ಇಂತಹ ಪ್ಯಾನ್ ಕಾರ್ಡ್ ಹೊಂದಿರುವವರಿಗೆ 10 ಸಾವಿರ ರೂ.ಗಳ ದಂಡ
PAN Card: ಪ್ರತಿ ಹಣಕಾಸಿನ ವಹಿವಾಟಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಹಾಗಂತ ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದಿದ್ದರೆ ಅದು ನಿಮಗೆ ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಹುದು.
PAN: ಯಾವುದೇ ರೀತಿಯ ಹಣಕಾಸು ವಹಿವಾಟು ನಡೆಸಲು ಪ್ಯಾನ್ ಕಾರ್ಡ್ ಒಂದು ಅತ್ಯಮೂಲ್ಯ ದಾಖಲೆಯಾಗಿದೆ. ಆದರೆ, ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ಗಮನ ಹರಿಸುವುದು ತುಂಬಾ ಅಗತ್ಯ. ಇಲ್ಲದಿದ್ದರೆ, ಭವಿಷ್ಯದಲ್ಲಿ ನೀವು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಭಾರತದಲ್ಲಿ ಪ್ಯಾನ್ ಕಾರ್ಡ್ ಒಂದು ಅಮೂಲ್ಯ ದಾಖಲೆ ಆಗಿದ್ದರೂ ಕೂಡ ಯಾವುದೇ ನಾಗರೀಕರಿಗೆ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ, ಯಾವುದೇ ನಾಗರೀಕರು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದರೆ ಅದನ್ನು ನಕಲು ಪ್ಯಾನ್ ಕಾರ್ಡ್ ಎನ್ನಲಾಗುವುದು. ಇದರಿಂದ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ- Income Tax Return ಫೈಲ್ ಮಾಡುವ ಭರದಲ್ಲಿ ಹ್ಯಾಕರ್‌ಗಳಿಗೆ ಬಲಿಯಾಗದಿರಿ!
ಏನಿದು ನಕಲು ಪ್ಯಾನ್ ಕಾರ್ಡ್?
ಯಾವುದೇ ವ್ಯಕ್ತಿ ಎರಡು ಬಾರಿ ಅರ್ಜಿ ಸಲ್ಲಿಸಿದ್ದರೆ ಆತನಿಗೆ ಆದಾಯ ತೆರಿಗೆ ಇಲಾಖೆ ಎರಡು ಪ್ಯಾನ್ ಕಾರ್ಡ್ ನೀಡಿರಬಹುದು. ಕೆಲವರು ಸರ್ಕಾರವನ್ನು ವಂಚಿಸುವ ಅಥವಾ ಆದಾಯ ತೆರಿಗೆಯನ್ನು ಹಣವನ್ನು ಉಳಿಸುವ ಉದ್ದೇಶದಿಂದ ಒಂದಕ್ಕಿಂತ ಹೆಚ್ಚು ಪ್ಯಾನ್‌ಗಳಿಗೆ ಅರ್ಜಿ ಸಲ್ಲಿಸಿರುತ್ತಾರೆ.
ಹಾಗಂತ ಎರಡನ್ನೂ ಬಳಸಲು ಹೋಗಿ ಸಿಕ್ಕಿಬಿದ್ದರೆ ನೀವು ಬ್ಯಾಂಕಿಂಗ್ ವಹಿವಾಟಿನಲ್ಲಿ ಮಾತ್ರವಲ್ಲ ಸರ್ಕಾರದ ಪ್ರಯೋಜನವನ್ನು ಪಡೆಯುವಲ್ಲಿಯೂ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಾಸ್ತವವಾಗಿ, ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದಿರುವುದು ಸರ್ಕಾರದ ನಿಯಮಗಳ ಉಲ್ಲಂಘನೆ ಆಗಿದ್ದು, 10,000 ರೂ.ಗಳವರೆಗೆ ದಂಡವನ್ನು ಆಕರ್ಷಿಸುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272ಬಿ ಅಡಿಯಲ್ಲಿ ಈ ದಂಡವನ್ನು ವಿಧಿಸಲು ಅವಕಾಶವಿದೆ. ಇದನ್ನು ತಪ್ಪಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ.
ಇದನ್ನೂ ಓದಿ- ಸರ್ಕಾರಿ ನೌಕರರಿಗೆ ಡಬಲ್ ಗುಡ್ ನ್ಯೂಸ್: ಡಿಎ ಹೆಚ್ಚಳದೊಂದಿಗೆ ಈ ದರದಲ್ಲೂ ಏರಿಕೆ
ನಿಮ್ಮ ಬಳಿಯೂ ಕೂಡ ಒಂದಕ್ಕಿಂತ ಎರಡು ಪ್ಯಾನ್ ಕಾರ್ಡ್ ಇದ್ದರೆ ನೀವು ಮಾಡಬೇಕಿರುವ ಮೊಟ್ಟ ಮೊದಲ ಕೆಲಸ ಎಂದರೆ ಒಂದೇ ಒಂದು ಪ್ಯಾನ್ ಕಾರ್ಡ್ ಅನ್ನು ಮಾತ್ರ ಚಾಲ್ತಿಯಲ್ಲಿಟ್ಟುಕೊಂಡು ಉಳಿದ ಪ್ಯಾನ್ ಕಾರ್ಡ್‌ಗಳನ್ನು ರದ್ದುಗೊಳಿಸಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.