ಬ್ಯಾಂಕ್ ನಲ್ಲಿ FD ಮಾಡಿಸಿದವರಿಗೆ ಸಿಹಿ ಸುದ್ದಿ! ಫಿಕ್ಸೆಡ್ ಡೆಪಾಸಿಟ್ ಮೇಲೆ ಸಿಗುವುದು ಅಧಿಕ ಬಡ್ಡಿ
ಹಣ ಹೂಡಿಕೆಯ ಯೋಜನೆಗಳಲ್ಲಿ ಬಹುತೇಕ ಮಂದಿ ಬ್ಯಾಂಕ್ ಎಫ್‌ಡಿಯನ್ನು ನೆಚ್ಚಿಕೊಳ್ಳುತ್ತಾರೆ. ನೀವು ಕೂಡಾ ಬ್ಯಾಂಕ್ ಎಫ್‌ಡಿ ಮಾಡಿಸಿದ್ದೀರಿ ಎಂದಾದರೆ ಈ ಸುದ್ದಿಯನ್ನು ಓದಲೇ ಬೇಕು.
ಬೆಂಗಳೂರು : ಭವಿಷ್ಯ ಭದ್ರವಾಗಿರಬೇಕಾದರೆ ಹಣದಿಂದಲೇ ಹಣ ಗಳಿಸುವುದು ಉತ್ತಮ ಆಯ್ಕೆ. ಅಂದರೆ ಉತ್ತಮ ಬಡ್ಡಿ ಸಿಗುವ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಯಾವುದೇ ರೀತಿಯ ಆತಂಕ ಇಲ್ಲದೆ ಹಣ ಗಳಿಸುವುದು. ಹೀಗೆ ಹಣ ಹೂಡಿಕೆಯ ಯೋಜನೆಗಳಲ್ಲಿ ಬಹುತೇಕ ಮಂದಿ ಬ್ಯಾಂಕ್ ಎಫ್‌ಡಿಯನ್ನು ನೆಚ್ಚಿಕೊಳ್ಳುತ್ತಾರೆ. ನೀವು ಕೂಡಾ ಬ್ಯಾಂಕ್ ಎಫ್‌ಡಿ ಮಾಡಿಸಿದ್ದೀರಿ ಎಂದಾದರೆ ಈ ಸುದ್ದಿಯನ್ನು ಓದಲೇ ಬೇಕು.
ಎಫ್‌ಡಿ (ಬ್ಯಾಂಕ್ ಎಫ್‌ಡಿ) ಮೇಲಿನ ಹೆಚ್ಚಿನ ಬಡ್ಡಿಯ ಲಾಭವನ್ನು ಪಡೆಯಲು ಬಯಸಿದರೆ, ನಿಮಗಾಗಿ ಒಳ್ಳೆಯ ಸುದ್ದಿ ಇದೆ. ಇದೀಗ ಐಡಿಬಿಐ ಬ್ಯಾಂಕ್ ವಿಶೇಷ ನಿಶ್ಚಿತ ಠೇವಣಿ ಯೋಜನೆಯ ಗಡುವನ್ನು ವಿಸ್ತರಿಸಿದೆ. IDBI ಬ್ಯಾಂಕ್ ಗ್ರಾಹಕರಿಗೆ 375 ಮತ್ತು 444 ದಿನಗಳ ಸ್ಥಿರ ಠೇವಣಿಗಳನ್ನು ಒದಗಿಸುವ ಅಮೃತ್ ಮಹೋತ್ಸವ ಎಫ್‌ಡಿ ಎಂಬ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಈ ಮೊದಲು ಅದರ ಕೊನೆಯ ದಿನಾಂಕ 30 ಸೆಪ್ಟೆಂಬರ್ 2023 ಆಗಿತ್ತು. ಆದರೆ ಈಗ ಅದರ ಗಡುವನ್ನು ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ : ಹಳೆಯ ಪಿಂಚಣಿ ಯೋಜನೆ ಬಗ್ಗೆ ರಿಸರ್ವ್ ಬ್ಯಾಂಕ್ ಬಹು ದೊಡ್ಡ ಆದೇಶ : ಈಗ ರಾಜ್ಯ ಸರ್ಕಾರದ ಮುಂದಿರುವ ಆಯ್ಕೆ ?
