ಬೆಂಗಳೂರು : ಎರಡು ತಿಂಗಳ ಕಾಲ ದಾಖಲೆಯ ಮಟ್ಟವನ್ನು ತಲುಪಿದ ನಂತರ, ಚಿನ್ನ ಮತ್ತು ಬೆಳ್ಳಿ ದರ ಇದೀಗ ನಿಧಾನವಾಗಿ ಇಳಿಮುಖವಾಗುತ್ತಿದೆ. ಒಂದು ಸಮಯದಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ 61,739 ರೂ. ತಲುಪಿತ್ತು. ಬೆಳ್ಳಿಯು ಕೂಡಾ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿ 77,280 ರೂ. ಆಗಿತ್ತು. ಆದರೆ ಆ ನಂತರ ಎರಡೂ ಬೆಲೆಬಾಳುವ ಲೋಹಗಳ ಬೆಲೆ ಕುಸಿಯಲಾರಂಭಿಸಿದೆ. ಇತ್ತೀಚಿನ ವರದಿ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಬುಧವಾರ ಕಡಿಮೆಯಾಗಿದೆ. 


COMMERCIAL BREAK
SCROLL TO CONTINUE READING

ಚಿನ್ನದ ಬೆಲೆಯಲ್ಲಿ  ಸುಮಾರು  3500 ರೂ. ಇಳಿಕೆ : 
ಬುಧವಾರ, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ಎರಡೂ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕುಸಿತ ಕಂಡವು. ಮೇ ತಿಂಗಳ ಗರಿಷ್ಠ ಮಟ್ಟದಿಂದ ಈ ಬಾರಿ ನೋಡಿದರೆ ಚಿನ್ನ 3,500 ರೂಪಾಯಿಗೂ ಹೆಚ್ಚು ಇಳಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ. ಇದೇ ವೇಳೆ ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ ಸುಮಾರು 8000 ರೂ.ಗಳಷ್ಟು ಕುಸಿತ ಕಾಣುತ್ತಿದೆ. 


ಇದನ್ನೂ ಓದಿ : ಇನ್ವಿಕ್ಟೊ ಕಾರ ಬಿಡುಗಡೆ ಮಾಡಿದ ಮಾರುತಿ ಸುಜುಕಿ 


ಎಂಸಿಎಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಕುಸಿತ : 
ಬುಧವಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡುಬರುತ್ತಿದೆ. ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಂಗೆ 4 ರೂಪಾಯಿ ಇಳಿಕೆಯಾಗಿ 58405 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿ ಪ್ರತಿ ಕೆಜಿಗೆ 280 ರೂಪಾಯಿ ಇಳಿಕೆಯಾಗಿ 70,542 ರೂಪಾಯಿಗಳಾಗಿವೆ. 


ಬುಲಿಯನ್ ಮಾರುಕಟ್ಟೆಯಲ್ಲೂ ಮುಂದುವರೆದ ದರ ಕುಸಿತ :
ಬುಲಿಯನ್ ಮಾರುಕಟ್ಟೆಯ ದರಗಳನ್ನು ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಅಧಿಕೃತ ವೆಬ್‌ಸೈಟ್ https://ibjarates.com ನಲ್ಲಿ ಬಿಡುಗಡೆ ಮಾಡಲಾಗುತ್ತದೆ . ಬುಧವಾರದಂದು 24ಕ್ಯಾರೆಟ್ ಚಿನ್ನ 10 ಗ್ರಾಂಗೆ 58,469 ರೂ.ಗೆ ಮತ್ತು ಬೆಳ್ಳಿ ಕೆಜಿಗೆ 69,797 ರೂ.ಗೆ ಇಳಿದಿದೆ. 


ಇದನ್ನೂ ಓದಿ : PM Kisan ಯೋಜನೆಯಲ್ಲಿ ಮಹತ್ವದ ಬದಲಾವಣೆ: ಕೋಟ್ಯಾಂತರ ರೈತರ ಮೇಲೆ ನೇರ ಪರಿಣಾಮ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.