ಕೇವಲ 15 ರೂಪಾಯಿಗೆ ಲಭ್ಯವಾಗುವುದು ಲೀಟರ್ ಪೆಟ್ರೋಲ್! ಕೇಂದ್ರ ಸಚಿವ ಗಡ್ಕರಿ ಮಹತ್ವದ ಹೇಳಿಕೆ

ಕೇಂದ್ರ ಸಚಿವರ ಹೇಳಿಕೆ ಪ್ರಕಾರ ಮುಂಬರುವ ದಿನಗಳಲ್ಲಿ ಲೀಟರ್ ಪೆಟ್ರೋಲ್ ಕೇವಲ 15 ರೂಪಾಯಿಗೆ ಲಭ್ಯವಾಗಲಿದೆ. ಇದರ ಹಿಂದಿನ ಕಾರಣವನ್ನು ಕೂಡಾ ಸಚಿವ ಗಡ್ಕರಿ ವಿವರಿಸಿದ್ದಾರೆ.

Written by - Ranjitha R K | Last Updated : Jul 5, 2023, 11:26 AM IST
  • ಸಚಿವ ನಿತಿನ್ ಗಡ್ಕರಿ ಮಹತ್ವದ ಹೇಳಿಕೆ
  • ಪೆಟ್ರೋಲ್ ಬೆಲೆಯ ಬಗ್ಗೆ ಗಡ್ಕರಿ ಅಚ್ಚರಿಯ ಹೇಳಿಕೆ
  • ಕೇವಲ 15 ರೂಪಾಯಿಗೆ ಲೀಟರ್ ಪೆಟ್ರೋಲ್ ಲಭ್ಯ
ಕೇವಲ 15 ರೂಪಾಯಿಗೆ  ಲಭ್ಯವಾಗುವುದು ಲೀಟರ್ ಪೆಟ್ರೋಲ್! ಕೇಂದ್ರ ಸಚಿವ ಗಡ್ಕರಿ ಮಹತ್ವದ ಹೇಳಿಕೆ  title=

ನವದೆಹಲಿ : ತಮ್ಮ ಕೆಲಸದ ಮೂಲಕವೇ ಹೆಸರಾದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹತ್ವದ ಹೇಳಿಕೆ ನೀಡಿದ್ದಾರೆ. ಗಗನಕ್ಕೇರಿರುವ ಪೆಟ್ರೋಲ್ ಬೆಲೆಯ ಬಗ್ಗೆ ಗಡ್ಕರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕೇಂದ್ರ ಸಚಿವರ ಹೇಳಿಕೆ ಪ್ರಕಾರ ಮುಂಬರುವ ದಿನಗಳಲ್ಲಿ ಲೀಟರ್ ಪೆಟ್ರೋಲ್ ಕೇವಲ 15 ರೂಪಾಯಿಗೆ ಲಭ್ಯವಾಗಲಿದೆ. ಇದರ ಹಿಂದಿನ ಕಾರಣವನ್ನು ಕೂಡಾ ಸಚಿವ ಗಡ್ಕರಿ ವಿವರಿಸಿದ್ದಾರೆ. ಕೇಂದ್ರ ಸಚಿವರ ಈ ಹೇಳಿಕೆ ವಾಹನ ಸವಾರರ ಸಂತಸ ಹೆಚ್ಚಿಸಿದೆ. ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಾಜಸ್ಥಾನದ ಪ್ರತಾಪಗಢದಲ್ಲಿ 5,600 ಕೋಟಿ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ್ದಾರೆ. 

ಮುಂಬರುವ ಎಲ್ಲಾ ವಾಹನಗಳು ಎಥೆನಾಲ್ ಮೂಲಕ ಚಲಿಸುತ್ತವೆ : 
ಈ ವೇಳೆ ರೈತರ ಆರ್ಥಿಕ ಸಬಲೀಕರಣದ ಬಗ್ಗೆಯೂ ಸಚಿವರು ಮಾತನಾಡಿದ್ದಾರೆ. ರೈತ ಈಗ ಅನ್ನದಾತನ ಜೊತೆಗೆ ಶಕ್ತಿ ಕೊಡುವವನಾಗುತ್ತಾನೆ ಎಂದು ಹೇಳಿದ್ದಾರೆ. ಆಗಸ್ಟ್‌ನಲ್ಲಿ ಟೊಯೊಟಾ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಗಡ್ಕರಿ ಘೋಷಿಸಿದ್ದಾರೆ. ಈ ಎಲ್ಲಾ ಹೊಸ ವಾಹನಗಳು ರೈತರು ಸಿದ್ಧಪಡಿಸಿದ ಎಥೆನಾಲ್‌ನಿಂದ ಚಲಿಸುತ್ತವೆ. 60% ಎಥೆನಾಲ್ ಮತ್ತು 40% ವಿದ್ಯುತ್ ಆಧಾರದ ಮೇಲೆ ಅದರ ಸರಾಸರಿಯನ್ನು ಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ. ಇದಾದ ನಂತರ ಸರಾಸರಿ ಪೆಟ್ರೋಲ್ ಬೆಲೆ ಲೀಟರ್‌ಗೆ 15 ರೂ. ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ 16 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ಇದೇ ವೇಳೆ ಹೇಳಿದ್ದಾರೆ. 

ಇದನ್ನೂ ಓದಿ Vegetable Price: ತರಕಾರ ಬೆಲೆ ನೋಡಿ ಗ್ರಾಹಕರು ಸುಸ್ತೋ ಸುಸ್ತು

7.5 ಲಕ್ಷ ಕೋಟಿಗಳ ವಹಿವಾಟು : 
ಉದ್ಯೋಗದ ಕುರಿತು ಮಾತನಾಡಿದ ಗಡ್ಕರಿ, ಆಟೋಮೊಬೈಲ್ ಉದ್ಯಮದ ವಹಿವಾಟು 7.5 ಲಕ್ಷ ಕೋಟಿ. ಈ ಪೈಕಿ 4.5 ಕೋಟಿ ಯುವಕರಿಗೆ ಉದ್ಯೋಗ ಸಿಕ್ಕಿದೆ. ಈ ಉದ್ಯಮ 10 ಕೋಟಿ ಜನರಿಗೆ ಉದ್ಯೋಗ ನೀಡುವ ದಿನ ದೂರವಿಲ್ಲ. ಕ್ಷಿಪ್ರ ಅಭಿವೃದ್ಧಿಯಿಂದಾಗಿ ಭಾರತವು ವಿಶ್ವದಲ್ಲಿ ವಿಭಿನ್ನ ಗುರುತನ್ನು ಹೊಂದಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶ ಶೀಘ್ರದಲ್ಲೇ ಸೂಪರ್ ಪವರ್ ಆಗಲಿದೆ ಎಂದಿದ್ದಾರೆ.   ಇನ್ನು ಎಥೆನಾಲ್ ಉತ್ಪಾದನೆಯಿಂದ ಕಚ್ಚಾ ತೈಲದ ಆಮದು ಕಡಿಮೆಯಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಈ ಬಾರಿ ಡಬಲ್ ಜಾಕ್‌ಪಾಟ್: ಎರಡು ಭತ್ಯೆಗಳ ಏರಿಕೆಯೊಂದಿಗೆ ವೇತನದಲ್ಲಿ ಭಾರೀ ಹೆಚ್ಚಳ !

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News