ಇನ್ನು ಎಲ್ಲಾ ಸರ್ಕಾರಿ ನೌಕರರಿಗೆ ಸಿಗುವುದು ಹಳೆಯ ಪಿಂಚಣಿ ಯೋಜನೆಯ ಲಾಭ !

ಹಳೆಯ ಪಿಂಚಣಿ ಯೋಜನೆಗೆ ಪರ್ಯಾಯ ಯೋಜನೆ ತಯಾರಿಸಲು ಸರ್ಕಾರ ಸಮಿತಿಯನ್ನು ರಚಿಸಿದೆ. ಸಮಿತಿಯು ಈಗ ಹಳೆಯ ಪಿಂಚಣಿ ಯೋಜನೆಯಂತೆ ಹೊಸ ಪಿಂಚಣಿ ಯೋಜನೆಯನ್ನು ಜನಪ್ರಿಯಗೊಳಿಸಲು ಕೆಲಸ ಮಾಡಲಿದೆ.

Written by - Ranjitha R K | Last Updated : Aug 16, 2023, 09:03 AM IST
  • NPS ನಲ್ಲಿ ಪ್ರಸ್ತುತ ವ್ಯವಸ್ಥೆ ಏನು?
  • ಹಳೆಯ ಪಿಂಚಣಿ ಯೋಜನೆಯ ರಚನೆ ಏನು?
  • ಹಳೆಯ ಪಿಂಚಣಿಗೆ RBI ನೀಡಿದ ಎಚ್ಚರಿಕೆ ಏನು?
ಇನ್ನು ಎಲ್ಲಾ ಸರ್ಕಾರಿ  ನೌಕರರಿಗೆ ಸಿಗುವುದು ಹಳೆಯ ಪಿಂಚಣಿ ಯೋಜನೆಯ ಲಾಭ !  title=

Latest new on old pension Scheme : ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರು ಹಳೆ ಪಿಂಚಣಿ ಯೋಜನೆ ಜಾರಿಗಾಗಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪ್ರತಿನಿಧಿಗಳ ಜೊತೆಗೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಒಂದು ಸಮಿತಿಯನ್ನು ರಚಿಸಿದೆ. ಈಗ ಈ ಬಗ್ಗೆ  ಹೊಸ ಅಪ್ಡೇಟ್ ಹೊರ ಬಿದ್ದಿದೆ. 

ಸರ್ಕಾರದ ಇತ್ತೀಚಿನ ಅಪ್ಡೇಟ್ ಪ್ರಕಾರ, ಈಗ ಹಳೆಯ ಪಿಂಚಣಿ ಪ್ರಯೋಜನಗಳು ಹೊಸ ಪಿಂಚಣಿ ಯೋಜನೆಯಲ್ಲಿಯೂ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ. ಪಿಂಚಣಿ ಯೋಜನೆ ಬಗೆಗಿನ ಹೊಸ ಅಪ್ಡೇಟ್ ಕುರಿತ ಸಂಪೂರ್ಣ ವಿವರ ಇಲ್ಲಿದೆ. 

ಇದನ್ನೂ ಓದಿ : ಇಶಾ ಅಂಬಾನಿ ನೇತೃತ್ವದ ಸಂಸ್ಥೆಯಲ್ಲಿ 5000 ಕೋಟಿ ರೂ ಹೂಡಲು ಮುಂದಾದ ಮುಖೇಶ್ ಅಂಬಾನಿ

ಸರ್ಕಾರಿ ನೌಕರರಿಗೆ ಹಣಕಾಸು ಸಚಿವರು ಹೊರಡಿಸಿರುವ ಹೊಸ ಅಧಿಸೂಚನೆ ಅತ್ಯಂತ ಆಶಾದಾಯಕವಾಗಿದೆ. ಇದೀಗ ಹಳೆ ಪಿಂಚಣಿ ಯೋಜನೆಯ ಲಾಭ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿಯೇ (ಎನ್ ಪಿಎಸ್) ದೊರೆಯಲಿದೆ ಎನ್ನಲಾಗಿದೆ. ಹಳೆಯ ಪಿಂಚಣಿ ಯೋಜನೆಗೆ ಬದಲಿ ಯೋಜನೆ ತಯಾರಿಸಲು ಸರ್ಕಾರ ಸಮಿತಿಯನ್ನು ರಚಿಸಿದೆ. ಸಮಿತಿಯು ಈಗ ಹಳೆಯ ಪಿಂಚಣಿ ಯೋಜನೆಯಂತೆ ಹೊಸ ಪಿಂಚಣಿ ಯೋಜನೆಯನ್ನು ಜನಪ್ರಿಯಗೊಳಿಸುವಲ್ಲಿ ಕಾರ್ಯ ನಿರತವಾಗಿದೆ. 

