WATCH: ಸೈನಿಕರ ಕಾಲಿಗೆ ನಮಸ್ಕರಿಸಿದ ಪುಟ್ಟ ಬಾಲಕಿ.. ಪುಟಾಣಿಯ ದೇಶಪ್ರೇಮಕ್ಕೆ ನೆಟ್ಟಿಗರು ಫಿದಾ

Trending Video: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಎಲ್ಲರ ಗಮನಸೆಳೆದಿದೆ ಈ ಪುಟಾಣಿಯ ವಿಡಿಯೋ. ಚಿಕ್ಕ ಹುಡುಗಿಯೊಬ್ಬಳು ಸೈನಿಕರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುತ್ತಿರುವ ದೃಶ್ಯ ನೆಟ್ಟಿಗರ ಮನಗೆದ್ದಿದೆ. 

Written by - Chetana Devarmani | Last Updated : Jul 16, 2022, 02:47 PM IST
  • ಇತ್ತೀಚೆಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವಿಡಿಯೋ ಒಂದು ವೈರಲ್‌ ಆಗುತ್ತಿದೆ
  • ಈ ವಿಡಿಯೋ ನೋಡಿದ ಜನರ ಮುಖದಲ್ಲಿ ನಗು ಮೂಡುತ್ತಿದೆ
  • ಒಬ್ಬ ಚಿಕ್ಕ ಬಾಲಕಿ ಸೈನಿಕರನ್ನು ವಿಶೇಷ ರೀತಿಯಲ್ಲಿ ಗೌರವಿಸುವ ವಿಡಿಯೋ ನೆಟ್ಟಿಗರ ಮನಗೆಲ್ಲುತ್ತಿದೆ
WATCH: ಸೈನಿಕರ ಕಾಲಿಗೆ ನಮಸ್ಕರಿಸಿದ ಪುಟ್ಟ ಬಾಲಕಿ.. ಪುಟಾಣಿಯ ದೇಶಪ್ರೇಮಕ್ಕೆ ನೆಟ್ಟಿಗರು ಫಿದಾ  title=
ವಿಡಿಯೋ

Trending Video: ಇತ್ತೀಚೆಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವಿಡಿಯೋ ಒಂದು ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಜನರ ಮುಖದಲ್ಲಿ ನಗು ಮೂಡುತ್ತಿದೆ. ಒಬ್ಬ ಚಿಕ್ಕ ಬಾಲಕಿ ಸೈನಿಕರನ್ನು ವಿಶೇಷ ರೀತಿಯಲ್ಲಿ ಗೌರವಿಸುವ ವಿಡಿಯೋ ನೆಟ್ಟಿಗರ ಮನಗೆಲ್ಲುತ್ತಿದೆ. ಎಲ್ಲರೂ ಈ ಪುಟಾಣಿಯ ಅಭಿಮಾನಿಗಳಾಗಿದ್ದಾರೆ. ಸೇನೆಯ ಸೈನಿಕರು ನಮ್ಮ ಮುಂದೆ ಹಲವು ಬಾರಿ ಬರುತ್ತಾರೆ. ಆದರೆ ಈ ವೀರರಿಗೆ ಸೆಲ್ಯೂಟ್ ಮಾಡುವವರು ಕೆಲವೇ ಕೆಲವು ಜನರು.  

ಇದನ್ನೂ ಓದಿ: Trending Story: ಭಾರತದ ಈ ಗ್ರಾಮಕ್ಕೆ 'ಐಐಟಿ ಗ್ರಾಮ' ಎನ್ನಲಾಗುತ್ತದೆ, ಕಾರಣ ಇಲ್ಲಿದೆ

ಸೈನಿಕರ ಕಾಲಿಗೆ ನಮಸ್ಕರಿಸಿದ ಪುಟ್ಟ ಬಾಲಕಿ:

ಈ ವಿಡಿಯೋದಲ್ಲಿ ಕೆಲವು ಸೇನಾ ಸಿಬ್ಬಂದಿ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿರುವುದನ್ನು ಕಾಣಬಹುದು. ಆಗ ಒಬ್ಬ ಪುಟ್ಟ ಹುಡುಗಿ ಅವರ ಹತ್ತಿರ ಓಡುತ್ತಾಳೆ. ಇದಾದ ನಂತರ ಏನಾಯಿತು ಎಂದು ನೋಡಿದರೆ ನಿಮ್ಮ ಮುಖದಲ್ಲಿ ನಗು ಅರಳುತ್ತದೆ. ಹುಡುಗಿ ಓಡಿಹೋಗಿ ಸೈನಿಕರ ಪಾದಗಳನ್ನು ಮುಟ್ಟಲು ಪ್ರಾರಂಭಿಸುತ್ತಾಳೆ. ಇದನ್ನು ನೋಡಿ ಸೈನಿಕರೂ ಆಶ್ಚರ್ಯ ಪಡುತ್ತಾರೆ. ನೀವೂ ಈ ಸುಂದರ ವಿಡಿಯೋ ನೋಡಲೇಬೇಕು... 

 

 

ಸೇನೆ ಇದ್ದರೆ ನಾವು ಸುರಕ್ಷಿತವಾಗಿರುತ್ತೇವೆ:

ಸೇನೆಯ ಸಿಬ್ಬಂದಿ ಗಡಿಯಲ್ಲಿ ನಿಂತು ನಮ್ಮನ್ನೆಲ್ಲ ರಕ್ಷಿಸುತ್ತಾರೆ. ಅದಕ್ಕಾಗಿಯೇ ನಮ್ಮ ಕುಟುಂಬ ಸುರಕ್ಷಿತವಾಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇಶವನ್ನು ರಕ್ಷಿಸಿದ ಸೈನಿಕರ ಧೈರ್ಯವನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ ಅವರನ್ನು ಗೌರವಿಸುವುದು ನಿಜವಾಗಿಯೂ ಒಳ್ಳೆಯದು. ಪುಟ್ಟ ಬಾಲಕಿಗೆ ಇಂತಹ ಸಂಸ್ಕಾರ ಕಲಿಸಿಕೊಟ್ಟ ಪೋಷಕರೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವಿಡಿಯೋ ವೈರಲ್: 

ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದ್ದು, ಎಲ್ಲೆಡೆ ಸಖತ್‌ ವೈರಲ್ ಆಗುತ್ತಿದೆ. ಅನೇಕ ಜನರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. 

ಇದನ್ನೂ ಓದಿ: Watch: ಟೀ ಶರ್ಟ್ ಬೆಲೆ 1000 ರೂ. ಅಲ್ಲ, 150 ರೂ.ಎಂದವನಿಗೆ ಕಪಾಳಕ್ಕೆ ಬಾರಿಸಿದ ಮಹಿಳೆ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News