ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ. ಇವುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ, ಈಗ ವಿಮಾನ ಇಂಧನ (ಚ) ಬೆಲೆ ಇಳಿಕೆಯಾಗಿದೆ. ಏವಿಯೇಷನ್ ​​ಟರ್ಬೈನ್ ಇಂಧನ (ಎಟಿಎಫ್) ಬೆಲೆಯನ್ನು ಇಂದು ಇಳಿಕೆ ಮಾಡಲಾಗಿದ್ದು, ಇದು ಅಂತರರಾಷ್ಟ್ರೀಯ ತೈಲ ಬೆಲೆಗಳ ಕುಸಿತವನ್ನು ಪ್ರತಿಬಿಂಬಿಸುತ್ತದೆ. ಇನ್ನು ವಿಮಾನ ಇಂಧನ (ಎಟಿಎಫ್) ಬೆಲೆ ಶೇ 2.2 ರಷ್ಟು ಕಡಿತಗೊಳಿಸಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಪ್ಪು ಹಾದಿಯಲ್ಲಿ ಹೆಜ್ಜೆ ಹಾಕುತ್ತಿರೋ ʼಯುವʼ: ಮಂತ್ರಾಲಯಕ್ಕೆ ಭೇಟಿ ನೀಡಿದ ದೊಡ್ಮನೆ ಹುಡ್ಗ


ಸಾರ್ವಜನಿಕ ವಲಯದ ಪೆಟ್ರೋಲಿಯಂ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಎಟಿಎಫ್ ಬೆಲೆ ಪ್ರತಿ ಲೀಟರ್‌ಗೆ ರೂ 1,38,147.93 ಇದೆ. ಅದರಲ್ಲಿ ಶೇ. 2.2 ಅಂದರೆ ರೂ 3,084.94 ಕಡಿತಗೊಳಿಸಲಾಗಿದೆ. ಎಟಿಎಫ್ ಬೆಲೆಯನ್ನು ಈ ವರ್ಷ ಎರಡನೇ ಬಾರಿಗೆ ಕಡಿತಗೊಳಿಸಲಾಗುತ್ತಿದೆ. ಕಳೆದ ತಿಂಗಳು ಲೀಟರ್‌ಗೆ 1,41,232.87 ರೂ ಇತ್ತು. 141.23 ರೂ. ಬೆಲೆ ಇಳಿಕೆ ಮಾಡಲಾಗಿತ್ತು. 


ಕಳೆದ ಹದಿನೈದು ದಿನಗಳಿಂದ ಅಂತಾರಾಷ್ಟ್ರೀಯ ತೈಲ ಬೆಲೆಗಳ ಆಧಾರದ ಮೇಲೆ ಪ್ರತಿ ತಿಂಗಳ 1 ಮತ್ತು 16 ರಂದು ATF ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಜುಲೈ 1 ರಂದು ಬೆಲೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಹೀಗಾಗಿ ಈಗ ಬೆಲೆಯನ್ನು ಕಡಿತಗೊಳಿಸುವ ಮೂಲಕ ಸ್ವಲ್ಪ ಪರಿಹಾರವನ್ನು ನೀಡಲಾಗಿದೆ. ಬೆಲೆ ಇಳಿಕೆಯಿಂದ ವಿಮಾನಯಾನ ಕಂಪನಿಗಳಿಗೆ ಸಾಕಷ್ಟು ರಿಲೀಫ್ ಸಿಗಲಿದೆ.


ಇದನ್ನೂ ಓದಿ: Dream Interpretation: ಕನಸಿನಲ್ಲಿ ಈ ಸಂಗತಿಗಳು ಕಾಣುವುದು ದೇವಿ ಲಕ್ಷ್ಮಿಯ ಆಗಮನದ ಸಂಕೇತಗಳಾಗಿವೆ


ಕಚ್ಚಾ ತೈಲ ಬೆಲೆ: 
ಮತ್ತೊಂದೆಡೆ, ಶುಕ್ರವಾರ ಅಂದರೆ ಜುಲೈ 15ರಂದು, ಭವಿಷ್ಯದ ವಹಿವಾಟಿನಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ರೂ 7,604 ಆಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ, ಜುಲೈನಲ್ಲಿ ವಿತರಣೆಗಾಗಿ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ರೂ 9 ಅಥವಾ 0.12 ರಷ್ಟು ಏರಿಕೆಯಾಗಿ ರೂ 7,604 ಕ್ಕೆ ತಲುಪಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