ಇದರ ಪ್ರಕಾರ ಖಾತರಿಯ ಆದಾಯ ಹೊಂದುವ ಮತ್ತು ಹೆಚ್ಚುವರಿ ಆದಾಯ ಒದಗಿಸುವ ಮಾತುಕತೆ ನಡೆಸಲಾಗುತ್ತಿದೆ. ಇದರೊಂದಿಗೆ ಸರಕಾರದ ಕೊಡುಗೆಯನ್ನು ಶೇ.14ಕ್ಕೆ ಏರಿಸುವ ಯೋಜನೆಯೂ ಇದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ ಹೊಸ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ಮಾಡಲಾಗುವುದು. ಈ ವ್ಯವಸ್ಥೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಮ್ಮತವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : ಮನೆಯ ಟೆರೇಸ್ ನಿಂದ ಈ ಉದ್ಯಮಗಳನ್ನು ಆರಂಭಿಸಿ ನೀವು ಸಾಕಷ್ಟು ಆದಾಯ ಗಳಿಕೆ ಮಾಡಬಹುದು!

ಹಳೆಯ ಪಿಂಚಣಿ ಯೋಜನೆ ಬಗ್ಗೆ ನಡೆದಿರುವ ಚರ್ಚೆ :
ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಿ ನೌಕರರು ದೇಶಾದ್ಯಂತ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ . ಹಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತಂದಿವೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಕೇಂದ್ರ ಸರ್ಕಾರವೂ ಈ ಬಗ್ಗೆ ಚಿಂತನೆ ನಡೆಸಿದೆ. ಆದರೆ ಕೇಂದ್ರ ಸರಕಾರ ಹಳೆಯ ಪಿಂಚಣಿ ಯೋಜನೆ ತರಲು ಮುಂದಾಗುತ್ತಿಲ್ಲ. ಬದಲಾಗಿ, ಹಣಕಾಸು ಸಚಿವಾಲಯವು ಹೊಸ ಪಿಂಚಣಿ ಯೋಜನೆಯಲ್ಲಿ ಖಾತರಿಯ ಆದಾಯ ನೀಡುವ ಬಗ್ಗೆ ಅಧ್ಯಯನ ಮಾಡುತ್ತಿದೆ.  ಅಂದರೆ ಹಳೆ ಪಿಂಚಣಿಯ ಲಾಭವನ್ನು ಹೊಸ ಪಿಂಚಣಿ ಯೋಜನೆಗೂ ಸೇರಿಸಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯ ಪ್ರಯೋಜನಗಳೇನು?:
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಕನಿಷ್ಠ ಖಾತರಿ ಪಿಂಚಣಿ ಯೋಜನೆಯನ್ನು ಪರಿಚಯಿಸಲು ಸರ್ಕಾರ ಈಗ ಯೋಚಿಸುತ್ತಿದೆ. ಇದರಲ್ಲಿ ಪಿಂಚಣಿದಾರರ ಹೆಚ್ಚುವರಿ ಆದಾಯದ ಬಗ್ಗೆಯೂ ಗಮನ ಹರಿಸಲಾಗುವುದು. ಇದರೊಂದಿಗೆ ಸರ್ಕಾರದ ಕೊಡುಗೆಯನ್ನು ಶೇ.14ಕ್ಕಿಂತ ಹೆಚ್ಚು ಹೆಚ್ಚಿಸುವ ಯೋಜನೆ ಇದೆ. ಆದರೆ, ಬೊಕ್ಕಸಕ್ಕೆ ಹೊರೆಯಾಗದಂತೆ ಕೊಡುಗೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಪಿಂಚಣಿಯನ್ನು ಹೆಚ್ಚಿಸಲು ನೀವು ವರ್ಷಾಶನದಲ್ಲಿ ಹೆಚ್ಚು ಹೂಡಿಕೆ ಮಾಡಬಹುದು. ಪ್ರಸ್ತುತ, ಒಟ್ಟು ನಿಧಿಯ 40% ವರ್ಷಾಶನದಲ್ಲಿ ಹೂಡಿಕೆ ಮಾಡಲ್ಪಟ್ಟಿದೆ. ಅದರಲ್ಲಿ ಕೊನೆಯ ಸಂಬಳದ 35% ಅನ್ನು ಪಿಂಚಣಿಯಾಗಿ ತೆಗೆದುಕೊಳ್ಳಲಾಗುತ್ತದೆ.  ಆದರೂ ಇದು ಮಾರುಕಟ್ಟೆಗೆ ಲಿಂಕ್ ಆಗಿರುವುದರಿಂದ ಇದರಲ್ಲಿ ಖಾತರಿಯಾಗಿ ಏನೂ ಹೇಳಲು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ : ಕಬ್ಬು ಬೆಳೆಗಾರರಿಗೆ 9,499 ಕೋಟಿ ರೂ. ಬಾಕಿ: ಕೇಂದ್ರ ಸರ್ಕಾರದ ಮಾಹಿತಿ

