Hyundai Car Sales: ಮಾರ್ಚ್‌ನಲ್ಲಿ ಮುಗಿಬಿದ್ದು ಈ ಕಾರ್ ಖರೀದಿಸಿದ ಗ್ರಾಹಕರು!
ಹುಂಡೈ ಕಾರು ಮಾರಾಟ: ದೇಶದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾದ ಒಟ್ಟು ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.7ರಷ್ಟು ಏರಿಕೆಯಾಗಿದ್ದು, ಮಾರ್ಚ್ 2024ರಲ್ಲಿ 65,601 ಯುನಿಟ್‌ಗಳಿಗೆ ತಲುಪಿದೆ.
ಮಾರ್ಚ್ 2024ರಲ್ಲಿ ಹುಂಡೈ ಮಾರಾಟ: ದೇಶದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾದ ಒಟ್ಟು ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.7ರಷ್ಟು ಏರಿಕೆಯಾಗಿದ್ದು, ಮಾರ್ಚ್ 2024ರಲ್ಲಿ 65,601 ಯುನಿಟ್‌ಗಳಿಗೆ ತಲುಪಿದೆ. ಕಂಪನಿಯು ಮಾರ್ಚ್ 2023ರಲ್ಲಿ 61,500 ವಾಹನಗಳನ್ನು ಮಾರಾಟ ಮಾಡಿತ್ತು. ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಮಂಗಳವಾರ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
ಕಳೆದ ತಿಂಗಳು (ಮಾರ್ಚ್ 2024) ವಾಹನಗಳ ದೇಶೀಯ ಸಗಟು ಮಾರಾಟವು ಶೇ.5ರಷ್ಟು ಏರಿಕೆಯಾಗಿ 53,001 ಯುನಿಟ್‌ಗಳಿಗೆ ತಲುಪಿದೆ. ಇದು ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ (ಮಾರ್ಚ್ 2023) 50,600 ಯುನಿಟ್ ಆಗಿತ್ತು. ಮಾರ್ಚ್‌ನಲ್ಲಿ ರಫ್ತು ಶೇ.16ರಷ್ಟು ಏರಿಕೆಯಾಗಿ 12,600 ಯುನಿಟ್‌ಗಳಿಗೆ ತಲುಪಿದೆ, ಆದರೆ ವರ್ಷದ ಹಿಂದೆ ಇದೇ ಅವಧಿಯಲ್ಲಿ 10,900 ಯುನಿಟ್‌ಗಳಷ್ಟಿತ್ತು.
ಇದನ್ನೂ ಓದಿ: ರೈತರೇ ಗಮನಿಸಿ: ಇಂದಿನಿಂದಲೇ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭ..!
2023-24 ಹಣಕಾಸು ವರ್ಷದಲ್ಲಿ ಮಾರಾಟ
2023-24ರ ಹಣಕಾಸು ವರ್ಷದಲ್ಲಿ ಕಂಪನಿಯು 7,77,876 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಇದು ಕಂಪನಿಯ ಅತ್ಯಧಿಕ ಮಾರಾಟವಾಗಿದೆ (ಯಾವುದೇ ಒಂದು ಹಣಕಾಸು ವರ್ಷದಲ್ಲಿ). ಈ ಹಿಂದೆ 2022-23ರ ಹಣಕಾಸು ವರ್ಷದಲ್ಲಿ 7,20,565 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದಕ್ಕೆ ಹೋಲಿಸಿದರೆ 2023-24ರ ಹಣಕಾಸು ವರ್ಷದಲ್ಲಿ ಮಾರಾಟವು ಶೇ.8ರಷ್ಟು ಹೆಚ್ಚಾಗಿದೆ.
FY2022-23ರಲ್ಲಿ 1,53,019 ಯುನಿಟ್ ರಫ್ತಿಗೆ ಹೋಲಿಸಿದರೆ, 2023-24ರಲ್ಲಿ 1,63,155 ಯುನಿಟ್‌ಗಳಿಗೆ ಅಂದರೆ ಶೇ.7ರಷ್ಟು ಹೆಚ್ಚಾಗಿದೆ. 2023-24ರ ಹಣಕಾಸು ವರ್ಷದಲ್ಲಿ 7.77 ಲಕ್ಷ ಯುನಿಟ್‌ಗಳ ಮಾರಾಟವು ಕಂಪನಿಯ ವೈವಿಧ್ಯಮಯ ಉತ್ಪನ್ನಗಳ ಸ್ವೀಕಾರಕ್ಕೆ ಸಾಕ್ಷಿಯಾಗಿದೆ ಎಂದು ಹುಂಡೈ ಮೋಟಾರ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ತರುಣ್ ಗಾರ್ಗ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತದಿಂದ ಗಂಟುಮೂಟೆ ಕಟ್ಟಲಿವೆಯೇ Petrol-Diesel ವಾಹನ ಕಂಪನಿಗಳು, Nitin Gadkari ಹೇಳಿದ್ದೇನು?
ಭಾರತದಲ್ಲಿ ಹುಂಡೈ
ಹುಂಡೈ ಪ್ರಸ್ತುತ ಭಾರತದಲ್ಲಿ 1,363 ಮಾರಾಟ ಕೇಂದ್ರಗಳು ಮತ್ತು 1,549 ಸೇವಾ ಕೇಂದ್ರಗಳನ್ನು ಹೊಂದಿದೆ ಎಂಬುದು ಗಮನಾರ್ಹ. ಕಂಪನಿಯ ಶ್ರೇಣಿಯಲ್ಲಿ 14 ವಾಹನಗಳಿದ್ದು, ಈ ಪೈಕಿ ಗ್ರಾಂಡ್ i10 ಹ್ಯಾಚ್‌ಬ್ಯಾಕ್, ವೆರ್ನಾ ಸೆಡಾನ್, ಕ್ರೆಟಾ SUV ಮತ್ತು ಕೋನಾ EV ಮಾದರಿಗಳು ಸೇರಿವೆ. ಭಾರತದಲ್ಲಿ ಇದರ ಅತ್ಯಂತ ದುಬಾರಿ ಕಾರು IONIQ 5 ಎಲೆಕ್ಟ್ರಿಕ್ SUV ಆಗಿದೆ. ಇದು ಭಾರತದಿಂದ 88 ದೇಶಗಳಿಗೆ ರಫ್ತು ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.