ಐಡಿಬಿಐ ಬ್ಯಾಂಕ್ ನೀಡಿದ ಮಾಹಿತಿ :
ಗ್ರಾಹಕರು ಅಕ್ಟೋಬರ್ 31 ರವರೆಗೆ ಅಮೃತ್ ಮಹೋತ್ಸವ FD ಯಲ್ಲಿ ಹೆಚ್ಚಿನ ಬಡ್ಡಿಯ ಲಾಭವನ್ನು ಪಡೆಯಬಹುದು. ಅಮೃತ್ ಮಹೋತ್ಸವ FD ಯ ಹಬ್ಬದ ಕೊಡುಗೆಯನ್ನು 375 ಮತ್ತು 444 ದಿನಗಳವರೆಗೆ ಅಂದರೆ ಅಕ್ಟೋಬರ್ 31, 2023 ರವರೆಗೆ ವಿಸ್ತರಿಸಲಾಗಿದೆ ಎಂದು IDBI ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಯಾರು ಎಷ್ಟು ಬಡ್ಡಿ ಪಡೆಯುತ್ತಿದ್ದಾರೆ? :
ನಿಯಮಿತ, NRE ಮತ್ತು NRO ಗ್ರಾಹಕರು 444 ದಿನಗಳ ಅಮೃತ್ ಮಹೋತ್ಸವ FD ಯೋಜನೆಯಲ್ಲಿ ಶೇಕಡಾ 7.15 ರ ಬಡ್ಡಿದರದ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಬ್ಯಾಂಕ್ ಹೇಳಿದೆ. ಹಿರಿಯ ನಾಗರಿಕರು ಈ ಎಫ್‌ಡಿಯಲ್ಲಿ ಶೇಕಡಾ 7.65 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ, ಗ್ರಾಹಕರಿಗೆ ಅವಧಿಪೂರ್ವ ವಿತ್ ಡ್ರಾ ಮತ್ತು ಕ್ಲೋಸರ್ ಸೌಲಭ್ಯವನ್ನು ಕೂಡಾ ನೀಡಲಾಗಿದೆ.
ಇದನ್ನೂ ಓದಿ : ಚಿನ್ನದ ಬೆಲೆ 2,180 ರೂ. ಭರ್ಜರಿ ಇಳಿಕೆ: ಸಾರ್ವಕಾಲಿಕ ದರ ಕುಸಿತದ ಬಳಿಕ 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ?
375 ದಿನಗಳ ಅವಧಿಯ ಬಡ್ಡಿ :
ಸಾಮಾನ್ಯ ಗ್ರಾಹಕರು 375 ದಿನಗಳ ವಿಶೇಷ ಅವಧಿಯೊಂದಿಗೆ ಸ್ಥಿರ ಠೇವಣಿಗಳ ಮೇಲೆ ಶೇಕಡಾ 7.10 ರ ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯುತ್ತಿದ್ದಾರೆ. ಇದಲ್ಲದೆ, ಹಿರಿಯ ನಾಗರಿಕರು ಈ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇಕಡಾ 7.60 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ.
IDBI ಬ್ಯಾಂಕ್‌ನ ಇತ್ತೀಚಿನ FD ದರಗಳು :
07-30 ದಿನಗಳು - 3%
31-45 ದಿನಗಳು - 3.25%
46- 90 ದಿನಗಳು - 4%
91-6 ತಿಂಗಳುಗಳು - 4.5%
6 ತಿಂಗಳು 1 ದಿನದಿಂದ 270 ದಿನಗಳು - 5.75%
71 ದಿನಗಳಿಂದ 1 ವರ್ಷ - 6.25%
1 ವರ್ಷದಿಂದ 2 ವರ್ಷಗಳವರೆಗೆ (375 ದಿನಗಳು ಮತ್ತು 444 ದಿನಗಳನ್ನು ಹೊರತುಪಡಿಸಿ) - 6.8%
> 2 ವರ್ಷದಿಂದ 5 ವರ್ಷಗಳು - 6.5%
> 5 ವರ್ಷದಿಂದ 10 ವರ್ಷಗಳು - 6.25%
> 10 ವರ್ಷದಿಂದ 20 ವರ್ಷಗಳು - 4.8%
ತೆರಿಗೆ ಉಳಿತಾಯ FD 5 ವರ್ಷಗಳು - 6.5%
ಇದನ್ನೂ ಓದಿ : Hyundai ಕಾರುಗಳ ಮೇಲೆ ಬಂಪರ್ ಡಿಸ್ಕೌಂಟ್, ಈಗಲೇ ಮನೆಗೆ ತಂದರೆ 2 ಲಕ್ಷ ಉಳಿತಾಯ!
ಎಷ್ಟು ಬಡ್ಡಿ ಸಿಗುತ್ತಿದೆ? :
IDBI ಬ್ಯಾಂಕ್ ತನ್ನ FD ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, ಈ ದರಗಳು ಸೆಪ್ಟೆಂಬರ್ 15, 2023 ರಿಂದ ಜಾರಿಗೆ ಬರುತ್ತವೆ. IDBI ಬ್ಯಾಂಕ್ ಏಳು ದಿನಗಳಿಂದ ಐದು ವರ್ಷಗಳವರೆಗೆ ಪಕ್ವವಾಗುವ FD ಗಳ ಮೇಲೆ ಸಾಮಾನ್ಯ ಗ್ರಾಹಕರಿಗೆ 3% ರಿಂದ 6.8% ವರೆಗೆ ಮತ್ತು ಹಿರಿಯ ನಾಗರಿಕರಿಗೆ 3.5% ರಿಂದ 7.3% ವರೆಗೆ ಬಡ್ಡಿಯನ್ನು ನೀಡುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.