NPSನಲ್ಲಿ ಪ್ರಸ್ತುತ ವ್ಯವಸ್ಥೆ ಏನು?:
ಮೂಲ ವೇತನದ 10% ಉದ್ಯೋಗಿ ಮತ್ತು 14% ಸರ್ಕಾರದಿಂದ ವತಿಯಿಂದ  ಪಡೆಯಲಾಗುವುದು. ಒಟ್ಟಾರೆಯಾಗಿ, ಮೂಲ ವೇತನದ 24% ಪಿಂಚಣಿ ನಿಧಿಯಲ್ಲಿ ಠೇವಣಿಯಾಗುತ್ತದೆ. ಫಂಡ್ ಮ್ಯಾನೇಜರ್‌ಗಳು ಈಕ್ವಿಟಿ ಮತ್ತು ಡೆಟ್ ಫಂಡ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಆದಾಗ್ಯೂ, ಈಕ್ವಿಟಿ ಮತ್ತು ಸಾಲದಲ್ಲಿನ ಹೂಡಿಕೆಯ ಶೇಕಡಾವಾರು ಪ್ರಮಾಣವನ್ನು ಉದ್ಯೋಗಿ ನಿರ್ಧರಿಸುತ್ತಾರೆ. 60% ನಿವೃತ್ತಿಯ ಸಮಯದಲ್ಲಿ ಹಿಂಪಡೆಯಬಹುದು. ಆದರೆ, 40% ಮೊತ್ತವನ್ನು ವರ್ಷಾಶನ ಯೋಜನೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ನಿವೃತ್ತಿಯ ಸಮಯದಲ್ಲಿ ಸಿಗುವ ಹಣ ಸಂಪೂರ್ಣವಾಗಿ ತೆರಿಗೆ-ಮುಕ್ತವಾಗಿರುತ್ತವೆ.

ಹಳೆಯ ಪಿಂಚಣಿ ಯೋಜನೆಯ ರಚನೆ ಏನು? :
ಹಳೆ ಪಿಂಚಣಿ ಯೋಜನೆಯಲ್ಲಿ ಸರ್ಕಾರದ ಖಜಾನೆಯಿಂದ ಹಣ ಪಾವತಿಸಲಾಗುತ್ತಿತ್ತು. ಇದರಲ್ಲಿ, ನೌಕರನ ಕೊನೆಯ ಸಂಬಳದ ಅರ್ಧದಷ್ಟು ಪಿಂಚಣಿ ನೀಡಲಾಗುತ್ತದೆ. ನೌಕರನ ಮರಣದ ನಂತರ, ಸಂಗಾತಿಯು ಸಹ ಪಿಂಚಣಿ ಪ್ರಯೋಜನವನ್ನು ಪಡೆಯುತ್ತಾನೆ. 6 ತಿಂಗಳಿಗೊಮ್ಮೆ ಹೆಚ್ಚಿದ ಡಿಎ ಪಡೆಯುವ ಅವಕಾಶವೂ ಇದೆ. ಅಂದರೆ,  ಡಿಎ ಹೆಚ್ಚಾದಾಗ, ಪಿಂಚಣಿಯೂ ಹೆಚ್ಚಾಗುವುದು. ಸರ್ಕಾರಿ ನೌಕರರು ಅವರ ಕಡೆಯಿಂದ ಯಾವುದೇ ಕೊಡುಗೆ ನೀಡಬೇಕಾಗಿಲ್ಲ. 

ಇದನ್ನೂ ಓದಿ : 70 ಸಾವಿರ ರೂ.ಗೆ ಬೈಕ್ ಅಥವಾ ಸ್ಕೂಟರ್ ಖರೀದಿಸುತ್ತೀರಾ? ಮೊದಲು ಇದನ್ನು ತಿಳಿಯಿರಿ

ಹಳೆಯ ಪಿಂಚಣಿಗೆ RBI ನೀಡಿದ ಎಚ್ಚರಿಕೆ ಏನು? :
ಹಳೆಯ ಪಿಂಚಣಿ ಬಗ್ಗೆ ಹಲವು ವಾದಗಳಿವೆ. ಇದಕ್ಕೆ ಆರ್‌ಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದ ಬೊಕ್ಕಸಕ್ಕೆ ಹೊರೆ ಹೆಚ್ಚಾಗುತ್ತಿದೆ ಎಂದು ಕೆಲ ಸಮಯದ ಹಿಂದೆ ಆರ್‌ಬಿಐ ಎಚ್ಚರಿಕೆ ನೀಡಿತ್ತು. ಇದು ಅಭಿವೃದ್ಧಿ ಕಾರ್ಯಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ, ಇದು ಆರ್ಥಿಕತೆಗೆ ಹಾನಿಯಾಗಬಹುದು ಎಂದು ಆರ್‌ಬಿಐ ಎಚ್ಚರಿಸಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯಗಳಿಗೂ ಹಳೆಯ ಪಿಂಚಣಿ ಸಮಸ್ಯೆಯಾಗಬಹುದು. ಇದು ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯಗಳ ಆರ್ಥಿಕ ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಆರ್‌ಬಿಐ ಹೇಳಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News