ಕುಸಿಯುತ್ತಲೇ ಇದೆ ಚಿನ್ನದ ದರ ! ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ಇನ್ನೂ ಅಗ್ಗವಾಗುವ ಸಾಧ್ಯತೆ
Gold Perice Today : ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ. ಜಾಗತಿಕ ಮಾರುಕಟ್ಟೆಯ ಕುಸಿತದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಕಂಡು ಬರುತ್ತಿದೆ.
Gold Perice Today : ಚಿನ್ನಾಭರಣ ಖರೀದಿಸುವವರಿಗೆ ಸಂತಸದ ಸುದ್ದಿ ಇದು. ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ. ಈ ವಾರದ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಇಂದು ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನ ಅಗ್ಗವಾಗಿದೆ. 10 ಗ್ರಾಂ ಚಿನ್ನದ ಬೆಲೆ 58500 ರೂ.ಗಿಂತ ಕೆಳಗಿಳಿದಿದೆ. ಜಾಗತಿಕ ಮಾರುಕಟ್ಟೆಯ ಕುಸಿತದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಕಂಡು ಬರುತ್ತಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಕಡಿಮೆಯಾಗಿದೆ ? :
ಇಂದು, ಬಹು ಸರಕು ವಿನಿಮಯ ಕೇಂದ್ರದಲ್ಲಿ 0.40 ಶೇಕಡಾ ಇಳಿಕೆಯೊಂದಿಗೆ ಪ್ರತಿ 10 ಗ್ರಾಂ ಚಿನ್ನ 58,449 ರೂ. ಆಗಿದೆ. ಇದಲ್ಲದೇ ಬೆಳ್ಳಿ ಕೂಡ ಶೇ.0.01ರಷ್ಟು ಇಳಿಕೆ ಕಂಡಿದ್ದು, ಪ್ರತಿ ಕೆಜಿಗೆ 69714 ರೂ. ಆಗಿದೆ.
ಇದನ್ನೂ ಓದಿ : ಗ್ರಾಹಕರಿಗೆ ಶಾಕ್ ನೀಡಿದ ಈ ಐದು ಬ್ಯಾಂಕ್ ಗಳು! ಇಲ್ಲಿ ಲೋನ್ ಪಡೆಯುವುದು ಬಲು ದುಬಾರಿ
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೇಗಿದೆ ? :
ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಕಾಮ್ಯಾಕ್ಸ್‌ನಲ್ಲಿ ಪ್ರತಿ ಔನ್ಸ್‌ಗೆ 1922 ಡಾಲರ್ ಮಟ್ಟದಲ್ಲಿ ಚಿನ್ನವು ವಹಿವಾಟು ನಡೆಸುತ್ತಿದೆ. ಇದಲ್ಲದೇ ಬೆಳ್ಳಿ ಕೂಡಾ ಅಲ್ಪ ಇಳಿಕೆಯೊಂದಿಗೆ ಪ್ರತಿ ಔನ್ಸ್ ಗೆ 22.5 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
22 ಕ್ಯಾರೆಟ್ ಚಿನ್ನದ ದರ :
10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ ದೆಹಲಿಯಲ್ಲಿ 54,250, ಮುಂಬೈನಲ್ಲಿ 54,100, ಕೋಲ್ಕತ್ತಾದಲ್ಲಿ 54,100, ಲಕ್ನೋದಲ್ಲಿ 54,250, ಬೆಂಗಳೂರಿನಲ್ಲಿ 54,100, ಜೈಪುರದಲ್ಲಿ 54,250, ಪಾಟ್ನಾದಲ್ಲಿ 54,150 ಆಗಿದೆ.
ಇದನ್ನೂ ಓದಿ : ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ 2 ವಿಧದ 500 ರೂ. ನೋಟುಗಳು: ಆರ್ ಬಿಐ ನೀಡಿದೆ ಮಹತ್ವದ ಅಪ್ ಡೇಟ್
24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು? :
ಇದಲ್ಲದೇ, 24 ಕ್ಯಾರೆಟ್ ಚಿನ್ನದ ಬೆಲೆ ದೆಹಲಿಯಲ್ಲಿ 59,170 ರೂ., 59,020 ರೂ., 59,020 ರೂ. ಮತ್ತು ಲಕ್ನೋದಲ್ಲಿ 10 ಗ್ರಾಂಗೆ 59,170 ರೂ. ಆಗಿದೆ.
ಖರೀದಿಸುವ ಮೊದಲು ಇದನ್ನು ಪರಿಶೀಲಿಸಿ :
ನೀವು ಕೂಡ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ನೀವು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ ನೀವು ಚಿನ್ನದ ಶುದ್ಧತೆಯ ಬಗ್ಗೆ ನಿಖರ ಮಾಹಿತಿ ನೀಡುತ್ತದೆ. ಇದಲ್ಲದೇ ಈ ಆಪ್ ಮೂಲಕ ದೂರು ಕೂಡಾ ನೀಡಬಹುದು.
ಇದನ್ನೂ ಓದಿ : Savings Account: ನಿಮ್ಮ ಬಳಿಯೂ ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದೆಯೇ? ಈ 4 ವಿಷಯಗಳನ್ನು ನಿರ್ಲಕ್ಷಿಸಬೇಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.