮೊರಾರಿ ಬಾಪು ಅವರು ರಾಮ ಮಂದಿರಕ್ಕಾಗಿ ಇಷ್ಟು ದೊಡ್ಡ ಮೊತ್ತವನ್ನು ದೇಣಿಗೆ ನೀಡಿದವರಲ್ಲಿ ಮೊದಲಿಗರು. ರಾಮಾಯಣವನ್ನು ಪ್ರಚಾರ ಮಾಡಿದ ಮೊರಾರಿ ಬಾಪು, ಜನರ ಕೊಡುಗೆಗಳ ಮೂಲಕವೇ ಈ ಮೊತ್ತವನ್ನು ಸಂಗ್ರಹಿಸಿದ್ದಾರೆ. ಈ ಪೈಕಿ ಭಾರತದಿಂದ 11.30 ಕೋಟಿ ರೂ., ಯುಕೆ ಮತ್ತು ಯುರೋಪ್‌ನಿಂದ 3.21 ಕೋಟಿ ರೂ., ಅಮೆರಿಕ, ಕೆನಡಾದಿಂದ 4.10 ಕೋಟಿ ರೂ.ಯನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. 


ಅಯೋಧ್ಯೆಗಾಗಿ ಖಜಾನೆ ತೆರೆದ ಕೈಗಾರಿಕೋದ್ಯಮಿಗಳು : 
ಡಾಬರ್ ಇಂಡಿಯಾ ಜನವರಿ 17 ರಿಂದ ಜನವರಿ 31 ರವರೆಗೆ ತನ್ನ ಉತ್ಪನ್ನಗಳ ಮಾರಾಟದಿಂದ ಬರುವ ಲಾಭದ ಒಂದು ಭಾಗವನ್ನು ಶ್ರೀ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡುವುದಾಗಿ ರಾಮ ಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಘೋಷಿಸಿತು. ITC ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದೆ ಮತ್ತು ಉದ್ಘಾಟನೆಯ ದಿನಾಂಕದಿಂದ ಆರು ತಿಂಗಳ ಅವಧಿಗೆ ಧೂಪದ್ರವ್ಯವನ್ನು ದಾನ ಮಾಡಿದೆ. ರಾಮಮಂದಿರದ ದೀಪಾಲಂಕಾರಕ್ಕೆ  ಹ್ಯಾವೆಲ್ಸ್ ಕೊಡುಗೆ ನೀಡಿದೆ. ದೊಡ್ಡ ಉದ್ಯಮಿಗಳು ರಾಮಮಂದಿರಕ್ಕಾಗಿ ಉದಾರವಾಗಿ ದೇಣಿಗೆ ನೀಡಿದ್ದಾರೆ.


ಇದನ್ನೂ ಓದಿ : 7th pay commission :ಈ ತಿಂಗಳಲ್ಲಿಯೇ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ : ಖಾತೆ ಸೇರುವ ಒಟ್ಟು ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